ETV Bharat / state

ಹಿಟ್ & ರನ್ ಪ್ರಕರಣಗಳು ಬೆಂಗಳೂರಿನಲ್ಲೇ ಹೆಚ್ಚು! ಯಾಕೆ ಗೊತ್ತೇ? - ವೇಗದ ಚಾಲನೆ ಹಾಗೂ ಮದ್ಯ ಸೇವನೆ

ಸಿಸಿಟಿವಿ ಇರುವ ನಗರ ಪ್ರದೇಶಗಳಲ್ಲಿ ಹಿಟ್ ಅಂಡ್ ರನ್ ಅಪಘಾತಗಳನ್ನು ಪತ್ತೆ ಹಚ್ಚಬಹುದು. ಗ್ರಾಮೀಣ ಅಥವಾ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಅಪಘಾತಗಳು ನಡೆದಾಗ ಆರೋಪಿಗಳನ್ನು ಕಂಡು ಹಿಡಿಯುವುದು ಕಷ್ಟವಾಗುತ್ತದೆ.

Hit and run accident
ಹಿಟ್ ಅಂಡ್ ರನ್ ಅಪಘಾತ
author img

By

Published : Feb 17, 2023, 10:56 PM IST

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಿಟ್ ಅಂಡ್ ರನ್ ಕೇಸ್​​ಗಳು ಅಧಿಕಗೊಂಡಂತೆ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥ ಚಾಲಕರನ್ನು ಬಂಧಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ವಿಪರ್ಯಾಸವೆಂದರೆ, ಅಪಘಾತವಾಗುವ ಪ್ರತಿ ನಾಲ್ಕು ಹಿಟ್ ಅಂಡ್ ರನ್ ಅಪಘಾತಗಳ ಪೈಕಿ ಒಂದು ಪ್ರಕರಣವನ್ನು ಇತ್ಯರ್ಥಗೊಳಿಸುವಲ್ಲಿ ಪೊಲೀಸರು ವಿಫಲರಾಗುತ್ತಿದ್ದಾರೆ.

2019 ರಿಂದ 2023ರ ಜನವರಿ ಅಂತ್ಯದವರೆಗೆ ರಾಜ್ಯದಲ್ಲಿ 4,549 ಹಿಟ್ ಅಂಡ್ ರನ್ ಅಪಘಾತ ಪ್ರಕರಣ ದಾಖಲಾಗಿದ್ದು, ಇದರಲ್ಲಿ 1,187 ಕೇಸ್​ಗಳು ಪತ್ತೆಯಾಗಿಲ್ಲ. ಅಪಘಾತವೆಸಗಿದ ಚಾಲಕರನ್ನು ಪೊಲೀಸರು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ 952 ಮಂದಿ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. 3,807 ಮಂದಿ ಗಾಯಗೊಂಡಿದ್ದಾರೆ.

ಸಿಸಿಟಿವಿ ಇಲ್ಲದ‌ೆಡೆ ಪತ್ತೆ ಕಷ್ಟ: ನಗರ ಪ್ರದೇಶಗಳಲ್ಲಿ ನಡೆದಿರುವ ರಸ್ತೆ ಅಪಘಾತ ಪ್ರಕರಣಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಏಕೆಂದರೆ ಸಿಸಿಟಿವಿ ದೃಶ್ಯಾವಳಿ, ವಾಹನ ನೋಂದಣಿ ಸಂಖ್ಯೆ ಸಿಗುತ್ತದೆ. ಆದರೆ, ಗ್ರಾಮೀಣ ಅಥವಾ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಹಿಟ್ ಅಂಡ್ ರನ್ ಕೇಸ್ ನಡೆದಾಗ ಆರೋಪಿಗಳನ್ನು ಪತ್ತೆ ಹಚ್ಚುವುದು ಸವಾಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಘಟನೆಗಳು ಸರ್ವೇ ಸಾಮಾನ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿವೆ. ಅಜಾಗರೂಕತೆ, ವೇಗದ ಚಾಲನೆ ಹಾಗೂ ಮದ್ಯ ಸೇವನೆ ಚಲಾಯಿಸಿ ಮುಂದೆ ಹೋಗುವ ವಾಹನ ಸವಾರರು ಹಾಗೂ ಪಾದಚಾರಿಗಳ ಸಾವಿಗೆ ಕಾರಣರಾಗುತ್ತಿದ್ದಾರೆ.

