ETV Bharat / state

ಪ್ಲಾಸ್ಟಿಕ್​ ಧ್ವಜಕ್ಕೆ ಕೊಕ್​.. ಬೆಂಗಳೂರಲ್ಲಿ ಖಾದಿ ತಿರಂಗ ಮಾರಾಟ ಜೋರು

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಇಡೀ ದೇಶ ಸಜ್ಜಾಗಿದ್ದು, ರಾಜಧಾನಿ ಬೆಂಗಳೂರಿನಲ್ಲೂ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ದತೆಗಳು ನಡೆದಿದೆ. ನಗರದ ಗಲ್ಲಿ ಗಲ್ಲಿಗಳಲ್ಲಿ ತ್ರಿವರ್ಣ ಧ್ವಜ ಸೇರಿದಂತೆ ದೇಶ ಪ್ರೇಮದ ಸಂದೇಶ ಸಾರುವ ವಿವಿಧ ವಸ್ತುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.

ಧ್ವಜ ಮಾರಾಟದಲ್ಲಿ ನಿರತರಾಗಿರುವ ವ್ಯಾಪಾರಿ
author img

By

Published : Aug 13, 2019, 6:12 PM IST

ಬೆಂಗಳೂರು: ಸ್ವಾತಂತ್ರ್ಯ ದಿನ ಸಮೀಪಿಸುತ್ತಿದ್ದಂತೆ ನಗರದ ಗಲ್ಲಿ ಗಲ್ಲಿಗಳಲ್ಲಿ ತ್ರಿವರ್ಣ ಧ್ವಜಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದ್ದು, ಈ ಬಾರಿ ಪ್ಲಾಸ್ಟಿಕ್ ಧ್ವಜಗಳ ಬದಲಾಗಿ ಖಾದಿ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ.

ಆಗಸ್ಟ್ 15ರ ಸ್ವಾತಂತ್ರ್ಯ ದಿನಕ್ಕೆ ಇನ್ನು ಒಂದೇ ದಿನ‌ ಬಾಕಿ ಇದೆ. ಹೀಗಾಗಿ ನಗರದ ಅಂಗಡಿಗಳಲ್ಲಿ, ರಸ್ತೆ ಸಿಗ್ನಲ್​ಗಳಲ್ಲಿ ತ್ರಿವರ್ಣ ಧ್ವಜದ ಮಾರಾಟ ಜೋರಾಗಿದ್ದು, ಈ ಬಾರಿ ಪ್ಲಾಸ್ಟಿಕ್ ಧ್ವಜಕ್ಕೆ ಸಂಪೂರ್ಣ ಮುಕ್ತಿ ನೀಡಿ, ಖಾದಿ ಧ್ವಜವನ್ನು ಬಳಕೆ ಮಾಡಲಾಗುತ್ತಿದೆ.

ನಗರದ ಕಾರ್ಪೋರೇಷನ್ ಸರ್ಕಲ್ ಮತ್ತು ಕಬ್ಬನ್‌ಪಾರ್ಕ್ ರಸ್ತೆಗಳ ಇಕ್ಕೆಲಗಳಲ್ಲಿ ಎಲ್ಲೆಡೆ ತ್ರಿವರ್ಣ ಧ್ವಜ ವ್ಯಾಪಾರ ಗರಿಗೆದರಿದೆ. ಖಾದಿ ಧ್ವಜ, ಧ್ವಜದ ಬ್ಯಾಡ್ಜ್, ಹ್ಯಾಂಡ್ ಬ್ಯಾಂಡ್ ಸೇರಿದಂತೆ ಟೀ ಶರ್ಟ್, ಟೋಪಿಗಳನ್ನು ಮಾರಾಟ ಮಾಡಲಾಗುತ್ತಿದೆ. ತ್ರಿವರ್ಣ ಧ್ವಜಗಳ ಮಾರಾಟಕ್ಕಾಗಿ ದಾವಣಗೆರೆಯಿಂದ ಒಂದು ತಂಡ ಬೆಂಗಳೂರಿಗೆ ಆಗಮಿಸಿದ್ದು, ವ್ಯಾಪಾರದಲ್ಲಿ ತೊಡಗಿದೆ.

