ETV Bharat / state

ನಗರದಲ್ಲಿ ಜಿಟಿ ಜಿಟಿ ಮಳೆ, ಶೀತಗಾಳಿ: ಜನರಲ್ಲಿ ಕಾಣಿಸಿಕೊಳ್ಳುತ್ತಿವೆ ಹಲವು ಆರೋಗ್ಯ ಸಮಸ್ಯೆಗಳು - Victoria hospital

ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನದಿಂದ ಜಿಟಿ ಜಿಟಿ ಮಳೆಯ ಜತೆಗೆ ಶೀತಗಾಳಿ ಬೀಸುತ್ತಿದ್ದು, ಇದರಿಂದ ಶೀತ, ಕೆಮ್ಮು, ನೆಗಡಿ, ವೈರಲ್ ಜ್ವರ ಬಹಳಷ್ಟು ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ.

bengaluru-rain-many-health-problems-are-appearing-in-people
ನಗರದಲ್ಲಿ ಜಿಟಿ ಜಿಟಿ ಮಳೆ, ಶೀತಗಾಳಿ; ಜನರಲ್ಲಿ ಕಾಣಿಸಿಕೊಳ್ಳುತ್ತಿವೆ ಹಲವು ಆರೋಗ್ಯ ಸಮಸ್ಯೆಗಳು
author img

By

Published : Dec 12, 2022, 7:45 PM IST

ಬೆಂಗಳೂರು: ನಗರದ ವಿಕ್ಟೋರಿಯಾ, ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆ ಸೇರಿದಂತೆ ಹಲವು ಪ್ರಮುಖ ಆಸ್ಪತ್ರೆಗಳಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ನಾಲ್ಕೈದು ದಿನದಿಂದ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ.

ವೈರಲ್ ಜ್ವರದ ಹೆಚ್ಚಳಕ್ಕೆ ಪ್ರಮುಖ ಕಾರಣ ಬದಲಾಗುತ್ತಿರುವ ವಾತಾವರಣ. ಶೀತಗಾಳಿ, ಆಗಾಗ್ಗೆ ಬರುವ ಮಳೆ, ಮೋಡ ಕವಿದ ವಾತಾವರಣದಿಂದಾಗಿ ವೈರಾಣುಗಳ ಸಂಖ್ಯೆ ಹೆಚ್ಚುತ್ತದೆ. ಇದರ ಪರಿಣಾಮ ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವವರು ಬಹುಬೇಗ ಜ್ವರಕ್ಕೆ ಒಳಗಾಗುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಅಸ್ತಮಾ ಉಲ್ಬಣ: ಜ್ವರ ಮಾತ್ರವಲ್ಲದೇ, ಶೀತಗಾಳಿಯಿಂದ ಹೆಚ್ಚಿನ ಜನರಲ್ಲಿ ಅಸ್ತಮಾ, ಅಲರ್ಜಿ ಕಾಣಿಸಿಕೊಳ್ಳುತ್ತದೆ. ಅಸ್ತಮಾ ಕಾಯಿಲೆ ಇರುವವರು ಹೆಚ್ಚು ಮುತುವರ್ಜಿ ವಹಿಸಬೇಕು. ಶೀತ, ಅಸ್ತಮಾ ಉಲ್ಬಣಗೊಳಿಸುತ್ತದೆ. ಇದು ಅಪಾಯವನ್ನು ತಂದೊಡ್ಡುತ್ತದೆ ಎಂದು ಸಲಹೆ ನೀಡಿದ್ದಾರೆ.

ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಿ ಏರು ಪೇರು: ಹವಾಮಾನ ಬದಲಾವಣೆಯಿಂದ ಬಹಳಷ್ಟು ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಕೆಲವು ದಿನಗಳಿಂದ ಶೀತ, ಕೆಮ್ಮು, ನೆಗಡಿ ಮತ್ತು ಜ್ವರಗಳಿಂದ ಹೆಚ್ಚು ಜನರು ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕಾದಾರಿದ ನೀರು ಸೇವಿಸಿ: ಕಾಯಿಸಿ ಆರಿಸಿದ ನೀರನ್ನು ಕುಡಿಯಿರಿ, ಆದಷ್ಟು ಬಿಸಿಯಾದ ಆಹಾರ ಸೇವನೆ ಮಾಡಿ, ಆಹಾರದಲ್ಲಿ ಸ್ವಚ್ಛತೆ ಕಾಪಾಡಿ, ಮೈ ತುಂಬಾ ಬೆಚ್ಚಗಿನ ಬಟ್ಟೆ ಹಾಕಿಕೊಳ್ಳಿ. ಸೊಳ್ಳೆ ಕಡಿಯದಂತೆ ಆದಷ್ಟು ಎಚ್ಚರಿಕೆ ವಹಿಸಿ, ನೀರು ಒಂದೆಡೆ ನಿಲ್ಲದಂತೆ ನಿಗಾ ವಹಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಎರಡು ವರ್ಷಗಳಿಂದ ಈ ಠಾಣಾ ವ್ಯಾಪ್ತಿಯಲ್ಲಿ ಅಪಘಾತಗಳೇ ಹೆಚ್ಚು? ಕಾರಣ ಏನು ಅಂತೀರಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.