ಕಳೆದ ಫೆಬ್ರುವರಿ 6 ರಂದು ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಚಲಿಸುತ್ತಿದ್ದ ಸಾಗರ ಕ್ಷತ್ರದ ಶಾಸಕ ಹಾಲಪ್ಪ ಹೆಸರಿರುವ ಸ್ಟಿಕ್ಟರ್ ಇರುವ ಕಾರು, ಬೈಕ್ ಸವಾರನ ತಲೆ ಮೇಲೆ ಹರಿದು ಬೈಕ್ ಸವಾರ ಮಜಿದ್ಖಾನ್ ಸಾವನ್ನಪ್ಪಿದರೆ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದರು. ಅದೇ ರೀತಿ ಜನವರಿ 17 ರಂದು ಚಲಿಸುವ ಸ್ಕೂಟರ್‌ನಲ್ಲೇ 71 ವರ್ಷದ ವೃದ್ದನನ್ನು ನಡುರಸ್ತೆಯಲ್ಲೇ ಐದಾರು ಕಿಲೋಮಿಟರ್‌ವರೆಗೂ ಎಳೆದೊಯ್ದಿದ್ದ. ಕಳೆದ ಜನವರಿ ತಿಂಗಳಲ್ಲಿ ಮಾರಣಾಂತಿಕ ಅಪಘಾತ 26 ಹಾಗೂ ಮಾರಣಾಂತಿಕವಲ್ಲದ 99 ಅಪಘಾತ ಸೇರಿ‌ ಒಟ್ಟು 125 ಹಿಟ್ ಅಂಡ್ ರನ್ ಕೇಸ್ ಗಳು ದಾಖಲಾಗಿವೆ. ಈ‌ ಪೈಕಿ 109 ಕೇಸ್ ಗಳು ರಾಜಧಾನಿಯಲ್ಲಿ ಸಂಭವಿಸಿರುವುದು ಗಮನಾರ್ಹ.

ಬೆಂಗಳೂರು ಸೇರಿ ಬೆರಳೆಣಿಕೆ ಜಿಲ್ಲೆಗಳಲ್ಲಿ ದಾಖಲಾಗುವ ಅಪಘಾತವೆಸಗಿ ಪರಾರಿಯಾಗುವ ಪ್ರಕರಣಗಳನ್ನು ಸಿಸಿಟಿವಿ ಸೇರಿ ತಾಂತ್ರಿಕ ಅಂಶಗಳ ಆಧಾರದಲ್ಲಿ ಪತ್ತೆ ಹಚ್ಚುವುದು ಸುಲಭವಾಗುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ಹಿಟ್ ಅಂಡ್ ರನ್ ಕೇಸ್‌ಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. 1,187 ಕೇಸ್‌ಗಳಲ್ಲಿ ಆರೋಪಿಗಳು ಪತ್ತೆಯಾಗದಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಪೊಲೀಸ್ ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ.

ಅಪಘಾತ ದಾಖಲಾಗುವ ಪ್ರಕರಣಗಳಲ್ಲಿ ಯುವ ಚಾಲಕರ ಸಂಖ್ಯೆ ಅಧಿಕ. ಕುಡಿದ ನಶೆಯಲ್ಲೋ, ವೇಗವಾಗಿ ವಾಹನ ಚಲಾಯಿಸುವ ಹುಮ್ಮಸ್ಸಿನಲ್ಲಿ ಪರರ ಪ್ರಾಣದೊಂದಿಗೆ ತಮ್ಮ ಜೀವಕ್ಕೂ ಕಂಟಕ ತರುತ್ತಿದ್ದಾರೆ. ವೇಗದ ಚಾಲನೆ ಬಗ್ಗೆ ಸಂಚಾರ ಪೊಲೀಸರು ನಿರಂತರವಾಗಿ ಜಾಗೃತಿ ಕಾರ್ಯಾಗಾರ ಮಾಡಿದರೂ ಎಚ್ಚೆತ್ತುಕೊಳ್ಳದ ಯುವ ಚಾಲಕರು ದುರಂತಗಳಿಗೆ ಕಾರಣರಾಗುತ್ತಿದ್ದಾರೆ. ಅಪಘಾತವಾದಾಗ ತನ್ನ ತಪ್ಪನ್ನು ಸಾರ್ವಜನಿಕರು ಗಮನಿಸಿ ಹಲ್ಲೆ ಮಾಡಬಹುದು ಎಂಬ ಹೆದರಿಕೆಯಿಂದ‌ ಸ್ಥಳದಿಂದ ಪರಾರಿಯಾಗುತ್ತಾರೆ. ಚಾಲನಾ ಪರವಾನಗಿ ಸೇರಿ ದಾಖಲಾತಿ ಇಲ್ಲದಿರುವುದು ಹಾಗೂ ಬಂಧನ ಭೀತಿಯಿಂದಲೂ ಚಾಲಕರು ಎಸ್ಕೇಪ್ ಆಗುವ ಸಂಖ್ಯೆ‌ ಹೆಚ್ಚಿದೆ.

ಹಿಟ್ ಅಂಡ್ ರನ್ ಅಂಕಿ-ಅಂಶ:
ವರ್ಷ- ಅಪಘಾತ ಪ್ರಕರಣಗಳು
2019 1601
2020 979
2021 785
2022 (ಜನವರಿ ಅಂತ್ಯಕ್ಕೆ) 125

ಇದನ್ನೂಓದಿ: ಬಜೆಟ್​ನಲ್ಲಿ 5 ಸಾವಿರ ವಸತಿ ರಹಿತ ಪೌರ ಕಾರ್ಮಿಕರಿಗೆ ಮನೆ.. ಸಚಿವ ಎಂಟಿಬಿ ನಾಗರಾಜ್​ ಹರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.