ETV Bharat / state

ಬಟ್ಟೆ ವ್ಯಾಪಾರಿ ಕೊಲೆ ಪ್ರಕರಣ: ಆರೋಪಿ ಮಗಳಿಂದ ಸ್ಫೋಟಕ ಮಾಹಿತಿ ಬಹಿರಂಗ - A person Killed in Bengaluru

ನಗರದ ರಾಜಾಜಿ ನಗರದಲ್ಲಿ ನಡೆದ ಬಟ್ಟೆ ವ್ಯಾಪಾರಿಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಜೈಕುಮಾರ್ ಮಗಳು ಸೇರಿದಂತೆ ಇಬ್ಬರು ಆರೋಪಿಗಳನ್ನು ಪೊಲಿಸರು ಬಂಧಿಸಿದ್ದು, ಬಂಧಿತರಿಂದ ಕೊಲೆಯ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಪೊಲೀಸರು ಬಾಯಿಬಿಡಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿದ ಪೊಲೀಸರು
author img

By

Published : Aug 20, 2019, 8:44 AM IST

ಬೆಂಗಳೂರು: ಬಟ್ಟೆ ವ್ಯಾಪಾರಿಯನ್ನು ಸ್ನಾನದ ಕೊಣೆಯಲ್ಲಿ ಬೆಂಕಿ ಹಾಕಿ ಸುಟ್ಟ ಪ್ರಕರಣ ಇದೀಗ ರೋಚಕ ತಿರುವು ಪಡೆದಿದ್ದು, ಅಪ್ಪನನ್ನು ಮಗಳೇ ಸುಪಾರಿ ಕೊಟ್ಟು ಕೊಲ್ಲಿಸಿರುವ ಸ್ಫೋಟಕ ವಿಚಾರ ಬಯಲಾಗಿದೆ.

ನಗರದ ರಾಜಾಜಿನಗರ 5ನೇ ಬ್ಲಾಕ್ ನಿವಾಸಿ ಬಟ್ಟೆ ವ್ಯಾಪಾರಿ ಜಯಕುಮಾರ್ ತನ್ನ ಪತ್ನಿ ಪೂಜಾ ದೇವಿ ಹಾಗೂ ಮಕ್ಕಳ ಜೊತೆ ವಾಸವಿದ್ದರು. ಮನೆಯ ಸ್ನಾನದ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಜಯಕುಮಾರ್ ಕೊಲೆಯಾಗಿದ್ದರು. ಈ ಬಗ್ಗೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಗೊಂಡ ಪೊಲೀಸರು ವಿಚಾರಣೆ ವೇಳೆ ಅನುಮಾನಗೊಂಡು ಕೊಲೆಯಾದ ಜಯಕುಮಾರ್ ಮಗಳು ಹಾಗೂ ಆಕೆಯ ಸ್ನೇಹಿತನನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದರು. ಆಗ ಮಗಳು ಬಾಯ್ಬಿಟ್ಟ ವಿಚಾರ ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ.

ಆರೋಪಿಗಳನ್ನು ಬಂಧಿಸಿದ ಪೊಲೀಸರು

ಹೆಚ್ಚಿನ ಓದಿಗಾಗಿ: ಡ್ರಗ್ಸ್‌ ಸೇವಿಸಬೇಡ ಎಂದ ಅಪ್ಪನಿಗೆ ಮಧ್ಯೆರಾತ್ರಿ ಕೊಳ್ಳಿ ಇಟ್ಟಳಾ ಪುತ್ರಿ?!

ವಿಚಾರಣೆ ವೇಳೆ ಸ್ಫೋಟಕ‌ ಮಾಹಿತಿ ಬಹಿರಂಗ:

