ETV Bharat / state

ಕೋವಿಡ್ ಸಾಂಕ್ರಾಮಿಕ ಮಧ್ಯವರ್ತಿಗಳು, ಕಾಳಸಂತೆಕೋರರಿಗೆ ವರದಾನ : ಬೆಡ್, ರೆಮ್ಡಿಸಿವಿರ್​​ ಬ್ಲಾಕ್ ಮಾರ್ಕೆಟ್​ನಲ್ಲಿ ಸೇಲ್‌ - Remdcivir problem in bengalore

ಕೋವಿಡ್‌ ಚಿಕಿತ್ಸೆಗೆ ಸರ್ಕಾರವೇ ದರ ನಿಗದಿ ಮಾಡಿದ್ದರೂ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಬಿಲ್ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಸಾಮಾನ್ಯ ಹಾಸಿಗೆ, ಐಸಿಯು, ವೆಂಟಿಲೇಟರ್ ಗೆ ಹೆಚ್ಚು ಶುಲ್ಕ ಪಡೆಯುತ್ತಿದ್ದು, ಔಷಧಕ್ಕೂ ಹೆಚ್ಚುದರ ಪಡೆಯಲಾಗುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿವೆ..

tejaswi surya
ಸಂಸದ ತೇಜಸ್ವಿ ಸೂರ್ಯ
author img

By

Published : May 21, 2021, 5:15 PM IST

ಬೆಂಗಳೂರು : ಕೋವಿಡ್ ಸಾಂಕ್ರಾಮಿಕವು ಕಾಳಸಂತೆಕೋರರಿಗೆ ಹಾಗೂ ಮಧ್ಯವರ್ತಿಗಳಿಗೆ ರತ್ನಗಂಬಳಿ ಹಾಸಿದಂತಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ಕೊಡಿಸುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಔಷಧಿಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು ಜಗಜ್ಜಾಹೀರಾಗಿದೆ.

ಕೋವಿಡ್ 2ನೇ ಅಲೆಗೆ ಸಿಲಿಕಾನ್ ಸಿಟಿ ತತ್ತರಿಸಿದೆ. ಕೊರೊನಾ ಸೋಂಕಿತರು ಆಸ್ಪತ್ರೆ ಬೆಡ್, ಐಸಿಯು, ಔಷಧಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಪರಿಸ್ಥಿತಿಯ ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲವರು ಬೆಡ್ ಬ್ಲಾಕಿಂಗ್ ದಂಧೆ ನಡೆಸುತ್ತಿದ್ದಾರೆ. ಮತ್ತೆ ಕೆಲವರು ಕೋವಿಡ್ ಚಿಕಿತ್ಸೆಗೆ ಮುಖ್ಯವಾಗಿ ಬೇಕಿರುವ ರೆಮ್ಡಿಸಿವಿರ್​ ಇತ್ಯಾದಿ ಔಷಧಿಗಳನ್ನು ಅವ್ಯಾಹತವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಸದ್ಯ 15 ಸರ್ಕಾರಿ ಆಸ್ಪತ್ರೆ, 4 ಸರ್ಕಾರಿ ಮೆಡಿಕಲ್ ಕಾಲೇಜು, 141 ಖಾಸಗಿ ಆಸ್ಪತ್ರೆಗಳು ಹಾಗೂ 12 ಖಾಸಗಿ ಮೆಡಿಕಲ್ ಕಾಲೇಜು ಸೇರಿ ಒಟ್ಟು 172 ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ಎಲ್ಲಾ ಆಸ್ಪತ್ರೆಗಳಲ್ಲಿನ ಬೆಡ್ ಸಾಮರ್ಥ್ಯ, ಭರ್ತಿಯಾಗಿರುವ ಬೆಡ್‌ಗಳು, ಖಾಲಿ ಇರುವ ಬೆಡ್ ವಿವರ ಆನ್​ಲೈನ್​ನಲ್ಲೇ ಲಭ್ಯವಿರುವಂತೆ ಮಾಡಲಾಗಿದೆ.

ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು, ಆನ್​ಲೈನ್​ ವ್ಯವಸ್ಥೆಯನ್ನೇ ಬಳಸಿ ಬೆಡ್ ಬ್ಲಾಕಿಂಗ್ ದಂಧೆ ನಡೆಸುತ್ತಿದ್ದ ಮಾಹಿತಿಯನ್ನು ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಬಯಲಿಗೆಳೆದಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಮಾತನಾಡಿದರು

ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಗಳ ಬಿಯು ಸಂಖ್ಯೆ ಆಧಾರದಲ್ಲಿ ಅವರಿಗೆ ಬಿಬಿಎಂಪಿಯಿಂದ ವಿವಿಧ ಆಸ್ಪತ್ರೆಗಳಲ್ಲಿ ಬೆಡ್ ಹಂಚಿಕೆ ಮಾಡಲಾಗುತ್ತದೆ.

ಯಾರಿಗೆ ಇನ್ನೂ ಬೆಡ್ ಹಂಚಿಕೆ ಆಗಿರುವುದಿಲ್ಲವೋ ಅಥವಾ ಯಾರಿಗೆ ಐಸಿಯು ಬೆಡ್ ಅಗತ್ಯವಿರುತ್ತದೆಯೋ ಅಂತಾ ಸೋಂಕಿತರನ್ನು ದೂರವಾಣಿ ಮೂಲಕ ಸಂಪರ್ಕ ಮಾಡುವ ದಂಧೆಕೋರರು ಬೆಡ್‌ಗಾಗಿ ₹30-50 ಸಾವಿರ ಹಣವನ್ನು ಪಡೆದು ಅವರಿಗೆ ಬೆಡ್ ಕೊಡಿಸುತ್ತಾರೆ. ಕೆಲ ಆಸ್ಪತ್ರೆಗಳ ಕೆಲ ಸಿಬ್ಬಂದಿಯೂ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ರೋಗಿ ಡಿಸ್ಚಾರ್ಜ್ ಆಗುವ ಹಾಗೂ ಐಸಿಯು ರೋಗಿ ಸಾಮಾನ್ಯ ವಾರ್ಡ್‌ಗೆ ಶಿಫ್ಟ್ ಆಗುವ ಮಾಹಿತಿಯನ್ನು ಮೊದಲೇ ಬೆಡ್ ಬ್ಲಾಕಿಂಗ್ ದಂಧೆಕೋರರಿಗೆ ತಿಳಿಸಲಾಗುತ್ತದೆ.

ಅದರಂತೆ ಅವರು ತಮ್ಮ ಪ್ರಭಾವ ಬಳಸಿ ಬೆಡ್ ಖಾಲಿಯಾಗುತ್ತಿದ್ದಂತೆ ಆ ಬೆಡ್ ಗಳನ್ನು ಬ್ಲಾಕ್ ಮಾಡಿಸಿ ಹಣ ಪಡೆದುಕೊಂಡಿದ್ದವರಿಗೆ ಕೊಡಿಸುತ್ತಿದ್ದರು. ಇದೆಲ್ಲವೂ ಮಧ್ಯರಾತ್ರಿ ನಡೆಯುತ್ತಿತ್ತು. ಹಾಗಾಗಿ, ಯಾರ ಗಮನಕ್ಕೂ ಬರುತ್ತಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಏಪ್ರಿಲ್​ನಲ್ಲಿ ಬೆಡ್​ಗಾಗಿ ಸೋಂಕಿತರು ಪರದಾಡುತ್ತಿದ್ದು, ಈ ರೀತಿಯ ಬೆಡ್ ಬ್ಲಾಕಿಂಗ್ ದಂಧೆಯನ್ನು ಎಗ್ಗಿಲ್ಲದೇ ನಡೆಸಲಾಗುತ್ತಿತ್ತು. ಆದರೆ ಇದೀಗ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಆನ್​ಲೈನ್​ ಪೋರ್ಟಲ್​ನಲ್ಲಿ ಬದಲಾವಣೆ ತಂದು ಬೆಡ್ ಬ್ಲಾಕಿಂಗ್ ದಂಧೆಗೆ ಕಡಿವಾಣ ಹಾಕಲಾಗಿದೆ.

ಆದರೂ ಇದು ಸಂಪೂರ್ಣವಾಗಿ ನಿಂತಿದೆ ಎಂದು ಹೇಳುವುದು ಕಷ್ಟವಾದರೂ ಮೊದಲಿನ ರೀತಿಯಂತೆ ಎಗ್ಗಿಲ್ಲದಂತೆ ಬೆಡ್ ಬ್ಲಾಕಿಂಗ್ ದಂಧೆ ನಡೆಯುವುದಕ್ಕಂತೂ ಬ್ರೇಕ್ ಬಿದ್ದಿದೆ.

ಕೆಲ ಸೋಂಕಿತರ ಕಡೆಯಿಂದ ