ETV Bharat / state

ಹೈ ಫೈ ನೌಕರಿ ಬಿಟ್ಟು ಡ್ರಗ್ಸ್​ ಗೀಳಿಗೆ ಬಿದ್ದ ಆರೋಪಿ: ಕಂಬಿ ಹಿಂದಿರುವ ಅಗರವಾಲ್​ಗೆ ಈಗ ಪಶ್ಚಾತ್ತಾಪ! - ಸ್ಯಾಂಡಲ್​ವುಡ್ ಡ್ರಗ್ ಮಾಫಿಯಾ

ನಟಿ ರಾಗಿಣಿ ಜೊತೆ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದ ಆದಿತ್ಯ ಅಗರ್​ವಾಲ್​, ಪಾರ್ಟಿಗೆ ತೆರಳುವಾಗ ಡ್ರಗ್ಸ್​ ಕಿಂಗ್​ಪಿನ್​ ವಿರೇನ್ ಖನ್ನಾ ಸಹವಾಸ ಮಾಡಿ ಡ್ರಗ್ಸ್​ ಮೇಲಿನ ವ್ಯಾಮೋಹಕ್ಕೆ ವಿದೇಶದಲ್ಲಿನ ಕೆಲಸ ಬಿಟ್ಟು ಬೆಂಗಳೂರಿಗೆ ಬಂದು ಸೆಟಲ್ ಆಗಿದ್ದ. ಈಗ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದಾನೆ ಎನ್ನಲಾಗ್ತಿದೆ.

agarval
agarval
author img

By

Published : Sep 22, 2020, 10:23 AM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣದಲ್ಲಿ ಭಾಗಿಯಾದ ಕಾರ್ಯಕ್ರಮ ಆಯೋಜಕ ವಿರೇನ್ ಖನ್ನಾ ಜೊತೆ ಸೇರಿ ಸದ್ಯ ಪೊಲೀಸ್ ವಶದಲ್ಲಿರುವ ಟೆಕ್ಕಿ ಆದಿತ್ಯ ಅಗರ್​ವಾಲ್​ ಸದ್ಯ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುತ್ತಿದ್ದಾನೆ ಎಂದು ಹೇಳಲಾಗ್ತಿದೆ.

ನಟಿ ರಾಗಿಣಿ ಜೊತೆ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದ ಆದಿತ್ಯ ಅಗರ್​ವಾಲ್​, ವೃತ್ತಿಯಲ್ಲಿ ಖ್ಯಾತ ಸಾಫ್ಟ್​ವೇರ್​ ಎಂಜಿನಿಯರ್ ಆಗಿದ್ದ. ವಿದೇಶಗಳಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿದ್ದ ಅಗರ್​ವಾಲ್​ಗೆ ವರ್ಷಕ್ಕೆ 48 ಲಕ್ಷ ರೂ.ಪ್ಯಾಕೇಜ್ ಬರುತ್ತಿತ್ತಂತೆ. ಆದರೆ ಪಾರ್ಟಿಗೆ ತೆರಳುವಾಗ ಡ್ರಗ್ಸ್​ ಕಿಂಗ್​ಪಿನ್​ ವಿರೇನ್ ಸಹವಾಸಕ್ಕೆ ಬಿದ್ದು ಡ್ರಗ್ಸ್​ ಮೇಲಿನ ವ್ಯಾಮೋಹಕ್ಕೆ ವಿದೇಶದಲ್ಲಿನ ಕೆಲಸ ಬಿಟ್ಟು ಬೆಂಗಳೂರಿಗೆ ಬಂದು ವಾಸವಾಗಿದ್ದ.

ಆತನ ಫ್ಲಾಟ್​ ಬಾಡಿಗೆಯೇ ತಿಂಗಳಿಗೆ 42 ಸಾವಿರ ರೂಪಾಯಿ. ಅಷ್ಟೇ ಅಲ್ಲ, ಅಗರ್​ವಾಲ್​ ಹೋಟೆಲ್​ಗಳಲ್ಲಿ ವೇಟರ್ಸ್​ಗೆ ಸಾವಿರಾರು ರೂಪಾಯಿ ಟಿಪ್ಸ್ ಕೊಡ್ತಿದ್ದ ಅನ್ನೋದು ವಿಚಾರಣೆ ವೇಳೆ ತಿಳಿದುಬಂದಿದೆ.

ಸದ್ಯ ಸಿಸಿಬಿ ವಶದಲ್ಲಿರುವ ಅಗರ್​ವಾಲ್ ಸ್ಯಾಂಡಲ್​ವುಡ್ ಡ್ರಗ್ಸ್​ ನಂಟು ಆರೋಪ ಪ್ರಕರಣದ ಕೆಲ ರೋಚಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ವಿರೇನ್ ಖನ್ನಾ ಸಹವಾಸ ಮಾಡಿ ಡ್ರಗ್ಸ್​ ಗೀಳು ಹಚ್ಚಿಕೊಂಡು ಯುವತಿಯರ ಶೋಕಿ ಹೊಂದಿದ್ದ. ಇದರಲ್ಲಿ ಬಹುತೇಕ ಹೈ ಫೈ ನಟಿಯರು ಮಾಡೆಲ್​ಗಳು ಇರುವ ವಿಚಾರ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗ್ತಿದೆ.‌

ಆದಿತ್ಯ ಅಗರ್​ವಾಲ್​ ವೃತ್ತಿಯಲ್ಲಿ ಟಾಪ್ ಮೋಸ್ಟ್ ಸಾಫ್ಟ್‌ವೇರ್ ಎಂನಿಯರ್ ಆಗಿರುವ ಕಾರಣ ಸಿಸಿಬಿ ಅಧಿಕಾರಿಗಳು ಆತ ಮಾಡಿದ ತಪ್ಪಿನ ಬಗ್ಗೆ ಬುದ್ಧಿ ಹೇಳಿದ್ದಾರೆ. ಸದ್ಯ ಅಗರ್​ವಾಲ್​ ಸೂಚಿಸಿದ ಕೆಲ ಪೆಡ್ಲರ್​ಗಳಿಗೆ ನೋಟಿಸ್ ಕೊಡಲು ಸಿಸಿಬಿ ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.