ಕೊಲೆಯಾದ ಜಯಕುಮಾರ್ ಮಗಳು 9ನೇ ತರಗತಿ ವಿದ್ಯಾರ್ಥಿನಿ. ಪ್ರವೀಣ್ ಎಂಬಾತನ ಜೊತೆ ಹೆಚ್ಚು ಸುತ್ತಾಡುತ್ತಿದ್ದಳು. ಮತ್ತು ಕೆಲ ಗೆಳೆಯರ ಸಹವಾಸದಿಂದ ಮಾದಕ ವಸ್ತುಗಳ ದಾಸಿಯಾಗಿದ್ದಳು ಎನ್ನಲಾಗಿದೆ. ಮಗಳು ದಾರಿ ತಪ್ಪಿರುವುದನ್ನು ಗಮನಿಸಿದ ಅಪ್ಪ, ಮೊಬೈಲ್ ಸೇರಿದಂತೆ ಇತರ ವಿಚಾರದಲ್ಲಿ ಸ್ಟ್ರಿಕ್ಟ್ ಮಾಡಿದ್ದರಂತೆ. ಶಿಸ್ತಿನಿಂದ ಇರುವಂತೆ ಬುದ್ಧಿವಾದ ಹೇಳಿದ್ದರು. ಇದೇ ವಿಚಾರಕ್ಕೆ ಮನೆಯಲ್ಲಿ ಕಳೆದ ಆರು ತಿಂಗಳಿಂದ ಅಪ್ಪ ಮಗಳ ನಡುವೆ ಗಲಾಟೆಯಾಗಿತ್ತು. ಸರಿಯಾದ ಸಮಯಕ್ಕೆ ಮನೆಗೆ ಬಾ‌, ಗೆಳೆಯರ ಸಹವಾಸ ಕಡಿಮೆ ಮಾಡುವಂತೆ ಸೂಚನೆ ನೀಡಿದ ಕಾರಣಕ್ಕೆ ಅಪ್ಪನ ಹತ್ಯೆ ಮಾಡಲು ಚಾಲಾಕಿ ಮಗಳು ಸ್ಕೆಚ್​ ಹಾಕಿದ್ದಳಂತೆ.

ಹತ್ಯೆಗೆ ಸಹಾಯ ಮಾಡಿದ ಖತರ್ನಾಕ್ ಸ್ನೇಹಿತ:

ಕಳೆದ ಆರು ತಿಂಗಳಿಂದ ಅಪ್ಪನ ಹತ್ಯೆಯ ಬಗ್ಗೆ ಸ್ನೇಹಿತನ ಜೊತೆ ಸೇರಿ ಮಗಳು ಸ್ಕೆಚ್ ಹಾಕಿದ್ದಳು. ಹೀಗಾಗಿ ಅಮ್ಮ‌ ಮನೆಯಲ್ಲಿ ಇಲ್ಲಾದಾಗ, ಯಾವುದೇ ಅನುಮಾನ ಬಾರದ ರೀತಿ ಕೊಲೆ ಮಾಡಲು ಪ್ಲಾನ್‌ ಮಾಡಿ ಪ್ರಿಯಕರ ಪ್ರವೀಣ್ ಜೊತೆ ಮಾತುಕತೆ ನಡೆಸಿದ್ದಳು. ಕಳೆದ ಎರಡು ದಿನ ಹಿಂದೆ ಜಯಕುಮಾರ್ ಪತ್ನಿ ಪುದುಚೇರಿಗೆ ಹೋಗಿದ್ದರು. ಅಮ್ಮ ಪುದುಚೇರಿಗೆ ಹೋಗಿದ್ದಾರೆ, ಅಪ್ಪ ಒಬ್ಬರೇ ಇರುವುದಾಗಿ ಸ್ನೇಹಿತನಿಗೆ ಹೇಳಿ ಟ್ಯೂಷನ್ ನೆಪದಲ್ಲಿ ಹೊರ ಹೋಗಿದ್ದಳು. ಇನ್ನು‌ ಮಗಳು ಎಷ್ಟೊತ್ತಾದ್ರು ಬಾರದೆ ಇರುವುದನ್ನು ನೋಡಿದ ಜಯಕುಮಾರ್, ಮಗಳಿಗೆ ಏನೇ ಬುದ್ಧಿವಾದ ಹೇಳಿದ್ರು ಬದಲಾಗಲಿಲ್ಲ ಎಂದುಕೊಂಡು ಮಲಗಿದ್ದರು.