ಧ್ವಜ ಮಾರಾಟದಲ್ಲಿ ನಿರತರಾಗಿರುವ ವ್ಯಾಪಾರಿ

ಪ್ರತೀ ಬಾರಿ ಸ್ವಾತಂತ್ರ್ಯ ದಿನಕ್ಕೆ ಎರಡು- ಮೂರು ದಿನ‌ ಇರುವಾಗಲೇ ಆಗಮಿಸಿ ಸ್ಥಳೀಯ ಮಾರುಕಟ್ಟೆಯಲ್ಲಿ ಧ್ವಜಗಳನ್ನು ಖರೀದಿಸಿ ರಸ್ತೆ ಬದಿಗಳಲ್ಲಿ ಮಾರಾಟ ಮಾಡುತ್ತೇವೆ. 5 ರೂಪಾಯಿಂದ ಶುರುವಾಗಿ 200 ರೂಪಾಯಿವರೆಗೆ ನಾನಾ ಬೆಲೆಗಳಲ್ಲಿ ಧ್ವಜಗಳನ್ನು ಮಾರಾಟ ಮಾಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಧ್ವಜಗಳನ್ನು ತೆಗೆದುಕೊಂಡು ಹೋಗುತ್ತಾರೆ. ಮಳೆಯಾದ್ದರಿಂದ ವ್ಯಾಪಾರಕ್ಕೆ ಸ್ವಲ್ಪ ತೊಡಕಾಗುತ್ತಿದೆ, ಎನ್ನುತ್ತಾರೆ ದಾವಣಗೆರೆಯಿಂದ ಆಗಮಿಸಿದ ಧ್ವಜ ವ್ಯಾಪಾರಿ ನಾಗರಾಜ್.

Intro:ಗಲ್ಲಿ ಗಲ್ಲಿಗಳಲ್ಲಿ ತ್ರಿವರ್ಣ ಧ್ವಜ ಹಾರಾಟ ಶುರು; ಈ ಬಾರಿ ಪ್ಲಾಸ್ಟಿಕ್ ತ್ರಿವರ್ಣ ಧ್ವಜಕ್ಕೆ ಮುಕ್ತಿ..

ಬೆಂಗಳೂರು: ಸ್ವಾತಂತ್ರ್ಯ ದಿನ ಸಮೀಪಿಸುತ್ತಿದ್ದಂತೆ ಎಲ್ಲೆಡೆ ತ್ರಿವರ್ಣ ಧ್ವಜದ ಹಾರಾಟ ಶುರುವಾಗಿದ್ದು, ದೇಶ ಪ್ರೇಮವನ್ನು ಕಣ್ತುಂಬಿ ಕೊಳ್ಳೋ ಸಮಯ ಬಂದಿದೆ.. ಭಾರತ ಸ್ವತಂತ್ರ್ಯಕ್ಕೆ 73ರ ಸಂಭ್ರಮದಲ್ಲಿದ್ದು, ಗಲ್ಲಿ‌ಗಲ್ಲಿಗಳಲ್ಲೂ ತ್ರಿವರ್ಣ ಧ್ವಜದ ರಂಗು ಹೆಚ್ಚಿದೆ..

ಹೌದು, ಆಗಸ್ಟ್ 15 ರ ಸ್ವಾತಂತ್ರ್ಯ ದಿನಕ್ಕೆ ಇನ್ನು ಒಂದೇ ದಿನ‌ ಬಾಕಿ ಇದೆ.. ಹೀಗಾಗಿ ನಗರದ ಅಂಗಡಿಗಳಲ್ಲಿ , ರಸ್ತೆ ಬಳಿಯ ಸಿಗ್ನಲ್ ಗಳಲ್ಲಿ ತ್ರಿವರ್ಣ ಧ್ವಜದ ಮಾರಾಟ ಜೋರಾಗಿದೆ.. ಈ ಬಾರಿ ಸಂಪೂರ್ಣ ವಾಗಿ ಪ್ಲಾಸ್ಟಿಕ್ ಧ್ವಜಕ್ಕೆ ಮುಕ್ತಿ ನೀಡಿ, ಖಾದಿ ಧ್ವಜವನ್ನು ಬಳಕೆ ಮಾಡಲಾಗುತ್ತಿದೆ..

ನಗರದ ಕಾರ್ಪೋರೇಷನ್ ಸರ್ಕಲ್ ಮತ್ತು ಕಬ್ಬನ್‌ಪಾರ್ಕ್ ಗೆ ಅಂಟಿಕೊಂಡಿರುವ ಮಧ್ಯರಸ್ತೆಯಲ್ಲಿ 500 ಮೀಟರ್ ವರೆಗೆ ತ್ರಿವರ್ಣ ಧ್ವಜ ವ್ಯಾಪಾರ ಗರಿಗೆದರಿದೆ.. ಖಾದಿ ಧ್ವಜ, ತ್ರಿವರ್ಣ ಧ್ವಜದ ಬ್ಯಾಡ್ಜ್, ಹ್ಯಾಂಡ್ ಬ್ಯಾಂಡ್ ಸೇರಿದಂತೆ ಟೀ ಶರ್ಟ್, ತಲೆ ಟೋಪಿಗಳನ್ನು ಮಾರಾಟ ಮಾಡಲಾಗುತ್ತಿದೆ..

ಇನ್ನು ಸ್ವಾತಂತ್ರ್ಯ ದಿನಕ್ಕಾಗಿಯೇ‌ ದಾವಣಗೆರೆಯಿಂದ ಒಂದು ತಂಡ ಬೆಂಗಳೂರಿಗೆ ಬಂದು ತ್ರಿವರ್ಣ ಧ್ವಜಗಳ ವ್ಯಾಪಾರದಲ್ಲಿ ತೊಡಗಿಕೊಳ್ತಾರೆ.. ಸ್ವಾತಂತ್ರ್ಯ ದಿನಕ್ಕೆ ಎರಡು- ಮೂರು ದಿನ‌ ಇರುವಾಗಲೇ ಬರುವ ಮಾರಾಟಗಾರರು, ಸ್ಥಳೀಯ ಮಾರುಕಟ್ಟೆಯಲ್ಲಿ ಧ್ವಜ ಖರೀದಿಸಿ ರಸ್ತೆಯಲ್ಲಿ ನಿಂತು ಮಾರಾಟ ಮಾಡುತ್ತಾರೆ.. ಇನ್ನು ಒಂದೇ ದಿನ ಬಾಕಿ ಇರುವ ಕಾರಣ ಭರ್ಜರಿಯಾಗಿ ಮಾರಾಟ ವಾಗುತ್ತಿದೆ ಅಂತಾರೆ, ದಾವಣಗೆರೆಯ ನಾಗರಾಜ್..‌5 ರೂಪಾಯಿಯಿಂದ ಶುರುವಾಗಿ 200 ರೂಪಾಯಿವರೆಗೆ ನಾನಾ ಬೆಲೆಗಳಲ್ಲಿ ಧ್ವಜಗಳು ಸಿಗುತ್ತಿವೆ.. ಮಳೆರಾಯ ಕಾಟ ತಪ್ಪಿದರೆ ಒಳ್ಳೆ ವ್ಯಾಪಾರವಾಗುತ್ತೆ ಅಂತಾರೆ..‌

ಒಟ್ಟಿನ್ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ತ್ರಿವರ್ಣ ಧ್ವಜದ ಮಾರಾಟವೂ ಭರ್ಜರಿಯಾಗಿದೆ..‌
KN_BNG_01_FLAGS_MARATA_SCRIPT_7201801
Byte; ನಾಗರಾಜ್- ದಾವಣಗೆರೆ ಮಾರಾಟಗಾರರು.. ‌

Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.