ETV Bharat / state

ಯುಎಸ್ ಪ್ರಜೆ ಮರೆತುಹೋದ ಪಾಸ್‌ಪೋರ್ಟ್, ದಾಖಲೆ ಪತ್ರ ಹಿಂದಿರುಗಿಸಿದ ಆಟೋ ಚಾಲಕನಿಗೆ ಸನ್ಮಾನ

ಯುಎಸ್ ಪ್ರಜೆ ಮರೆತುಹೋಗಿದ್ದ ಪಾಸ್‌ಪೋರ್ಟ್, ವೀಸಾ ಮತ್ತಿತರ ದಾಖಲೆಗಳಿದ್ದ ಪರ್ಸ್​ ಹಿಂದಿರುಗಿಸಿ ಬೆಂಗಳೂರಿನ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

author img

By

Published : Jan 12, 2023, 1:47 PM IST

Auto driver returns US citizens forgotten purse  Auto driver returns US citizens forgotten passport  US citizens forgotten purse left in auto  ಯುಎಸ್ ಪ್ರಜೆ ಮರೆತುಹೋದ ಪಾಸ್‌ಪೋರ್ಟ್  ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ  ಆಟೋದಲ್ಲಿ ಮರೆತುಹೋದ ಪರ್ಸ್​ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ
ಪಾಸ್​ ಪೋರ್ಟ್​ ಸೇರಿದಂತೆ ಇತರ ವಸ್ತುಗಳಿದ್ದ ಪರ್ನ್​ನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಬೆಂಗಳೂರು : ಯುಎಸ್‌ಎ ಪ್ರಜೆಯೊಬ್ಬರು ತಮ್ಮ ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ ಪರ್ಸ್​ ಹಿಂದಿರುಗಿಸುವ ಮೂಲಕ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಬೆಂಗಳೂರಿನ ಹನುಮಂತ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯುಎಸ್ಎ ಮೂಲದ ಮಹಿಳೆ ಆಟೋ ರಿಕ್ಷಾದಲ್ಲಿ ಮರೆತು ಹೋದ ಅವರ ಯುಎಸ್ಎ ಪಾಸ್‌ಪೋರ್ಟ್, ವೀಸಾ, ಡಾಲರ್ಸ್ ಇದ್ದ ವ್ಯಾಲೆಟ್​ ಅನ್ನು ಚಾಲಕ ಪೊಲೀಸ್ ಠಾಣೆಗೆ ಹಿಂದಿರುಗಿಸಿದ್ದಾರೆ. ಯುಎಸ್ಎ ಮೂಲದ ವೈದ್ಯೆ ಜ್ಯೋತಿ ಒಂದು ದಿನದ ಹಿಂದೆ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ಓಡಾಡುವಾಗ ಗಾಂಧಿಬಜಾರ್ ಬಳಿ ಕಿಶೋರ್ ಎಂಬುವವರ ಆಟೋದಲ್ಲಿ ತಮ್ಮ ಪರ್ಸ್ ಮರೆತು ಹೋಗಿದ್ದರು.

ಅಗತ್ಯ ದಾಖಲಾತಿಗಳನ್ನು ಕಳೆದುಕೊಂಡ ಜ್ಯೋತಿ ಪುನಃ ಅವುಗಳನ್ನು ಸಿದ್ಧಪಡಿಸಿಕೊಳ್ಳಬೇಕಾದ ಅಗತ್ಯ ಎದುರಾಗಿತ್ತು. ಆದರೆ ಆಟೋದಲ್ಲಿ ಮರೆತುಹೋದ ವಸ್ತುಗಳನ್ನ ಗಮನಿಸಿದ ಚಾಲಕ‌ ಕಿಶೋರ್ ತಕ್ಷಣ ಅವುಗಳನ್ನು ಹನುಮಂತ ನಗರ ಪೊಲೀಸ್ ಠಾಣೆಗೆ ತಂದೊಪ್ಪಿಸಿದ್ದಾರೆ. ಬಳಿಕ ವಾರಸುದಾರರಾದ ಜ್ಯೋತಿಯನ್ನು ಪತ್ತೆ ಹಚ್ಚಿದ ಹನುಮಂತ ನಗರ ಪೊಲೀಸರು ಅವುಗಳನ್ನು ಹಿಂದಿರುಗಿಸಿದರು. ತಮ್ಮ ವಸ್ತುಗಳನ್ನು ಪಡೆದ ಜ್ಯೋತಿ ಸಂತಸ ವ್ಯಕ್ತಪಡಿಸಿದ್ದಲ್ಲದೇ ಆಟೋ ಚಾಲಕ ಕಿಶೋರ್​ಗೆ ಧನ್ಯವಾದ ಅರ್ಪಿಸಿದ್ದಾರೆ.