ರಾತ್ರಿ ಒಂದು ಗಂಟೆಗೆ ಸುಮಾರಿಗೆ ಮಾದಕ ವಸ್ತುವಿನ ಅಮಲಿನಲ್ಲಿ ತೇಲಿಕೊಂಡು‌ ಮನೆಗೆ ಬಂದ ಮಗಳು ಹಾಗೂ ಆಕೆಯ ಸ್ನೇಹಿತ, ಜಯಕುಮಾರ್​ ಮಲಗಿರುವುದ ಖಚಿತಪಡಿಸಿಕೊಂಡಿದ್ದಾರೆ. ಹತ್ಯೆಗೆಂದು ಖರೀದಿಸಿ ತಂದಿದ್ದ ಚಾಕುವಿನಿಂದ ಗಾಢ ನಿದ್ರೆಯಲ್ಲಿದ್ದ ಜಯಕುಮಾರ್​ಗೆ ಬರ್ಬರವಾಗಿ ಆರು ಬಾರಿ ಕುತ್ತಿಗೆಗೆ ಇರಿದು ಹತ್ಯೆ ಮಾಡಿದ್ದಾರೆ. ಬೆಡ್ ಸಂಪೂರ್ಣ ರಕ್ತಸಿಕ್ತವಾದ ಕಾರಣ ಹೆದರಿದ ಆರೋಪಿ ಪ್ರವೀಣ್ ಮತ್ತು ಮಗಳು, ಜಯಕುಮಾರ್​​ನ ದೇಹವನ್ನು ಬಚ್ಚಿಡಲು ಪ್ರಯತ್ನ ಪಟ್ಟಿದ್ದಾರೆ. ಅದಕ್ಕೂ ಮೊದಲು ಸಂಪೂರ್ಣ ರೂಮ್ ಸ್ವಚ್ಛ ಮಾಡಲು ಯತ್ನ ಮಾಡಿದ್ದಾರೆ. ಆದರೆ ಅವರ ಯಾವುದೇ ಪ್ರಯತ್ನಗಳು ಫಲಿಸುವುದಿಲ್ಲ ಎಂದು ಗೊತ್ತಾಗಿ ಹೊಸ ಸ್ಕೆಚ್ ಮಾಡಿ ತಡರಾತ್ರಿ ಮೃತದೇಹ ಸುಡಲು ಪ್ಲಾನ್ ಮಾಡಿ ಪೆಟ್ರೋಲ್ ತಂದು ಮನೆಯ ಸ್ನಾನದ ಕೊಠಡಿಯಲ್ಲಿ ದೇಹ ಸುಡಲು ವ್ಯವಸ್ಥೆ ಮಾಡಿದ್ದಾರೆ.

ನಂತರ ದೇಹವನ್ನು ಸ್ನಾನದ ಕೊಠಡಿಗೆ ಶಿಪ್ಟ್ ಮಾಡಿ ಪೆಟ್ರೊಲ್ ಸುರಿದು ಬೆಂಕಿ ಇಟ್ಟಿದ್ದಾರೆ. ಪೆಟ್ರೋಲ್ ಹಾಕುವಾಗ ಆರೋಪಿಗಳಿಬ್ಬರಿಗೂ ಬೆಂಕಿ ತಗುಲಿ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಮನೆಯಲ್ಲಿ ಬರ್ತಿದ್ದ ಹೊಗೆ ನೋಡಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆಗ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Intro:ಮಗಳ ಹುಚ್ಚಾಟಕ್ಕೆ ಅಪ್ಪನಿಂದ ಬುದ್ದಿ ಮಾತು
ಬುದ್ದಿ ಮಾತು ಹೇಳಿದ ಅಪ್ಪನಿಗೆ ಇಟ್ಟಲು ಅಪ್ರಾಪ್ತೆ
ಬೈಟ್ ಡಿಸಿಪಿ ಶಶಿಕುಮಾರ್
ಬಟ್ಟೆ ವ್ಯಾಪಾರಿಯನ್ನ ಸ್ನಾನದ ಕೊಣೆಯಲ್ಲಿ ಬೆಂಕಿ ಹಾಕಿ ಸುಟ್ಟ ಪ್ರಕರಣ ಸಂಬಂಧಿಸಿದಂತೆ ಇದೀಗ ಪ್ರಕರಣದಲ್ಲಿ ರೋಚಕ ತಿರುವು ಪಡೆದಿದೆ.‌ಅಪ್ಪನನ್ನೇ ಮಗಳೇ ಸುಪಾರಿ ಕೊಟ್ಟು ಕೊಂದಿರುವ ವಿಚಾರ ಇದೀಗ ತನಿಖೆಯಲ್ಲಿ ಬಯಾಲಾಗಿದ್ದು ಇದೀಗ
ಪ್ರಕರಣದ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.

ರಾಜಾಜಿನಗರದ 5ನೇ ಬ್ಲಾಕ್ ನಿವಾಸಿ ಜೈಕುಮಾರ್ ಆಗಿದ್ದು ತನ್ನ ಪತ್ನಿ ಪೂಜಾ ದೇವಿ ಹಾಗೂ 9ನೇ ತರಗತಿ ವ್ಯಾಸಂಗ ಮಾಡುವ ಮಗಳು ಹಾಗೂ ಪುತ್ತನ ಜೊತೆ ವಾಸವಿದ್ರು.. ನಿನ್ನೆ ಜೈಕುಮಾರ್ ಮನೆಯಲ್ಲಿ ಕೊಲೆಯಾದ ವಿಚಾರ ತಿಳಿದು ರಾಜಾಜಿನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಲಾಗಿದ್ದು ಪೊಲಿಸರು ಅನುಮಾನಸ್ಪದಾವಾಗಿ ಮಗಳು ಹಾಗೂ ಮಗಳ ಜೊತೆ ಯಾವಾಗಲು ಸುತ್ತಾಡುತ್ತಿದ್ದ ಪ್ರಿಯಕರನ ವಶಕ್ಕೆ ಪಡೆದು ತನೀಕೆ ಮಾಡಿದಾಗ ಸತ್ಯಾಂಶ ಬಯಾಲಾಗಿದೆ.

