ಬೆಂಗಳೂರು: ಕೊರೊನಾ ಲಾಕ್ಡೌನ್ ನಡುವೆಯೂ ಬೆಂಗಳೂರು ಟ್ರಾಫಿಕ್ ಪೊಲೀಸರು ದಂಡದ ರೂಪದಲ್ಲಿ ಕೋಟಿ ಕೋಟಿ ದಂಡ ಸಂಗ್ರಹಿಸಿದ್ದಾರೆ.
ಹೌದು, ಕಳೆದ ವರ್ಷದಲ್ಲಿ 99 ರೂಪಾಯಿ ಕೋಟಿ ದಂಡ ವಸೂಲಿ ಮಾಡಿದ್ದ ಬೆಂಗಳೂರು ಟ್ರಾಫಿಕ್ ಪೊಲೀಸರು. 5 ತಿಂಗಳ ಲಾಕ್ ಡೌನ್ ಇದ್ರು ಲಕ್ಷಗಟ್ಟಲೇ ಕೇಸ್ ದಾಖಲಿಸಿದ್ದರು. 2020 ರಲ್ಲಿ ಒಟ್ಟು 73,24,289 ಸಂಚಾರಿ ನಿಯಮ ಉಲ್ಲಂಘನೆ ಕೇಸ್‌ಗಳು ದಾಖಲಾಗಿದ್ದವು. ಈ ವೇಳೆ 99.62 ಕೋಟಿ ರೂ.ಗೂ ಅಧಿಕ ದಂಡ ವಸೂಲಿ ಮಾಡಿದ್ದಾರೆ.
ಈ ಬಗ್ಗೆ ಸ್ವತಃ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ಮಾಹಿತಿ ಪ್ರಕಟಿಸಿದ್ದಾರೆ. ಲಾಕ್ಡೌನ್ ವೇಳೆ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದವರ ಸಂಖ್ಯೆ ಅತಿಹೆಚ್ಚು ದಾಖಲಾಗಿದ್ದು, 27.59 ಲಕ್ಷ ಹಿಂಬದಿ ಸವಾರರು ಹೆಲ್ಮೆಟ್ ಇಲ್ಲದೆ ರೈಡಿಂಗ್ ಮಾಡಿದ್ದಾರೆ. 16.62 ಲಕ್ಷ ಸಿಗ್ನಲ್ ಜಂಪ್ ಮಾಡುವವರ ಸಂಖ್ಯೆ, 8.12 ಲಕ್ಷ ಡ್ರಿಂಕ್ ಆಂಡ್ ಡ್ರೈವ್ ಕೇಸ್‌ಗಳು, 5 ಸಾವಿರ ನೋ ಎಂಟ್ರಿಯಲ್ಲಿ ವಾಹನ ಚಾಲನೆ ಮಾಡಿದ ಕೇಸ್‌ಗಳು ದಾಖಲಾಗಿವೆ.
ಲಾಕ್ ಡೌನ್ ತೆರವು ಬಳಿಕ ನಗರದ ಟ್ರಾಫಿಕ್ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದಾಗ, ನೋ ಎಂಟ್ರಿ, ಒನ್ ವೇ, ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್ ಸೇರಿ ಹಲವು ಕೇಸ್‌ಗಳು ಪತ್ತೆಯಾಗಿವೆ. ಖುದ್ದು ವಾಹನ ಸವಾರರ ವಿಳಾಸಕ್ಕೆ ನೋಟಿಸ್ ನೀಡಿ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ.