ETV Bharat / state

ಯುವಕರು ಕಾರಿನ ಲೈಟ್ ಒಡೆದು ಹಾಕಿದ್ದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಳೆಂದು ಪೊಲೀಸರಿಗೆ ದೂರು ನೀಡಿದ ತಾಯಿ - Etv Bharat News

ಯುವಕರು ತಮ್ಮ ಕಾರಿನ ಲೈಟ್ ಒಡೆದಿದ್ದಕ್ಕೆ ಮನನೊಂದು ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಆರೋಪಿಸಿದ್ದಾರೆ.

Bengaluru News
ಬೆಂಗಳೂರು ಸುದ್ದಿ
author img

By

Published : Jul 3, 2023, 8:13 AM IST

ಬೆಂಗಳೂರು: ಕಾರಿನ ಲೈಟ್ ಒಡೆದು ಹಾಕಿದ್ದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ತಾಯಿಯೊಬ್ಬರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ನಗರದ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಘಟನೆ ನಡೆದಿದೆ. ಹೆಚ್‌ಎಸ್‌ಆರ್ ಲೇಔಟ್‌ನ ನಿವಾಸಿ ಫಾಜಿಲಾ ದೂರು ನೀಡಿದವರು.

ಫಾಜಿಲಾ ವಾಸವಿದ್ದ ಮನೆಯ ಮುಂದೆ ಯುವಕರು ಫುಟ್ಬಾಲ್ ಆಟ ಆಡುತ್ತಿದ್ದರಂತೆ. ಇದರಿಂದ ತಮಗೆ ಸಮಸ್ಯೆ ಆಗುತ್ತಿದೆ ಎಂದು ಫಾಜಿಲಾ ಯುವಕರಿಗೆ ಹೇಳಿದ್ದರು. ಆ ಬಳಿಕ ಸಣ್ಣ ಜಗಳವಾಗಿತ್ತು. ಯುವಕರು, ಫಾಜಿಲಾ ಅವರ ಕಾರಿನ ಲೈಟ್ ಒಡೆದಿದ್ದಾರೆ ಎಂಬ ಆರೋಪ ದೂರಿನಲ್ಲಿದೆ.

ನಮ್ಮ ಮುಂದಿನ ರಸ್ತೆಯಲ್ಲಿರುವ ಪಾರ್ಕ್​ನಲ್ಲಿ ಯುವಕರು ಫುಟ್ಬಾಲ್ ಆಡುವುದರಿಂದ ಸಮಸ್ಯೆ ಆಗಿ, ಈ ಬಗ್ಗೆ ಯುವಕರಿಗೆ ತಿಳಿಸಿದ್ದೆ. ಇದರಿಂದ ಜಗಳವಾಗಿತ್ತು. ನಂತರ ಅವರು ನಮ್ಮ ಕಾರಿನ ಲೈಟ್ ಒಡೆದಿದ್ದಾರೆ ಎಂದು ಆರೋಪಿಸಿ ಹೆಚ್‌ಎಸ್‌ಆರ್ ಲೇಔಟ್‌ ಠಾಣೆಯಲ್ಲಿ ಫಾಜಿಲಾ ದೂರು ನೀಡಿದ್ದಾರೆ. ಇದರಿಂದಾಗಿ ಮನನೊಂದು ನನ್ನ 20 ವರ್ಷ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಫಾಜಿಲಾ ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ: ಆತ್ಮಹತ್ಯೆಗೂ ಪ್ರಚೋದನೆಗೂ ಸಾಕಷ್ಟು ಅಂತರವಿದೆ ಎಂದು ಪ್ರಕರಣ ರದ್ದು ಪಡಿಸಿ ಹೈಕೋರ್ಟ್ ಆದೇಶ

ಆದರೆ, ದೂರಿನಲ್ಲಿ ಸಾಕಷ್ಟು ಅನುಮಾನ ಕಂಡು ಬಂದಿದೆ. ಪೊಲೀಸರು ವಿಚಾರಣೆ ನಡೆಸಿ ತನಿಖೆ ನಡೆಸಿದಾಗ ಫಾಜಿಲಾ ಅವರ ಮಗಳು ಖಿನ್ನತೆಯಿಂದ ಬಳಲುತ್ತಿದ್ದು, ಅದೇ ಕಾರಣದಿಂದ ಆತ್ಮಹತ್ಯೆೆಗೆ ಶರಣಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ.. ಮೂವರ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ: ಪೀಣ್ಯ ಠಾಣಾ ವ್ಯಾಪ್ತಿಯ ಚನ್ನನಾಯಕನಪಾಳ್ಯದಲ್ಲಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಭಾನುವಾರ ಸಿಕ್ಕಿತ್ತು. ಸ್ಥಳಕ್ಕೆ ಪೀಣ್ಯಾ ಠಾಣಾ ಪೊಲೀಸರು, ಸೋಕೋ (ಸೀನ್ ಆಫ್ ಕ್ರೈಂ ಆಫೀಸರ್ಸ್) ತಂಡ ಹಾಗೂ ಉತ್ತರ ವಿಭಾಗದ ಡಿಸಿಪಿ‌ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.

ಚನ್ನನಾಯಕನಪಾಳ್ಯದ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿ ಬಳಿಕ ಪೆಟ್ರೋಲ್ ಸುರಿದು ಶವವನ್ನು ಸುಟ್ಟು ಹಾಕಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಮೃತರ ಗುರುತು ಮತ್ತು ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ. ರಾತ್ರಿ ವೇಳೆ ಯಾರು ಬಂದಿದ್ದರು ಎಂಬ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಡಿಸಿಪಿ ಶಿವಪ್ರಕಾಶ್ ದೇವರಾಜ್ ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಪ್ರತಿಕ್ರಿಯೆ ನೀಡಿದ್ದರು.

ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ಅಪರಿಚಿತ ವ್ಯಕ್ತಿಯ ಬರ್ಬರ ಕೊಲೆ.. ಆ ಮರ್ಡರ್​ ಬಗ್ಗೆ ಡಿಸಿಪಿ ಹೇಳಿದ್ದು ಹೀಗೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.