ವಿಚಾರಣೆ ವೇಳೆ ಸ್ಪೋಟಕ‌ ಮಾಹಿತಿ ಬಹಿರಂಗ

9ನೇ ತರಗತಿ ಓದುತ್ತಿದ್ದ ಮಗಳಿಗೆ ಅಪ್ಪ ಜೈಕುಮಾರ್ ಶಿಸ್ತಿನಿಂದ ಇರುವಂತೆ ಹೇಳಿದ್ರು. ಯಾಕಂದ್ರೆ ಮಗಳು ಪ್ರವೀಣ್ ಜೊತೆ ಓಡಾಟ ಹೆಚ್ಚು ಮಾಡಿದ್ಲು. ಗೆಳೆಯರ ಸಹವಾಸದಿಂದ ಮಾದಕ ವಸ್ತುಗಳ ದಾಸಿಯಾಗಿದ್ದ ಮಗಳು ದಾರಿ ತಪ್ಪಿರುವುದನ್ನ ನೋಡಿ ಮೊಬೈಲ್ ಸೇರಿದಂತೆ ಇತರ ವಿಚಾರದಲ್ಲಿ ಸ್ಟ್ರಿಕ್ಟ್ ಮಾಡಿದ್ದರು. ಇದೇ ವಿಚಾರಕ್ಕೆ ಮನೆಯಲ್ಲಿ ಕಳೆದ ಆರು ತಿಂಗಳಿಂದ ಗಲಾಟೆ ಯಾಗಿತ್ತು. ಟೈಮ್ ಟು ಟೈಮ್ ಮನೆಗೆ ಬಾ‌ಗೆಳೆಯರ ಸಹವಾಸ ಕಡಿಮೆ ಮಾಡುವಂತೆ ಸೂಚನೆ ನೀಡಿದ ಕಾರಣಕ್ಕೆ ಅಪ್ಪನ ಹತ್ಯೆ ಮಾಡಲು ಚಾಲಕಿ ಮಗಳು ಸ್ಕೇಚ್ ಹಾಕಿದ್ದಳು.

ಹತ್ಯೆಗೆ ಸಹಾಯ ನೀಡಿದ ಖತರ್ನಾಕ್ ಪ್ರಿಯಕರ

ಕಳೆದ ಆರು ತಿಂಗಳಿಂದ ಅಪ್ಪನ ಹತ್ಯೆಯ ಬಗ್ಗೆ ಪ್ರಿಯಕರನ ಜೊತೆ ಸ್ಕೆಚ್ ಹಾಕಿದ್ಲು. ಹಿಗಾಗಿ ಅಮ್ಮ‌ ಮನೆಯಲ್ಲಿ ಇಲ್ಲಾದಾಗ, ಯಾವುದೇ ಅನುಮಾನ ಬಾರದೆ ಕೊಲೆ ಮಾಡಲು ಪ್ಲಾನ್‌ಮಾಡಿ ಪ್ರಿಯಕರ ಪ್ರವೀಣ್ ಜೊತೆ ಮಾತುಕತೆ ನಡೆಸಿದ್ರು..
ಕಳೆದ ಎರಡು ದಿನ ಹಿಂದೆ ಜಯಕುಮಾರ್ ಪತ್ನಿ ಪುದುಚೇರಿಗೆ ಹೋಗಿದ್ರು ಅಮ್ಮ ಪುದುಚೇರಿಗೆ ಹೋಗಿದ್ದಾರೆ, ಅಪ್ಪ ಒಬ್ಬರೆ ಇರುವುದಾಗಿ ಪ್ರಿಯಕರನಿಗೆ ಹೇಳಿ ಟ್ಯೂಷನ್ ನೆಪದಲ್ಲಿ ಹೊರ ಹೋಗಿದ್ಲು. ಇನ್ನು‌ಮಗಳು ಎಷ್ಟೊತ್ತಾದ್ರುಬಾರದೆ ಇರುವುದನ್ನ ನೋಡಿದ ಜಯಕುಮಾರ್ ಮಗಳಿಗೆ ಏನೇ ಬುದ್ದಿವಾದ ಹೇಳಿದ್ರು ಬದಲಾಗಲಿಲ್ಲ ಎಂದು ಕೊಂಡು ಮಲಗಿದ್ದರು

ಆದ್ರೆ ಅಪ್ರಾಪ್ತೆ ಮಗಳು ಹಾಗೂ ಪ್ರಿಯಕರ ಮಾದಕ ವಸ್ತುವಿನ ಅಮಲಿನಲ್ಲಿ ತೇಲಿಕೊಂಡು‌ ಒಂದು ಗಂಟೆಗೆ ಸುಮಾರಿಗೆ ಮನೆಗೆ ಬಂದು ಅಪ್ಪ ಮಲಗಿರುವುದ ಕನ್ಫಾರ್ಮ್ ಮಾಡಿಕೊಂಡು
ಮನೆಗೆ ಬರುವ ಮೊದಲೆ ಆರೋಪಿಗಳು ಜಯಕುಮಾರ್ ಹತ್ಯೆಗೆಂದು ಹೊಸ ಚಾಕು ಖರೀದಿ ಮಾಡಿ ತಂದಿದ್ರು.
ಜಯಕುಮಾರ್ ಗಾಡನಿದ್ರೆಯಲ್ಲಿದ್ದಾಗ ಬರ್ಬರವಾಗಿ ಆರು ಬಾರಿ ಚಾಕುವಿನಿಂದ ಕತ್ತನ್ನ ಇರಿದು ಹತ್ಯೆ ಮಾಡಿದ್ರು. ಬೆಡ್ ಫುಲ್ ಬ್ಲಡ್ ಆದಾ ಕಾರಣ ಹೆದರಿದ ಆರೋಪಿ ಪ್ರವೀಣ್ ಮತ್ತು ಮಗಳು
ಹತ್ಯೆಯಾದ ಜಯಕುಮಾರ್ ನ ಬಾಡಿ ಎಸ್ಕೇಪ್ ಮಾಡಲು ಯತ್ನ ಪಟ್ಟರು.ಅದಕ್ಕು ಮೊದಲು ಸಪೂರ್ಣ ರೂಮ್ ಕ್ಲಿನ್ ಮಾಡಲು ಯತ್ನ ಮಾಡಿದಾಗ ಅದು ಆಗೊದಿಲ್ಲ ಎಂದು ಗೊತ್ತಾಗಿ ಹೊಸ ಸ್ಕೆಚ್ ಮಾಡಿ ತಡ ರಾತ್ರಿ ಬಾಡಿ ಸುಡಲು ಪ್ಲಾನ್ ಮಾಡಿ ಪೆಟ್ರೊಲ್ ತಂದು
ಮನೆಯ ಬಾತ್ ರೂಮ್ ನಲ್ಲಿ ಬಾಡಿ ಬರ್ನ್ ಮಾಡಲು ರೆಡಿ ಮಾಡಿದ್ದಾರೆ.

ನಂತ್ರ ಬಾಡಿ ಬಾತ್ ರೂಮ್ಗೆ ಶಿಪ್ಟ್ ಮಾಡಿ ನಂತ್ರ ಪೆಟ್ರೊಲ್ ಸುರಿದು ಬೆಂಕಿ ಇಟ್ಟಿದ್ದಾರೆ. ಪೆಟ್ರೊಲ್ ಹಾಕುವಾಗ ಆರೋಪಿಗಳ ಮೈಮೇಲು ಪೆಟ್ರೋಲ್ ಚೆಲ್ಲಿದ್ದು ಆರೋಪಿಗಳಿಬ್ಬರಿಗು ಬೆಂಕಿ ತಗುಲಿ ಸಣ್ಣಪುಟ್ಟ ಗಾಯಗಳಾಗಿದೆ. ಸದ್ಯ ಸ್ಥಳೀಯರು ಮನೆಯಲ್ಲಿ ಬರ್ತಿದ್ದ ಹೊಗೆ ನೋಡಿ ಅಗ್ನಿಶಾಮಕ ಸಿಬ್ವಂದಿಗಳಿಗೆ ಮಾಹಿತಿ ನೀಡಿದ್ರಿಂದ ಈ ವಿಚಾರ ಬೆಳಕಿಗೆ ಬಂದಿದ್ದು ಸದ್ಯ ಆರೋಪಿಗಳನ್ನ ವಶ ಪಡಿಸಿ ತನೀಕೆ ಮುಂದುವರೆದಿದೆ

Body:KN_BNG_02_MURDER_7204498Conclusion:KN_BNG_02_MURDER_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.