ಬೆಂಗಳೂರು: ಕೊರೊನಾ ವಾರಿಯರ್‌ಗಳಾಗಿ ಸೇವೆ ಸಲ್ಲಿಸುವ ವೇಳೆ ಹಲವಾರು ಪೊಲೀಸರುಗಳಿಗೆ ಸೋಂಕು ತಗುಲಿರುತ್ತದೆ. ಆದರೆ, ಉತ್ತರ ವಿಭಾಗದಲ್ಲಿನ ಪೊಲೀಸ್ ಠಾಣೆಯ ಯಾವುದೇ ಸಿಬ್ಬಂದಿಗೂ ಈವರೆಗೂ ಸೋಂಕು ತಗುಲಿಲ್ಲ. ಈ ಮೂಲಕ ಈ ಠಾಣೆಯು ಮಾದರಿ ಪೊಲೀಸ್ ಠಾಣೆಯಾಗಿ ಇದೀಗ ಹೆಸರುವಾಸಿಯಾಗಿದೆ.
ಬೆಂಗಳೂರಿನ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಇದುವರೆಗೆ ಯಾರಲ್ಲೂ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಸಿಬ್ಬಂದಿ ಕಟ್ಟುನಿಟ್ಟಾಗಿ ಪಾಲಿಸುವ ಮುನ್ನೆಚ್ಚರಿಕಾ ಕ್ರಮಗಳು. ಇಲ್ಲಿನ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಠಾಣೆಯಲ್ಲಿ ಯೋಗ, ಆಗಾಗ ಮೆಡಿಕಲ್ ಚೆಕಪ್, ಬಿಸಿ ನೀರು ಕಷಾಯ ತೆಗೆದುಕೊಂಡಿದ್ದಾರೆ.
ಇವರು ಅನುಸರಿಸುವ ಕ್ರಮಗಳ ಕುರಿತು ಸಿಬ್ಬಂದಿಯೊಬ್ಬರು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಅವರಿಗೆ ಅಣಕು ಪ್ರದರ್ಶನದ ಮೂಲಕ ಅರ್ಥೈಸಿದರು. ಈ ಮೂಲಕ ಬಗಲಗುಂಟೆ ಠಾಣೆಯು ಇತರೆ ಸಿಬ್ಬಂದಿಗೆ ಮಾದರಿಯಾಗಿದೆ.