ETV Bharat / state

ರಾಜಧಾನಿಯಲ್ಲಿ ಅನ್​​ಲಾಕ್ ಪ್ರಾರಂಭ: ತುಂತುರು ಮಳೆಯಲ್ಲಿ ಸಿಟಿ ಜನರ ವಾಯುವಿಹಾರ - Bangalore

ಪಾರ್ಕ್​ಗಳಲ್ಲಿ ವಾಯುವಿಹಾರಕ್ಕೆ ಸರ್ಕಾರ ಅವಕಾಶ ನೀಡಿದೆ. ಹೀಗಾಗಿ ತುಂತುರು ಮಳೆಯಲ್ಲಿಯೂ ಜನರು ಸಾಮಾಜಿಕ ಅಂತರದೊಂದಿದೆ ವಾಯುವಿಹಾರ ನಡೆಸುತ್ತಿದ್ದರು.

Bangalore
ಪಾರ್ಕ್​ಗಳಲ್ಲಿ ವಾಯುವಿಹಾರಕ್ಕೆ ಅವಕಾಶ
author img

By

Published : Jun 14, 2021, 11:20 AM IST

ಬೆಂಗಳೂರು: ಇಂದಿನಿಂದ ರಾಜಧಾನಿಯಲ್ಲಿ ಮಿನಿ ಅನ್​​ಲಾಕ್ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳ ಮನೆ ವಾಸಕ್ಕೆ ಜನರಿಗೆ ಇಂದಿನಿಂದ ಮುಕ್ತಿ ಸಿಕ್ಕಂತಾಗಿದೆ. ಪಾರ್ಕ್​ಗಳಲ್ಲಿ ವಾಯುವಿಹಾರಕ್ಕೆ ಸರ್ಕಾರ ಅವಕಾಶ ನೀಡಿದ್ದು, ಬೆಳಿಗ್ಗೆ 6 ಗಂಟೆಯಿಂದಲೇ ಪಾರ್ಕ್​ಗಳು ಓಪನ್ ಆಗಿವೆ.

ತುಂತುರು ಮಳೆಯಲ್ಲಿ ಸಿಟಿ ಜನರ ವಾಯುವಿಹಾರ..

ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ಹಲವು ಪ್ರಮುಖ ಉದ್ಯಾನವನಗಳತ್ತ ಮುಖಮಾಡಿರುವ ಜನ ವಾಕಿಂಗ್ ಮಾಡಲು ಮುಂಜಾನೆಯಿಂದಲೇ ಸೇರಿದ್ದರು. ಮಾಸ್ಕ್, ಸಾಮಾಜಿಕ ಅಂತರದೊಂದಿಗೆ ಉದ್ಯಾನವನಗಳತ್ತ ಜನರು ಆಗಮಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬೆಳಗ್ಗೆ 10 ಗಂಟೆವರೆಗೆ ಪಾರ್ಕ್​ನಲ್ಲಿ ವಾಯು ವಿಹಾರ ಹಾಗೂ ವ್ಯಾಯಾಮಗಳಲ್ಲಿ ತೊಡಗಿಕೊಂಡಿದ್ದಾರೆ.

ಕೋವಿಡ್ ನಿಯಮ ಪಾಲಿಸುವಂತೆ ನೋಟಿಸ್ :

ಇಂದಿನಿಂದ ರಾಜ್ಯ ಸರ್ಕಾರ ಬೆಂಗಳೂರು ಸೇರಿದಂತೆ 20 ಜಿಲ್ಲೆಗಳಿಗೆ ರಿಲೀಫ್ ನೀಡಿದೆ. ಆದ್ರೆ ಈ ಅನ್‌ಲಾಕ್​​‌ನಲ್ಲಿ ಸಂಪೂರ್ಣ ನಗರ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವು ಚಟುವಟಿಕೆಗಳಿಗೆ ಮಾತ್ರ ಈ ಸರ್ಕಾರ ಅವಕಾಶ ನೀಡಿದ್ದು, ಅವುಗಳಿಗೂ ಕೂಡ ಕೆಲವು ಷರತ್ತುಗಳನ್ನ ಪಾಲಿಸುವಂತೆ ಆದೇಶ ಹೊರಡಿಸಿದೆ‌‌.

Bangalore
ಕೋವಿಡ್ ನಿಯಮ ಪಾಲಿಸುವಂತೆ ನೋಟಿಸ್

ಲಾಕ್‌ಡೌನ್ ಸಡಿಲಿಕೆಯಲ್ಲಿ, ಬೆಳಗಿನ ಜಾವ ಜಾಗಿಂಗ್, ವಾಕಿಂಗ್ ಹೋಗುವವರನ್ನು ಗಮನದಲ್ಲಿ ಇಟ್ಟುಕೊಂಡು ನಗರದ ಪಾರ್ಕ್‌ಗಳನ್ನು ಬೆಳಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ ತೆರೆಯಲು ಆದೇಶ ನೀಡಿದ ಹಿನ್ನೆಲೆ ನಗರದ ಸಸ್ಯಕಾಶಿ ಲಾಲ್‌ಬಾಗ್‌ ತೆರೆದಿದ್ದು, ಇಂದು ಸುಮಾರು ಸಾವಿರಕ್ಕೂ ಹೆಚ್ಚು ಜನರು ವಾಕಿಂಗ್​​ ಬಂದಿದ್ದರು. ಹೀಗಾಗಿ ತೋಟಗಾರಿಕೆ ಇಲಾಖೆ ಹಾಗೂ ನಡಿಗೆದಾರರ ಸಂಘದ ವತಿಯಿಂದ ಜನರಲ್ಲಿ ಕೋವಿಡ್ ನಿಯಮ ಪಾಲಿಸುವಂತೆ ನೋಟಿಸ್ ಮೂಲಕ ಮನವಿ ಮಾಡಲಾಯಿತು.

ಅನ್​ಲಾಕ್​​ : ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ‌ ದಟ್ಟಣೆ‌

ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ‌ ದಟ್ಟಣೆ‌:

ಅನ್‌ಲಾಕ್‌ ಪ್ರಕ್ರಿಯೆಯಲ್ಲಿ ಸರ್ಕಾರ ಹಲವು ನಿರ್ಬಂಧನೆಗಳನ್ನ ಹೇರಿದೆ. ಬೆಂಗಳೂರು ನಗರ ಶೇ.50 ರಷ್ಟು‌ ಮಾತ್ರ ತೆರೆದಿದ್ದು, ಇನ್ನು ಕೆಲವುಗಳಿಗೆ ಸಮಯ ವಿಸ್ತರಿಸಿದೆ. ಹೀಗಿರುವಾಗ ನಗರದ ರಸ್ತೆಗಳು ಬೆಳ್ಳಂಬೆಳಗ್ಗೆಯೇ ವಾಹನಗಳಿಂದ ತುಂಬಿ ತುಳುಕುತ್ತಿವೆ. ಸರ್ಕಾರ ನಗರದಲ್ಲಿ ಕೆಲವು ಚಟುವಟಿಕೆಗಳು ಮಾತ್ರ ಕಾರ್ಯ ನಿರ್ವಹಿಸಲು ಅವಕಾಶ ನೀಡಿದರೂ ಕೂಡ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ‌ ದಟ್ಟಣೆ‌ ಹೆಚ್ಚಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.