ಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೋ ನೇರಳೆ ಬಣ್ಣದ ಮಾರ್ಗದಲ್ಲಿ ವಿಸ್ತೃತ ಸೇವೆ ಇಂದಿನಿಂದ ಆರಂಭವಾಗಿದೆ. ಕೆ ಆರ್ ಪುರ-ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ಎರಡು ಮಾರ್ಗಗಳಲ್ಲಿ ಇಂದು ಬೆಳಗ್ಗೆಯಿಂದಲೇ ಮೆಟ್ರೋ ಸಂಚಾರ ಶುರುವಾಗಿದೆ. ಇದರಿಂದಾಗಿ ವೈಟ್ಫೀಲ್ಡ್-ಚಲ್ಲಘಟ್ಟದವರೆಗೆ ಪ್ರಯಾಣಿಕರು ಯಾವುದೇ ಮಾರ್ಗ ಬದಲಾವಣೆ ಇಲ್ಲದೇ ಒಂದೇ ರೈಲಿನಲ್ಲಿ ಸಂಚರಿಸಬಹುದಾಗಿದೆ. ಈ ಮೂಲಕ ನಮ್ಮ ಮೆಟ್ರೋ ಸೇವೆಯ ವ್ಯಾಪ್ತಿ ಹೆಚ್ಚಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಈ ಎರಡು ಮಾರ್ಗಗಳ ಆರಂಭವಾಗಿರುವುದರಿಂದ ವೈಟ್ಫೀಲ್ಡ್ನಿಂದ ಚಲ್ಲಘಟ್ಟದವರೆಗೆ ಯಾವುದೇ ತಡೆ ಇಲ್ಲದೇ ಮೆಟ್ರೋದಲ್ಲಿ ಸಂಚರಿಸಬಹುದಾಗಿದೆ. ವಿಸ್ತೃತ ಮೆಟ್ರೋದಲ್ಲಿ ವೈಟ್ಫೀಲ್ಡ್ - ಚಲ್ಲಘಟದ ಮಧ್ಯೆ 43.49 ಕಿಮೀ ದೂರುವನ್ನು 80 ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದ್ದು, 57 ರೂಪಾಯಿ ಟಿಕೆಟ್ ದರವಿದೆ.
ವೈಟ್ಫೀಲ್ಡ್-ಚಲ್ಲಘಟ ಮಾರ್ಗದಲ್ಲಿ ಸುಮಾರು 39 ಮೆಟ್ರೋ ಸ್ಟೇಷನ್ಗಳಿವೆ. ಟರ್ಮಿನಲ್ ಸ್ಟೇಷನ್ನಿಂದ ಬೆಳಗ್ಗೆ 5 ಗಂಟೆಯಿಂದ ಮೆಟ್ರೋ ಸಂಚಾರ ಆರಂಭವಾಗಲಿದೆ. ರಾತ್ರಿ 10.45ಕ್ಕೆ ಕೊನೆಯ ಮೆಟ್ರೋ ರೈಲು ಲಭ್ಯವಿರಲಿದೆ. ಪ್ರತಿ 10 ನಿಮಿಷಕ್ಕೊಂದು ರೈಲು ಸೇವೆ ನೀಡಲಿದೆ.
-
Are you all set for a 43.49 KM ride from Whitefield to Challaghatta covering 37 metro stations?
— Bangalore Metro Updates (@WF_Watcher) October 8, 2023 " class="align-text-top noRightClick twitterSection" data="
Couple of important points here:
~Services will start at 5:00 AM from Terminal Stations
~Last train from Whitefield departs at 22:45 and rest of the Terminal stations at 23:05 Hours pic.twitter.com/fyBHzo9ve5
">Are you all set for a 43.49 KM ride from Whitefield to Challaghatta covering 37 metro stations?
— Bangalore Metro Updates (@WF_Watcher) October 8, 2023
Couple of important points here:
~Services will start at 5:00 AM from Terminal Stations
~Last train from Whitefield departs at 22:45 and rest of the Terminal stations at 23:05 Hours pic.twitter.com/fyBHzo9ve5Are you all set for a 43.49 KM ride from Whitefield to Challaghatta covering 37 metro stations?
