ಬೆಂಗಳೂರು : ಕೋವಿಡ್ ನಡುವೆಯೇ ರಂಜಾನ್ ತಿಂಗಳು ಆಗಮಿಸಿದ್ದರಿಂದ ಮಸೀದಿಗೆ ಪ್ರಾರ್ಥಿಸಲು ಹೋಗುವಾಗ ಪಾಲಿಸಬೇಕಾದ ಮಾರ್ಗಸೂಚಿಗಳ ಕುರಿತು ಮುಸ್ಲಿಂ ಮುಖಂಡರೊಂದಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಭೆ ನಡೆಸಿದರು.
ಸಭೆಯಲ್ಲಿ ಮುಸ್ಲಿಂ ಮುಖಂಡರು, ನಗರದ ಎಲ್ಲಾ ಡಿಸಿಪಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ರಂಜಾನ್ ತಿಂಗಳಲ್ಲಿ ಯಾವ ರೀತಿ ಕೋವಿಡ್ ನಿಯಮ ಪಾಲನೆ ಮಾಡಬೇಕು, ಯಾವ ರೀತಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂಬುವುದರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಓದಿ : ಮಂಗಳೂರು: ಕರ್ಫ್ಯೂ ಉಲ್ಲಂಘಿಸಿರುವ 78 ವಾಹನ ವಶಕ್ಕೆ ಪಡೆದ ಪೊಲೀಸ್
ರಂಜಾನ್ ವೇಳೆ ಮುಸ್ಲಿಮರು ನಮಾಜ್ ಮಾಡಲು ಮಸೀದಿಗೆ ತೆರಳುವಾಗ ಅಥವಾ ಇನ್ನಿತರ ಕಾರ್ಯಗಳಿಗೆ ಹೊರಗೆ ಬಂದಾಗ ಕೋವಿಡ್ ನಿಯಮ ಪಾಲಿಸುವಂತೆ ಪೊಲೀಸ್ ಆಯುಕ್ತರು ಮುಖಂಡರಿಗೆ ಸೂಚಿಸಿದರು.