ETV Bharat / state

ವಿದ್ಯುತ್ ಬಿಲ್​ನಲ್ಲಿ ಯಾವುದೇ ಗೊಂದಲ ಇಲ್ಲ: ಬೆಸ್ಕಾಂ ಅಧಿಕಾರಿಗಳ ಸ್ಪಷ್ಟನೆ - ವಿದ್ಯುತ್​ ಬಿಲ್​​ ಏರಿಕೆ ಗೊಂದಲ ಸುದ್ದಿ

ವಿದ್ಯುತ್ ದರದಲ್ಲಿ ಯಾವುದೇ ಏರಿಕೆ ಮಾಡಿಲ್ಲ ಎಂದು ಬೆಸ್ಕಾಂ ಎಂಡಿ ರಾಜೇಶ್ ಗೌಡ ಹಾಗೂ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸ್ಪಷ್ಟಪಡಿಸಿದ್ದಾರೆ.

bescom md pressmeet
ಬೆಸ್ಕಾಂ ಅಧಿಕಾರಿಗಳ ಸ್ಪಷ್ಟನೆ
author img

By

Published : May 13, 2020, 8:20 PM IST

ಬೆಂಗಳೂರು: ಬೆಸ್ಕಾಂ ಜನರಿಗೆ ಯದ್ವಾತದ್ವಾ ಬಿಲ್ ನೀಡಿಲ್ಲ. ಅಲ್ಲದೆ ವಿದ್ಯುತ್ ದರದಲ್ಲಿ ಯಾವುದೇ ಕಾರಣಕ್ಕೂ ಏರಿಕೆ ಮಾಡಿಲ್ಲ ಎಂದು ಬೆಸ್ಕಾಂ ಎಂಡಿ ರಾಜೇಶ್ ಗೌಡ ಹಾಗೂ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಹೇಳಿದ್ದಾರೆ.

ಬೆಸ್ಕಾಂ ಅಧಿಕಾರಿಗಳ ಸ್ಪಷ್ಟನೆ

ಲಾಕ್​​ಡೌನ್ ಇದ್ದ ಕಾರಣ ಮಾರ್ಚ್ ಹಾಗೂ ಏಪ್ರಿಲ್ 2 ತಿಂಗಳ ಬಿಲ್​ಅನ್ನು ಮೇ ತಿಂಗಳಿನಲ್ಲಿ ಬೆಸ್ಕಾಂ ನೀಡಿತ್ತು. ಆದ್ರೆ ಬಿಲ್​​ನಲ್ಲಿ ತೀವ್ರ ಹೆಚ್ಚಳವಾಗಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ಇಂದು ಬೆಸ್ಕಾಂ ಕಚೇರಿಯಲ್ಲಿ ಬೆಸ್ಕಾಂ ಎಂಡಿ ಹಾಗೂ ಇಂಧನ ಇಲಾಖೆ ಅಪರ ಕಾರ್ಯದರ್ಶಿ ಸುದ್ದಿಗೋಷ್ಠಿ‌ ನಡೆಸಿ ವಿದ್ಯುತ್ ಬಿಲ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಲಾಕ್​​​ಡೌನ್ ಇರುವುದರಿಂದ ಎಲ್ರೂ ಮನೆಯಲ್ಲಿ ಇದ್ದ ಕಾರಣ ಶೇ. 30% ವಿದ್ಯುತ್ ಬಳಕೆ ಹೆಚ್ಚಾಗಿದೆ. ಹಾಗಾಗಿ ಬಿಲ್​ನಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದ್ರು. ಅದನ್ನು ಹೊರತುಪಡಿಸಿ ನಾವು ಜನರಿಗೆ ಮನಬಂದಂತೆ ಬಿಲ್ ನೀಡಿಲ್ಲ‌. ಇದಲ್ಲದೆ ಸ್ಲ್ಯಾಬ್​​​ನಲ್ಲಿ ಯಾವುದೇ ತಪ್ಪು ಮಾಡಿಲ್ಲ. ಸಾಮಾನ್ಯವಾಗಿ ಮೊದಲ ಹಂತದಲ್ಲಿ ಸ್ಲ್ಯಾಬ್​ನಲ್ಲಿ 30 ಯೂನಿಟ್​ಗೆ ಕನಿಷ್ಠ ದರ ನಿಗದಿ ಮಾಡಲಾಗುತ್ತದೆ. ಆದ್ರೆ ಲಾಕ್​ಡೌನ್ ಇದ್ದ ಕಾರಣ ಎರಡು ತಿಂಗಳ ಬಿಲ್ ಒಂದೇ ಬಿಲ್​ನಲ್ಲಿ ಸೇರಿರುವ ಕಾರಣ ಕನಿಷ್ಠ ಸ್ಲ್ಯಾಬ್​ಅನ್ನು 60 ಯೂನಿಟ್​ಗೆ ನಿಗದಿ ಮಾಡಿ ಬಿಲ್ ನೀಡಿದ್ದೇವೆ. ಹಾಗಾಗಿ ಸ್ಲ್ಯಾಬ್ ಹೆಸರಲ್ಲಿ ಹೆಚ್ಚುವರಿ ಬಿಲ್ ಬಂದಿದೆ‌ ಎಂಬುದು ತಪ್ಪು ಮಾಹಿತಿ ಎಂದು ಸ್ಪಷ್ಟಪಡಿಸಿದ್ದಾರೆ.

