ETV Bharat / state

ಶಕ್ತಿ ಸೌಧಕ್ಕೂ ತಟ್ಟಿದ ಬೆಂಗಳೂರು ಬಂದ್ ಬಿಸಿ: ಸಚಿವಾಲಯದ ಹಲವು ಸಿಬ್ಬಂದಿ ಗೈರು - ಸಿಬ್ಬಂದಿ ಗೈರು

ಬೆಂಗಳೂರು ಬಂದ್ ಬಿಸಿ ವಿಧಾನಸೌಧಕ್ಕೂ ತಟ್ಟಿದೆ. ಸಚಿವಾಲಯದ ಹಲವು ಸಿಬ್ಬಂದಿ ಇಂದು ಕರ್ತವ್ಯಕ್ಕೆ ಗೈರಾಗಿದ್ದಾರೆ.

vidhana soudha
ವಿಧಾನಸೌಧ
author img

By ETV Bharat Karnataka Team

Published : Sep 26, 2023, 1:06 PM IST

ಬೆಂಗಳೂರು: ಬೆಂಗಳೂರು ಬಂದ್ ಬಿಸಿ ಶಕ್ತಿ ಸೌಧಕ್ಕೂ ವ್ಯಾಪಿಸಿದೆ. ಹಲವು ಸಚಿವಾಲಯದ ಸಿಬ್ಬಂದಿ ಕೆಲಸಕ್ಕೆ ಗೈರಾಗಿದ್ದು, ವಿಧಾನಸೌಧ ಕಾರಿಡಾರ್​ ಬಿಕೋ ಎನ್ನುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಸಾಮಾನ್ಯವಾಗಿ ಸಿಬ್ಬಂದಿ ವಿಧಾನಸೌಧಕ್ಕೆ ಸರದಿಯೋಪಾದಿಯಲ್ಲಿ ಆಗಮಿಸುತ್ತಾರೆ. ಆದರೆ ಇಂದು ಸಿಬ್ಬಂದಿ ಸಂಖ್ಯೆ ವಿರಳವಾಗಿತ್ತು. ಬೆಳಗ್ಗೆ 11 ಗಂಟೆಯಾದರೂ ಸಿಬ್ಬಂದಿ ಹಾಜರಾತಿ ಪ್ರಮಾಣ ವಿರಳವಾಗಿದೆ. ಕೆಲ ಸಿಬ್ಬಂದಿ ತಡವಾಗಿ ಕಚೇರಿಗಳಿಗೆ ಆಗಮಿಸುತ್ತಿರುವುದು ಕಂಡುಬಂತು.

ಸಚಿವಾಲಯ ನೌಕರರ ಸಂಘ ಬೆಂಗಳೂರು ಬಂದ್​​ಗೆ ನೈತಿಕ ಬೆಂಬಲ ಸೂಚಿಸಿದೆ. ವಿಧಾ‌ನಸೌಧ, ವಿಕಾಸಸೌಧ ಹಾಗೂ ಎಂ.ಎಸ್.ಕಟ್ಟಡದಲ್ಲಿ ಸಿಬ್ಬಂದಿ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು. ಬೆಂಗಳೂರು ಬಂದ್ ಇದ್ದರೂ ಕೆಎಸ್ಆರ್​ಟಿಸಿ, ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ಸೇವೆ ಸಹಜವಾಗಿದೆ. ಆದರೂ ಹಲವು ಸರ್ಕಾರಿ ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿದ್ದಾರೆ.

ಇದನ್ನೂ ಓದಿ: ರಾಮನಗರದಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್‌ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಆಕ್ರೋಶ- ವಿಡಿಯೋ

