ಬೆಂಗಳೂರು: ನಿನ್ನೆ ಸುರಿದ ಧಾರಾಕಾರ ಮಳೆಗೆ ನಾಯಂಡಹಳ್ಳಿಯ ಪ್ರಮೋದ್ ಲೇಔಟ್ನಲ್ಲಿ ರಾಜಕಾಲುವೆ ಒಡೆದು, ಆಸ್ತಿ-ಪಾಸ್ತಿಗೆ ಹಾನಿ ಉಂಟಾಗಿದೆ.
ಮನೆಗಳಿಗೆ 8 ಅಡಿ ನೀರು ನುಗ್ಗಿ ರಾತ್ರಿಯ ವೇಳೆ ಜನರು ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಗಡೆ ಬಂದಿದ್ದಾರೆ. ಅಪಾರ ಪ್ರಮಾಣದ ಆಸ್ತಿ-ಪಾಸ್ತಿ, ಮನೆಯಲ್ಲಿನ ಸಾಮಗ್ರಿಗಳು ಸಂಪೂರ್ಣ ಹಾನಿಗೊಳಗಾಗಿವೆ.
ರಾತ್ರಿಯೇ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಕೋಡಿಹಳ್ಳಿ ಅಂಡರ್ ಪಾಸ್ ಬಂದ್ ಮಾಡಲಾಗಿದೆ. ಕೆಲ ಪ್ರದೇಶಗಳಲ್ಲಿ 10 ಸೆಂ.ಮೀಟರ್ಗೂ ಅಧಿಕ ಮಳೆ ವರದಿಯಾಗಿದೆ. ಮೊದಲ ದಿನ ಸುರಿದಿದ್ದ ಧಾರಾಕಾರ ಮಳೆಗೆ 40ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಇನ್ನೂ ಪರಿಸ್ಥಿತಿ ಸುಧಾರಿಸಿಲ್ಲ.
ಹೀಗಿರುವಾಗ ಮತ್ತೆ ನಗರದಲ್ಲಿ ಧಾರಾಕಾರ ಮಳೆಯಾಗಿದೆ. ಬಿಬಿಎಂಪಿ ಕಂಟ್ರೋಲ್ ರೂಮ್ ಮಾಹಿತಿ ಪ್ರಕಾರ, ನಗರದಲ್ಲಿ ಇನ್ನೂ 3 ದಿನಗಳ ಕಾಲ ಭಾರೀ ಮಳೆಯಾಗಲಿದೆ. ಅಗ್ರಹಾರ ದಾಸರಹಳ್ಳಿಯಲ್ಲಿ ಅತಿ ಹೆಚ್ಚು 109 ಮಿ.ಮೀ ಮಳೆಯಾಗಿದೆ. ಕೊಟ್ಟಿಗೆಪಾಳ್ಯದಲ್ಲಿ 85 ಮಿ.ಮೀ, ಬಸನವಗುಡಿ 81 ಮಿ.ಮೀ, ರಾಜಾಜಿನಗರ 78 ಮಿ.ಮೀ, ಚೊಕ್ಕಸಂದ್ರ 76 ಮಿ.ಮೀ , ಚಾಮರಾಜಪೇಟೆ 70 ಮಿ.ಮೀ ಮಳೆಯಾಗಿದೆ.
ನಾಗಪುರ 69 ಮಿ.ಮೀ, ಕಾಟನ್‌ಪೇಟೆ ಹಾಗೂ ದೊಡ್ಡಬಿದರಕಲ್ಲಿನಲ್ಲಿ ತಲಾ 68 ಮಿ.ಮೀ, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 67 ಮಿ.ಮೀ, ಹೆಗ್ಗನಹಳ್ಳಿ ಹಾಗೂ ವಿದ್ಯಾಪೀಠದಲ್ಲಿ ತಲಾ 64 ಮಿ.ಮೀ, ಮಾರುತಿ ಮಂದಿರ 53 ಮಿ.ಮೀ, ಗಾಳಿ ಆಂಜನೇಯ ದೇವಸ್ಥಾನ 52 ಮಿ.ಮೀ, ಶಿವನಗರ 79.5 ಮಿ.ಮೀ, ದೊಡ್ಡಬಿದರಕಲ್ಲು 85 ಮಿ.ಮೀ, ಜ್ಞಾನಭಾರತಿ 37 ಮಿ.ಮೀ, ನಂದಿನಿ ಲೇಔಟ್ 53 ಮಿ.ಮೀ, ಹಂಪಿನಗರ 45 ಮಿ.ಮೀ, ಹೆಮ್ಮಿಗೆಪುರ 47 ಮಿ.ಮೀ, ಬಸವನಗುಡಿ 82 ಮಿ.ಮೀ, ಪಟ್ಟಾಭಿರಾಮನಗರ 50 ಮಿ.ಮೀ ಹಾಗೂ ಕುಮಾರಸ್ವಾಮಿ ಬಡಾವಣೆಯಲ್ಲಿ 48 ಮಿ.ಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.