ನಾವು ಜನರ ಈ‌ ಹಿಂದಿನ ಅಂದರೆ ಡಿಸೆಂಬರ್‌, ಜನವರಿ, ಫೆಬ್ರವರಿ ಈ ಮೂರು ತಿಂಗಳ ಬಿಲ್ ಆಧಾರದಲ್ಲಿ ಸರಾಸರಿ ಬಿಲ್ ನೀಡಿದ್ದೇವೆ. ಅದ್ದರಿಂದ ನಾವು ವಿದ್ಯುತ್ ಬಿಲ್​ನಲ್ಲಿ ಹೆಚ್ಚು ಶುಲ್ಕ ನಿಗದಿ ಮಾಡಿಲ್ಲ. ಅಲ್ಲದೆ ಲಾಕ್​ಡೌನ್ ಆಗಿದ್ದ ವೇಳೆ ಊರಿಗೆ ಹೋಗಿರುವ ಮನೆಗಳ ಬಿಲ್​ನಲ್ಲಿ ಡೋರ್ ಲಾಕ್ ಎಂದು ನಮೂದಿಸಲಾಗಿದೆ. ಒಂದು ವೇಳೆ ವಿದ್ಯುತ್ ಬಿಲ್​ನಲ್ಲಿ ಹೆಚ್ಚಾಗಿದೆ ಎಂದು ಅನಿಸಿದ್ರೆ ಅಂಥವರು ಅವರ ಮೀಟರ್ ರೀಡಿಂಗ್ ಚೆಕ್​​ ಮಾಡಿ, ಆರ್​.ಆರ್​. ನಂ ಹಾಗೂ ಮೀಟರ್ ರೀಡಿಂಗ್​ಅನ್ನು ನಮಗೆ ವಾಟ್ಸಪ್​​ ಮಾಡಿದ್ರೆ ನಮ್ಮ ಅಧಿಕಾರಿಗಳು ಅಂತಹ ಮೀಟರ್​ಗಳನ್ನು ಮತ್ತೆ ರೀಡಿಂಗ್ ಚೆಕ್ ಮಾಡಲಿದ್ದಾರೆ. ಅಲ್ಲದೆ ಗೊಂದಲ ಇದ್ದರೆ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆ ಮಾಡಿ ಗೊಂದಲ ಪರಿಹರಿಸಿಕೊಳ್ಳಬಹುದು. ಹಾಗೇ ಬಿಲ್ ಕಟ್ಟಲು ಜೂನ್​ವರೆಗೂ ಅವಕಾಶ ಇದೆ. ಜೂನ್ ಅಂತ್ಯದವರೆಗೂ ಬಿಲ್ ಕಟ್ಟದಿದ್ದರೂ ನಾವು ವಿದ್ಯುತ್ ಕಡಿತ ಮಾಡುವುದಿಲ್ಲ. ಜೊತೆಗೆ ಒಂದು ವೇಳೆ ಮೀಟರ್ ರೀಡಿಂಗ್​ನಲ್ಲಿ ವ್ಯತ್ಯಾಸ ಆಗಿ ಹೆಚ್ಚು ಬಿಲ್ ಬಂದಿದ್ದು, ಈಗಾಗಲೇ ಆ ಬಿಲ್ ಕಟ್ಟಿದ್ರೆ ಹೆಚ್ಚುವರಿಯಾಗಿ ಕಟ್ಟಿರುವ ಮೊತ್ತವನ್ನು ಮುಂದಿನ ಬಿಲ್​ನಲ್ಲಿ ಕಡಿತ ಮಾಡುವುದಾಗಿ ಬೆಸ್ಕಾಂ ಎಂಡಿ ರಾಜೇಶ್ ಗೌಡ ಹಾಗೂ ಇಂಧನ ಇಲಾಖೆ ಅಪರ ಕಾರ್ಯದರ್ಶಿ ಮಹೇಂದ್ರ ಜೈನ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.