ಬೆಂಗಳೂರು: ಇಡಿ ನೋಟೀಸ್ ವಿರುದ್ಧ ಪ್ರತಿಭಟನಾ ಮೆರವಣಿಗೆ ಹಿನ್ನೆಲೆ ಡಬಲ್ ರೋಡ್, ಹೊಸೂರು ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರು ಡಬಲ್ ರೋಡ್ ಲಾಲ್ ಬಾಗ್ ಗೇಡ್ನಿಂದ ಶಾಂತಿನಗರ ಟಿಟಿಎಂಸಿ ಬಳಿ ಇರುವ ಇಡಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದರು. ಈಗ ಪ್ರತಿಭಟನಾ ಮೆರವಣಿಗೆ ಇಡಿ ಕಚೇರಿ ತಲುಪಿದೆ. ಪ್ರತಿಭಟನೆಯಿಂದಾಗಿ ಸುತ್ತಮುತ್ತ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಸಾಮಾನ್ಯವಾಗಿ ಡಬಲ್ ರೋಡ್ ಹಾಗೂ ಹೊಸೂರು ರಸ್ತೆಯಲ್ಲಿ ಅತಿ ಹೆಚ್ಚು ವಾಹನ ಓಡಾಟ ಇರುತ್ತದೆ. ಕಾಂಗ್ರೆಸ್ ಪ್ರತಿಭಟನೆಯಿಂದ ಟ್ರಾಫಿಕ್ ಜಾಮ್ ಇನ್ನಷ್ಟು ಉಲ್ಬಣಗೊಂಡಿದೆ. ರಸ್ತೆಯಲ್ಲಿ ಹೆಚ್ಚು ಆ್ಯಂಬುಲೆನ್ಸ್ ಓಡಾಟ ಇದ್ದು, ಟ್ರಾಫಿಕ್ ಜಾಮ್ನಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ಅದರಲ್ಲೂ ಹೊಸೂರು ರಸ್ತೆ ಸಂಪರ್ಕಿಸುವ ರಸ್ತೆಯಲ್ಲಿ ಕಿಲೋ ಮೀಟರ್ವರಗೆ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ವಾಹನ ಸವಾರರು ತೀವ್ರ ಪರದಾಡುವಂತಾಗಿದೆ. ಟ್ರಾಫಿಕ್ ಪೊಲೀಸರು ಸಂಚಾರ ಸುಗಮಗೊಳಿಸಲು ಹರ ಸಾಹಸ ಪಡುತ್ತಿದ್ದಾರೆ. ಇತ್ತ ಡಬಲ್ ರಸ್ತೆಯಲ್ಲೂ ವಾಹನಗಳು ನಿಂತಲ್ಲೇ ನಿಂತಿದ್ದು, ಸಂಪೂರ್ಣ ಜಾಮ್ ಆಗಿದೆ.
ಓದಿ: ಟ್ರಾಫಿಕ್ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡ ಶಾಸಕ ಲಿಂಬಾವಳಿ ಪುತ್ರಿ
ಕಚೇರಿಗೆ ತೆರಳುವ ಸಮಯದಲ್ಲೇ ಪ್ರತಿಭಟನೆ ನಡೆಸಿರುವುದರಿಂದ ವಾಹನ ಸವಾರರು ಟ್ರಾಫಿಕ್ ಜಾಮ್ನಿಂದ ತೀವ್ರ ಪರದಾಡುವಂತಾಗಿದೆ. ಕಳೆದ ಬಾರಿ ಮೇಕೆದಾಟು ಪಾದಯಾತ್ರೆ ವೇಳೆ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಕಾಂಗ್ರೆಸ್ ಪ್ರತಿಭಟನೆಯಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.