ಬೆಂಗಳೂರು: ಗೃಹಬಳಕೆ ವಿದ್ಯುತ್ ಮೀಟರ್ನ ವಾಣಿಜ್ಯ ಬಳಕೆಗೆ ಪರಿವರ್ತಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಇಇ ತೌಸಿಫ್ ಹಾಗೂ ಮೀಟರ್ ರೀಡರ್ ಶಿವು ಇಬ್ಬರುನ್ನ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಕಗ್ಗದಾಸನಪುರದ ಭುವನೇಶ್ವರಿ ನಗರದ ಮನೆಯೊಂದಕ್ಕೆ ಗೃಹಬಳಕೆ ವಿದ್ಯುತ್ ಮೀಟರ್ನ ವಾಣಿಜ್ಯ ಬಳಕೆಗೆ ಪರಿವರ್ತಿಸಲು 1.10 ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಇಂದು ಕಚೇರಿ ಬಳಿಯ ಭುವನೇಶ್ವರಿ ದೇವಾಲಯ ಬಳಿ 1.1 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಬಂಧಿತ ಶಿವು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ಗುತ್ತಿಗೆ ಆಧಾರದ ಮೇರೆಗೆ ಮೀಟರ್ ರೀಡರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.