ವೈಯಕ್ತಿಕವಾಗಿ ಬಳಸಿಕೊಳ್ಳುವ ಅಥವಾ ಕಳೆದುಕೊಂಡವರೇ ಹುಡುಕಿ‌ಕೊಂಡು ಬರಲಿ‌ ಎಂದು ನಿರ್ಲಕ್ಷ್ಯಿಸುವವರ ನಡುವೆ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಕಿಶೋರ್​ಗೆ ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್ ಸನ್ಮಾನಿಸಿದ್ದಾರೆ. ಆಟೋ ಚಾಲಕ ಸಹ ತಾನೂ ಮಾಡಿದ್ದ ಜವಾಬ್ದಾರಿಯುತ ಕೆಲಸಕ್ಕೆ ಸಂತಸಗೊಂಡಿದ್ದಾರೆ.

ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿ: ಈ ಹಿಂದೆ ಇದೇ ರೀತಿಯ ಘಟನೆಯೊಂದು ಡಿಸೆಂಬರ್​ನ ಕೊನೆಯ ವಾರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿತ್ತು. ಸಾರಿಗೆ ಸಿಬ್ಬಂದಿಯೊಬ್ಬರು ಬಸ್ಸಿನಲ್ಲಿ 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಬಿಟ್ಟು ಬೆಳಗಾವಿಗೆ ತೆರಳಿದ್ದ ಪ್ರಯಾಣಿಕರಿಗೆ ಮರಳಿ ಅವರ ವಸ್ತುಗಳನ್ನು ಒಪ್ಪಿಸಿ ಮಾನವೀಯತೆ ಮೆರೆದಿದ್ದರು. ಹಾನಗಲ್ ಶಿರಸಿ ಮಾರ್ಗವಾಗಿ ಸಂಚರಿಸುವ ಸರ್ಕಾರಿ ಬಸ್​​​ನಲ್ಲಿ ಇಸಳೂರಿನಿಂದ ಕವಿತಾ ಹಾಗೂ ಅವರ ಪುತ್ರ ಬಸ್ ಹತ್ತಿ ಶಿರಸಿಗೆ ಬಂದಿದ್ದರು. ಬಸ್ ಇಳಿಯುವ ಆತುರದಲ್ಲಿ ಚಿನ್ನಾಭರಣ ತುಂಬಿದ್ದ ಬ್ಯಾಗನ್ನು ಬಸ್​ನಲ್ಲಿಯೇ ಬಿಟ್ಟು ಹೋಗಿದ್ದರು.

ಕವಿತಾ ಮತ್ತು ಅವರ ಪುತ್ರ ಶಿರಸಿ ಬಸ್​ ಬಿಟ್ಟು ಬೆಳಗಾವಿ ಬಸ್ ಹತ್ತಿ ತೆರಳಿದ್ದಾರೆ. ಬೆಳಗಾವಿಗೆ ಹೋದ ತಕ್ಷಣ ತಮ್ಮ ಬ್ಯಾಗ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಶಿರಸಿ ಡಿಪೋಗೆ ಕರೆಮಾಡಿ ವಿಚಾರಿಸಿದ್ದಾರೆ. ಅಷ್ಟರೋಳಗೆ ಹಾನಗಲ್ ಶಿರಸಿ ಬಸ್​ನ ಚಾಲಕ ವಿನೋದ್ ನಾಯ್ಕ ಹಾಗೂ ನಿರ್ವಾಹಕ ಸೇವಾ ನಾಯ್ಕ ರಾಥೋಡ್ ಬಸ್​ನ್ನು ಡಿಪೋಗೆ ತಂದಾಗ ಅಲ್ಲಿ ಚಿನ್ನಾಭರಣ ಇರುವ ಬ್ಯಾಗ್ ಕಂಡು ಬಂದಿತ್ತು. ಅದನ್ನು ಅಧಿಕಾರಿಗಳಿಗೆ ಪ್ರಾಮಾಣಿಕವಾಗಿ ನೀಡಿದ್ದರು. ಬಳಿಕ ಅವರು ಸಹ ತಮ್ಮ 8 ಲಕ್ಷದ ಚಿನ್ನಾಭರಣವನ್ನು ಪಡೆದು ಸಾರಿಗೆ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದರು.

ಇದನ್ನೂ ಓದಿ: ಚಿನ್ನಾಭರಣ ಕಳೆದುಕೊಂಡಿದ್ದ ಮಹಿಳೆ: ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.