ETV Bharat / state

Bengaluru crime: 1,500 ಎಳನೀರು ಕಳ್ಳತನ! UPI ಪಾವತಿಯಲ್ಲಿ ಸಿಕ್ಕಿಬಿದ್ದ 'ಎಳನೀರು ಕಳ್ಳರು'! - ಈಟಿವಿ ಭಾರತ್​ ಕನ್ನಡ ನ್ಯೂಸ್​

ಬೆಂಗಳೂರಿನಲ್ಲಿ ನಿರಂತರವಾಗಿ ಎಳನೀರು ಕಳ್ಳತನ ಮಾಡುತ್ತಿದ್ದ ಮೂವರನ್ನು ಜಯನಗರ ಪೊಲೀಸರು ಸೆರೆ ಹಿಡಿದಿದ್ದಾರೆ.

ಎಳನೀರು ಕಳ್ಳರು
ಎಳನೀರು ಕಳ್ಳರು
author img

By

Published : Aug 17, 2023, 5:06 PM IST

Updated : Aug 18, 2023, 3:22 PM IST

ಸಿಕ್ಕಿಬಿದ್ದ 'ಎಳನೀರು ಕಳ್ಳರು'!

ಬೆಂಗಳೂರು : ರಸ್ತೆಬದಿಯಲ್ಲಿ ಮಾರಾಟಕ್ಕಿಡುತ್ತಿದ್ದ ಎಳನೀರನ್ನು ಕದ್ದು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಟಾಟಾ ಏಸ್ ವಾಹನದಲ್ಲಿ ಬಂದು 1,500 ಎಳನೀರು ಕದ್ದು ತಲೆಮರೆಸಿಕೊಂಡಿದ್ದ ಗೌತಮ್, ರಘು ಹಾಗೂ ಮಣಿಕಂಠ ಬಂಧಿತ ಆರೋಪಿಗಳು.

ಪ್ರಕರಣದ ಸಂಪೂರ್ಣ ವಿವರ: ಜಯನಗರ ರಾಷ್ಟ್ರೀಯ ವಿದ್ಯಾಲಯ ಮೆಟ್ರೊ ನಿಲ್ದಾಣದ ಸಮೀಪ ರಾತ್ರೋರಾತ್ರಿ ಟಾಟಾ ಏಸ್ ವಾಹನದ ನಂಬರ್ ಪ್ಲೇಟಿಗೆ ಮಸಿ ಬಳಿದು ಬರುತ್ತಿದ್ದ ಆರೋಪಿಗಳು ಎಳನೀರು ಅಂಗಡಿಗಳಲ್ಲಿ ನಿರಂತರವಾಗಿ ಕಳ್ಳತನ ಮಾಡುತ್ತಿದ್ದರು. ಆಗಸ್ಟ್ 7ರಂದು ಮುಂಜಾನೆ ಕಳ್ಳತನ ಮಾಡಿದ್ದ ಆರೋಪಿಗಳ ವಿರುದ್ಧ ಅಂಗಡಿ ಮಾಲೀಕ ಸಲೀಂ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಘಟನಾ ಸ್ಥಳದಲ್ಲಿ ಆರೋಪಿಗಳ ಯಾವುದೇ ಸುಳಿವು ದೊರೆತಿರಲಿಲ್ಲ. ಸಿಸಿಟಿವಿ ದೃಶ್ಯ ಆಧರಿಸಿ ಟಾಟಾ ಏಸ್ ವಾಹನ ಹೋದ ದಾರಿಯನ್ನೇ ಬೆನ್ನುಬಿದ್ದ ಪೊಲೀಸರು 60ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದರು. ಆರೋಪಿಗಳು ಉತ್ತರಹಳ್ಳಿ ಬಳಿ ಟೀ ಕುಡಿದಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಟೀ ಕುಡಿದು ಅಂಗಡಿಗೆ ಬಂದ ಆರೋಪಿಗಳು ಯುಪಿಐ ಮೂಲಕ ಹಣ ಪಾವತಿಸಿದ್ದರು.

ಇದನ್ನೂ ಓದಿ : ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೇರಳದ ನಾಲ್ವರು ಆರೋಪಿಗಳು ಅರೆಸ್ಟ್

ಇದೇ ಆಧಾರದಲ್ಲಿ ಯಾವ ಬ್ಯಾಂಕ್ ಖಾತೆಯಿಂದ ಹಣ ಸಂದಾಯ ಆಗಿದೆ ಎಂದು ಪರಿಶೀಲಿಸಿದ ಪೊಲೀಸರು, ಕೊನೆಗೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ವಿಚಾರಣೆ ನಡೆಸಲಾಗುತ್ತಿದೆ. ಈ ಮುನ್ನವೂ ಸಹ ಎಳನೀರು ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ಬಂದಿದೆ. ಅಲ್ಲದೇ ಆರೋಪಿಗಳ ಪೈಕಿ ರಘು ವಿರುದ್ಧ ಈ ಹಿಂದೆ ಕೊಲೆಯತ್ನ ಪ್ರಕರಣ ಇರುವುದು ತನಿಖೆಯ ವೇಳೆ ಪತ್ತೆಯಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ. ಕೃಷ್ಣಕಾಂತ್ ತಿಳಿಸಿದ್ದಾರೆ.

ಅಂತರರಾಜ್ಯ ಮೊಬೈಲ್​ ಕಳ್ಳರು ಸೆರೆ: ಮೊಬೈಲ್ ಫೋನ್ ಕದ್ದು, ಗೂಗಲ್ ಪೇ, ಫೋನ್ ಪೇ ಆ್ಯಪ್‌ಗಳ ಮೂಲಕ ಹಣ ಎಗರಿಸುತ್ತಿದ್ದ ಮೂವರು ಅಂತರರಾಜ್ಯ ಕಳ್ಳರ ತಂಡವನ್ನು ಬುಧವಾರ ತಾಲೂಕಿನ ಗುತ್ತಲ ಪೊಲೀಸರು ಬಂಧಿಸಿದ್ದರು. ಆಂಧ್ರಪ್ರದೇಶದ ಮತ್ತು ತೆಲಂಗಾಣ ರಾಜ್ಯದ ಗುಂಜಾರಿಯಾ ಸಾಯಿಕುಮಾರ್, ಅಕುಲ ವಡಿವೆಲ್ ಹಾಗೂ ಓರ್ವ 12 ವರ್ಷದ ಬಾಲಕ ಬಂಧಿತರು. ಸುಮಾರು 1.36 ಲಕ್ಷ ರೂ ಹಣ, 27 ವಿವಿಧ ಕಂಪನಿಗಳ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಟಾಟಾ ಇಂಡಿಗೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಗ್ರಾಮೀಣ ಸಿಪಿಐ ಸಂತೋಷ ಪವಾರ ಮತ್ತು ಪಿಎಸ್ಐ ಶ‌ಂಕರಗೌಡ ಪಾಟೀಲ ಅವರ ನೇತ್ರತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು.

ಇದನ್ನೂ ಓದಿ : ಆಹ್ವಾನ ಪತ್ರ ಕೊಡುವ ನೆಪದಲ್ಲಿ ಬಂದ ಅಪರಿಚಿತರು: ದಂಪತಿಗೆ ಚಾಕುವಿನಿಂದ ಇರಿದು ಪರಾರಿ

Last Updated : Aug 18, 2023, 3:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.