ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯ ಕೋವಿಡ್ ವಾರ್ ರೂಂನಲ್ಲಿ ಕೆಲಸ ಮಾಡುವ ಸಿಬ್ಬಂದಿ ತಾಯಿಗೆ ಕೋವಿಡ್ ಬಂದಿದ್ದರೂ ಬಿಬಿಎಂಪಿಯಿಂದ ಬೆಡ್ ವ್ಯವಸ್ಥೆ ಮಾಡಲು ಸಾಧ್ಯವಾಗದೇ ಇರುವ ಘಟನೆ ಬೆಳಕಿಗೆ ಬಂದಿದೆ.
ಪಾಲಿಕೆ ಸಿಬ್ಬಂದಿ ಅರುಣ್ ಎಂಬುವವರ ತಾಯಿ ಶಾರದಮ್ಮ (66) ಅವರನ್ನು ಬುಧವಾರ ರಾತ್ರಿ 8 ಗಂಟೆಗೆ ಸುಸ್ತು ಎಂಬ ಕಾರಣಕ್ಕೆ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ತಪಾಸಣೆ ನಡೆಸಿದಾಗ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇದಕ್ಕೂ ಮುನ್ನ ಕೋವಿಡ್ ಟೆಸ್ಟ್ಗೆ 4 ಸಾವಿರ ರೂ. ಖರ್ಚಾಗುತ್ತದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಆದ್ರೆ ರಿಪೋರ್ಟ್ ಪಾಸಿಟಿವ್ ಬಂದ ಮೇಲೆ ರೋಗಿಯನ್ನು ಆಸ್ಪತ್ರೆಯಿಂದ ಕೂಡಲೇ ಶಿಫ್ಟ್ ಮಾಡಿ. ಇಲ್ಲಿ ಐಸಿಯು ಬೆಡ್ ಖಾಲಿ ಇಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಸಹಕಾರ ಕೋರಿ ರಾತ್ರಿಯಿಡೀ ಅಧಿಕಾರಿಗಳಿಗೆ ಫೋನ್ ಮಾಡಿದ್ರೂ ಯಾರೂ ಪ್ರತಿಕ್ರಿಯೆ ನೀಡಲಿಲ್ಲ.
108, 1912, 104 ಸಹಾಯವಾಣಿಗೆ ಕರೆ ಮಾಡಿದ್ರೂ ಬೆಡ್ ಖಾಲಿ ಇಲ್ಲ, ಬೆಳಗ್ಗೆ ನೋಡೋಣ ಎಂದು ತಿಳಿಸಿದ್ದಾರೆ. ಬೆಳಗ್ಗೆ ವೇಳೆಗೆ ತಾಯಿ ಪರಿಸ್ಥಿತಿ ಗಂಭೀರವಾಗಿದೆ. ಆದರೂ ಬೆಡ್ ಸಿಗಲಿಲ್ಲ. ರಾಮಯ್ಯ ಆಸ್ಪತ್ರೆಗೆ ಫೋನ್ ಮಾಡಿದ್ರೂ ಪ್ರೊಸೀಜರ್ ಪ್ರಕಾರವೇ ಬರಬೇಕು ಅಂತ ಬೆಡ್ ನಿರಾಕರಿಸಿದ್ದಾರೆ ಎಂದು ಪುತ್ರ ಅರುಣ್ ಅಳಲು ತೋಡಿಕೊಂಡರು.
ಇದನ್ನೂ ಓದಿ: ಬೆಡ್ ಸಿಗದೆ ಕೋವಿಡ್ ಸೋಂಕಿತ ಸಾವು: ಮಹಾವೀರ ಜೈನ್ ಆಸ್ಪತ್ರೆಗೆ ಬಿಬಿಎಂಪಿ ನೋಟಿಸ್