ಸಚಿವಾಲಯದ ಕಚೇರಿಗಳಲ್ಲಿ ಶೇ. 30-40ರಷ್ಟು ಸಿಬ್ಬಂದಿ ಗೈರಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಸಾಮಾನ್ಯವಾಗಿ 10:30ರ ಬಳಿಕ ಗಿಜಿಗಿಡುವ ವಿಧಾನಸೌಧ 3ನೇ ಮಹಡಿ ಕಾರಿಡಾರ್ ಇಂದು ಬಿಕೋ ಎನ್ನುತ್ತಿದೆ. ವಿಧಾನಸೌಧ ಆವರಣದಲ್ಲಿ ವಾಹನಗಳ ಸಂಖ್ಯೆಯೂ ವಿರಳವಾಗಿದೆ. ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ರೈತ ಸಂಘಟನೆ ಸೇರಿ ಹಲವು ಸಂಘಟನೆಗಳು ಇಂದು ಬೆಂಗಳೂರು ಬಂದ್ ನಡೆಸುತ್ತಿವೆ. ಬಂದ್​​ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಆದರೆ, ಬೆಂಗಳೂರು ಪೊಲೀಸ್ ಆಯುಕ್ತರು ನಗರದಲ್ಲಿ ಸೆಕ್ಷನ್ 144 ವಿಧಿಸಿದ ಕಾರಣ ಯಾವುದೇ ರ‍್ಯಾಲಿ, ಮೆರವಣಿಗೆಗಳಿಗೆ ಅವಕಾಶ ಇಲ್ಲ.

ಇದನ್ನೂ ಓದಿ: ಕಾವೇರಿ: ಪ್ರತಿಭಟನಾಕಾರರು ಪೊಲೀಸರ ವಶಕ್ಕೆ, ಬೆಂಗಳೂರು ಬಂದ್​ಗೆ ಮಿಶ್ರ ಪ್ರತಿಕ್ರಿಯೆ​

ಇನ್ನು ಕೆಎಸ್ಆರ್​ಟಿಸಿ, ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ಸೇವೆ ಎಂದಿನಂತಿದೆ. ಆಟೋ, ಖಾಸಗಿ ವಾಹನಗಳ ಸಂಚಾರದಲ್ಲೂ ಹೆಚ್ಚಿನ ವ್ಯತ್ಯಯ ಆಗಿಲ್ಲ. ಆದರೆ ಬಹುತೇಕ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಓಡಾಟ ವಿರಳವಾಗಿದೆ. ಬೆಂಗಳೂರು ಬಂದ್​​ಗೆ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಕೂಡ ಬೆಂಬಲ ಸೂಚಿಸಿದೆ.

ಬಿಎಂಟಿಸಿ ಬಸ್‌, ಖಾಸಗಿ ವಾಹನ ಸಂಚಾರ: ಬಿಎಂಟಿಸಿ ಹಾಗೂ ಕೆಎಸ್‍ಆರ್​ಟಿಸಿ ನೌಕರರ ಸಂಘದಿಂದ ಬಂದ್​ಗೆ ಬೆಂಬಲ ನೀಡುವುದಾಗಿ ತಿಳಿಸಲಾಗಿತ್ತು. ಮಂಗಳವಾರ ಬಿಎಂಟಿಸಿ ಬಸ್‍ಗಳನ್ನು ರಸ್ತೆಗೆ ಇಳಿಸಲ್ಲ. ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಾವು ಬೆಂಬಲ ನೀಡುತ್ತೇವೆ. ನಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಿದರೂ ಪರವಾಗಿಲ್ಲ. ಬೆಳಗ್ಗೆ 6 ರಿಂದ ಸಂಜೆ 6ವರೆಗೆ ಬಸ್​​ಗಳನ್ನು ರಸ್ತೆಗೆ ಇಳಿಸಲ್ಲ ಎಂದು ಸಂಘ ಹೇಳಿತ್ತು. ಆದರೆ ಇದೀಗ ಬಿಎಂಟಿಸಿ ಎಂದಿನಂತೆ ಕಾರ್ಯಾಚರಿಸಲಿದೆ ಎಂದು ಸ್ಪಷ್ಟಪಡಿಸಿದೆ. ಮಾತ್ರವಲ್ಲದೇ ಖಾಸಗಿ ವಾಹನಗಳೂ ಸಹ ಸಂಚರಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಇದನ್ನೂ ಓದಿ: ಬೆಂಗಳೂರು ಬಂದ್: ನಗರದಲ್ಲಿ ಎಂದಿನಂತೆ ಬಿಎಂಟಿಸಿ ಬಸ್‌, ಖಾಸಗಿ ವಾಹನ ಸಂಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.