ETV Bharat / state

ಫೈನಾನ್ಸಿಯರ್​ ಟಾರ್ಗೆಟ್ ಮಾಡಿ ಹಣ ವಸೂಲಿ: ಚೋಟಾ ಟೈಗರ್ ಅರೆಸ್ಟ್​

ಫೈನಾನ್ಸಿಯರ್​ಗಳನ್ನೇ ಟಾರ್ಗೆಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ರೌಡಿ ಮೊಹಮ್ಮದ್ ತಬ್ರೇಜ್ ಪಾಷ ಅಲಿಯಾಸ್ ಚೋಟಾ ಟೈಗರ್​ನನ್ನು ಪೊಲೀಸರು ಬಂಧಿಸಿದ್ದಾರೆ‌.

ಚೋಟಾ ಟೈಗರ್ ಅರೆಸ್ಟ್​
ಚೋಟಾ ಟೈಗರ್ ಅರೆಸ್ಟ್​
author img

By

Published : Jan 16, 2022, 8:43 AM IST

ಬೆಂಗಳೂರು: ‌ಹಲವು ವರ್ಷಗಳಿಂದ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡು ಕಾನೂನು‌‌ ಸುವ್ಯವಸ್ಥೆಗೆ ಸವಾಲಾಗಿದ್ದ ರೌಡಿಶೀಟರ್ ತಬ್ರೇಜ್ ಪಾಷ ಅಲಿಯಾಸ್ ಚೋಟಾ ಟೈಗರ್ ಎಂಬಾತನನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ‌.

ನಗರದಲ್ಲಿ ಫೈನಾನ್ಸಿಯರ್​ಗಳನ್ನೇ ಟಾರ್ಗೆಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಈತ, ಮೊದಲು ತನ್ನ ಸಹಚರರನ್ನು ಕಳುಹಿಸಿ ಹಣಕ್ಕೆ ಬೇಡಿಕೆಯಿಡುತ್ತಿದ್ದ. ಹಣ ಕೊಡದಿದ್ದವರ ಕಚೇರಿಗೆ ನುಗ್ಗಿ ಲಾಂಗು-ಮಚ್ಚು ತೋರಿಸಿ ಹೆದರಿಸಿ ದರೋಡೆ ಮಾಡುತ್ತಿದ್ದನಂತೆ.

ಬೆಂಗಳೂರಿನಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಸದ್ಯ ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.