— Bangalore Metro Updates (@WF_Watcher) October 8, 2023
Couple of important points here:
~Services will start at 5:00 AM from Terminal Stations
~Last train from Whitefield departs at 22:45 and rest of the Terminal stations at 23:05 Hours pic.twitter.com/fyBHzo9ve5
ಯಾವುದೇ ಕಾರ್ಯಕ್ರಮ ಇಲ್ಲದೇ ಸರಳವಾಗಿ ಚಾಲನೆ: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸೇವೆ ಚಾಲನೆಗೆ ಸರ್ಕಾರದ ಯಾವುದೇ ಔಪಚಾರಿಕ ಹಾಗೂ ಅನೌಪಚಾರಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೇ, ಸರಳವಾಗಿ ಈ ಮಾರ್ಗದಲ್ಲಿ ಸೇವೆ ಆರಂಭಿಸಲಾಗಿದೆ. ಸರ್ಕಾರದ ಔಪಚಾರಿಕ ಹಾಗೂ ಅನೌಪಚಾರಿಕ ಕಾರ್ಯಕ್ರಮಗಳಿಗೆ ಕಾಯದೇ ಮೆಟ್ರೋ ನೇರಳೆ ಮಾರ್ಗದಲ್ಲಿ ಸೇವೆ ಶುರು ಮಾಡುವಂತೆ ಬಿಎಂಆರ್ಸಿಎಲ್ ಸೂಚನೆ ನೀಡಿತ್ತು.
ಸಂಸದ ತೇಜಸ್ವಿ ಸೂರ್ಯ ಆಗ್ರಹ: ಕೆ.ಆರ್.ಪುರ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗ ಪ್ರಾರಂಭಿಸಲು ಸರ್ಕಾರ ವಿಳಂಬ ಮಾಡುತ್ತಿದ್ದು, ಆದಷ್ಟು ಬೇಗ ಚಾಲನೆ ನೀಡುವಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಆಗ್ರಹಿಸಿದ್ದರು. ಬೆಂಗಳೂರು ಮೆಟ್ರೋದಲ್ಲಿ ಪ್ರತಿದಿನ ಸುಮಾರು 5 ರಿಂದ 6 ಲಕ್ಷ ಜನ ಓಡಾಡುತ್ತಾರೆ. ಬೈಯಪ್ಪನಹಳ್ಳಿ - ಕೆ ಆರ್ ಪುರ ಮಾರ್ಗಕ್ಕೆ ಚಾಲನೆ ಸಿಕ್ಕರೆ ಸುಮಾರು 50-60 ಪ್ರತಿಶತದಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದರು.
-
⚡️I am done with my first ride of 42.17 KM. Awesome 😍
— Bangalore Metro Updates (@WF_Watcher) October 9, 2023 " class="align-text-top noRightClick twitterSection" data="
•Started at #Whitefield : 7:16 AM
•Arrived BYPL at 7:44
•MG Road 7:55
•Majestic 8:04
•Kengeri 8:32
•Challaghatta 8:36
Total journey time: 80 min
Total Fare: ₹57
•How’s your ride going on! Share your experience here pic.twitter.com/FlSQltPjmu
">⚡️I am done with my first ride of 42.17 KM. Awesome 😍
— Bangalore Metro Updates (@WF_Watcher) October 9, 2023
•Started at #Whitefield : 7:16 AM
•Arrived BYPL at 7:44
•MG Road 7:55
•Majestic 8:04
•Kengeri 8:32
•Challaghatta 8:36
Total journey time: 80 min
Total Fare: ₹57
•How’s your ride going on! Share your experience here pic.twitter.com/FlSQltPjmu⚡️I am done with my first ride of 42.17 KM. Awesome 😍
— Bangalore Metro Updates (@WF_Watcher) October 9, 2023
•Started at #Whitefield : 7:16 AM
•Arrived BYPL at 7:44
•MG Road 7:55
•Majestic 8:04
•Kengeri 8:32
•Challaghatta 8:36
Total journey time: 80 min
Total Fare: ₹57
•How’s your ride going on! Share your experience here pic.twitter.com/FlSQltPjmu
ಸೆ.5 ರಂದು ಕೇಂದ್ರ ಸರ್ಕಾರಕ್ಕೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಪತ್ರ ಬರೆದು ಬೈಯಪ್ಪನಹಳ್ಳಿ - ಕೆ ಆರ್ ಪುರ ಮತ್ತು ಚಲ್ಲಘಟ್ಟ - ಕೆಂಗೇರಿ ಮಾರ್ಗ ಉದ್ಘಾಟನೆಗೆ ದಿನಾಂಕ ನಿಗದಿ ಮಾಡುವಂತೆ ಕೇಳಿದ್ದರು. ಯಾವುದೇ ಔಪಚಾರಿಕ ಅಥವಾ ಅನೌಪಚಾರಿಕ ಅಧಿಕೃತ ಕಾರ್ಯಕ್ರಮವಿಲ್ಲದೇ 9 ಅಕ್ಟೋಬರ್ 2023 ರಂದು ತಕ್ಷಣವೇ ನೇರಳೆ ಮಾರ್ಗ ವಾಣಿಜ್ಯ ಸೇವೆಗೆ ಮುಕ್ತಗೊಳಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು.
ಇದನ್ನೂ ಓದಿ: ನಮ್ಮ ಮೆಟ್ರೋ ರೈಲಿನಲ್ಲಿ ಗೋಬಿ ಮಂಚೂರಿ ಸೇವನೆ; ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲು