ರಾಮನಗರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ-275 ಭಾಗದ ಕಿ.ಮೀ 18,000 ರಿಂದ 74,200 ಕಣಿಮೀಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಬೆಂಗಳೂರು-ನಿಡಘಟ್ಟ ವಿಭಾಗದ 6 ಲೇನ್ ಬಳಕೆಗಾಗಿ ಟೋಲ್ ಶುಲ್ಕಗಳು ಸೋಮವಾರ(ನಾಳೆಯಿಂದ) ಜಾರಿಯಾಗಲಿದೆ.
ಬೆಳಗ್ಗೆ 8 ಗಂಟೆಯಿಂದ ಟೋಲ್ ಸಂಗ್ರಹ ಅನ್ವಯವಾಗಲಿದೆ. ಕಾರು/ಜೀಪು/ವ್ಯಾನ್ಗಳ ಏಕಮುಖ ಸಂಚಾರಕ್ಕೆ ರೂ. 135/- ಅದೇ ದಿನ ಮರು ಸಂಚಾರಕ್ಕೆ ರೂ. 205/- ಒಂದು ತಿಂಗಳಲ್ಲಿ 50 ಏಕಮುಖ ಸಂಚಾರಕ್ಕೆ ತಿಂಗಳ ಪಾಸ್ ಶುಲ್ಕ ರೂ. 4525/-, ಬಸ್ ಅಥವಾ ಟ್ರಕ್ ಏಕಮುಖ ಸಂಚಾರಕ್ಕೆ ರೂ. 460/- ಅದೇ ದಿನ ಮರು ಸಂಚಾರಕ್ಕೆ ರೂ. 690/- ಒಂದು ತಿಂಗಳಲ್ಲಿ 50 ಏಕಮುಖ ಸಂಚಾರಕ್ಕೆ ತಿಂಗಳ ಪಾಸ್ ಶುಲ್ಕ ರೂ. 15325/-, ಲಘು ವಾಣಿಜ್ಯ ವಾಹನಗಳು, ಮೂರು ಅಕ್ಸೆಲ್ ವಾಣಿಜ್ಯ ವಾಹನಗಳು ಮತ್ತು ಭಾರಿ ನಿರ್ಮಾಣ ಯಂತ್ರಗಳಿಗೆ ವಿವಿಧ ದರಗಳನ್ನು ನಿಗದಿಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಟೋಲ್ ಪ್ಲಾಜಾದಲ್ಲಿ ಎಲ್ಲಾ ರೀತಿಯ ವಾಹನಗಳು ಪ್ರಯಾಣದ 24 ತಾಸಿನೊಳಗಾಗಿ ಮರಳಿ ಬಂದಲ್ಲಿ ಶೇ. 25 ರಷ್ಟು, ಎಲ್ಲಾ ವಿಭಾಗದ ವಾಹನಗಳ ಪಾವತಿ ದಿನಾಂಕದಿಂದ ಒಂದು ತಿಂಗಳೊಳಗಾಗಿ 50 ಬಾರಿ ಪ್ರಯಾಣಿಸಿದಲ್ಲಿ ಶೇ.33 ರಷ್ಟು, ಟೋಲ್ ಪ್ಲಾಜಾದಿಂದ 20 ಕಿ.ಮೀ ವಿಸ್ತೀರ್ಣದೊಳಗೆ ವಾಸಿಸುವ ಎಲ್ಲಾ ವಾಣಿಜ್ಯೇತರ ವಾಹನಗಳಿಗೆ ರೂ. 315/- ತಿಂಗಳ ಪಾಸ್ ಲಭ್ಯ ಹಾಗೂ ಟೋಲ್ ಪ್ಲಾಜಾ ಜಿಲ್ಲೆಯಲ್ಲಿ ನೋಂದಾಯಿತಗೊಂಡ ವಾಣಿಜ್ಯ ವಾಹನಗಳಿಗೆ ಶೇ.50 ರಷ್ಟು ರಿಯಾಯಿತಿ ಲಭ್ಯವಿರುವುದಾಗಿ ತಿಳಿಸಿರುತ್ತಾರೆ.
ಇದನ್ನೂ ಓದಿ: ನಾಳೆ ನನ್ನ ಜೀವನದಲ್ಲಿ ಮರೆಯಲಾಗದ ದಿನ ಹಾಗೂ ಕ್ಷಣ : ಬಿ ಎಸ್ ಯಡಿಯೂರಪ್ಪ
ಈ ಬಗ್ಗೆ ಯಾವುದೇ ದೂರುಗಳಿಗೆ 1033 ದೂರವಾಣಿಯನ್ನು ಹಾಗೂ ವಿಚಾರಣೆ ನೀಡುವುದಕ್ಕೆ ಯೋಜನಾ ನಿರ್ದೇಶಕರಿಗೆ ದೂರು ನೀಡುವಂತೆ ಪ್ರಕಟಣೆಯಲ್ಲಿ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ: ನಾಳೆ ಬೆಳಗಾವಿಗೆ ಮೋದಿ : ಜನಪ್ರತಿನಿಧಿಗಳ ಬದಲು ಕಾಯಕಯೋಗಿಗಳಿಂದ ಸ್ವಾಗತ, ಪಿಯುಸಿ ಪರೀಕ್ಷೆ ಮುಂದೂಡಿಕೆ