ETV Bharat / state

ಇನ್ಫೋಸಿಸ್ ಕಂಪನಿ‌ ಉದ್ಯೋಗಿ ಮೇಲೆ ಬೆನಕ ಜ್ಯೂವೆಲರಿ ಶಾಪ್ ಮಾಲೀಕನಿಂದ ಹಲ್ಲೆ ಆರೋಪ - Infosys company employee accused of assault by owner of Benaka Jewellery Shop

ಇನ್ಫೋಸಿಸ್ ಕಂಪನಿಯ‌ ಉದ್ಯೋಗಿ ಮೇಲೆ ಬೆನಕ ಜ್ಯೂವೆಲ್ಲರಿ ಶಾಪ್ ಮಾಲೀಕ ಹಾಗೂ ಅತನ ಸಹಚರರು ಹಲ್ಲೆ ನಡೆಸಿರುವ ಅರೋಪ ಕೇಳಿಬಂದಿದೆ.

Benaka Jewellery Shop owner charged with assault

author img

By

Published : Feb 25, 2022, 5:29 PM IST

ಬೆಂಗಳೂರು: ಜಗಳ ಆಡುತ್ತಿದ್ದ ಇಬ್ಬರು ಯುವಕರನ್ನು ಬಿಡಿಸಲು‌ ಹೋದ ಇನ್ಫೋಸಿಸ್ ಕಂಪನಿಯ‌ ಉದ್ಯೋಗಿ ಮೇಲೆ ಬೆನಕ ಜ್ಯೂವೆಲ್ಲರಿ ಶಾಪ್ ಮಾಲೀಕ ಹಾಗೂ ಆತನ ಸಹಚರರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಇನ್ಫೋಸಿಸ್ ಕಂಪನಿಯಲ್ಲಿ ಸೀನಿಯರ್ ಅನಾಲಿಸ್ಟ್ ಆಗಿರುವ ಮನೋಹರ್ ನೀಡಿದ ದೂರಿನ ಮೇರೆಗೆ ಬೆನಕ ಆಭರಣ ಕಂಪನಿಯ ಮಾಲೀಕ ಭರತ್ ಹಾಗೂ‌ ಆತನ‌ ಸಹಚರರ ಮೇಲೆ‌ ಎಫ್ಐಆರ್ ದಾಖಲಾಗಿದೆ‌. ಫೆಬ್ರುವರಿ 20 ರಂದು ಮನೋಹರ್ ಹಾಗೂ ಆತನ‌ ಸಹೋದರಿಬ್ಬರು ಹೊಸಕೆರೆಹಳ್ಳಿ ರಸ್ತೆಯಲ್ಲಿರುವ ಅಕ್ಷಯ್ ಬಾರ್​​​ಗೆ ಹೋಗಿದ್ದರು. ಈ ವೇಳೆ‌ ಅಪರಿಚಿತ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಮೇಲೆ ಹಲ್ಲೆ ಮಾಡುತ್ತಿರುವುದನ್ನು ಕಂಡು ಗಲಾಟೆ ಬಿಡಿಸಲು‌ ಮುಂದಾಗಿದ್ದಾರೆ.

ಇದನ್ನೂ ಓದಿ: ಉಕ್ರೇನ್​ ಶಸ್ತ್ರಾಸ್ತ್ರ ಕೆಳಗಿಳಿಸಿದರೆ ಮಾತುಕತೆಗೆ ಸಿದ್ಧ: ರಷ್ಯಾ ವಿದೇಶಾಂಗ ಸಚಿವ

ಈ ವೇಳೆ ಅಲ್ಲೇ ಇದ್ದ 8 ಮಂದಿ ಹುಡುಗರ ಹಲ್ಲೆ ಮಾಡಿದ್ದಾರೆ. ‌ಬಿಯರ್ ಬಾಟೆಲ್ ನಿಂದ ಮನೋಹರ್ ಸಹೋದರನಿಗೂ ಈ ವೇಳೆ ಹೊಡೆದಿದ್ದಾರೆ.‌ ಈ ಸಂಬಂಧ ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿ‌ ಕೆಲವರನ್ನು ವಶಕ್ಕೆ‌ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ‌.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.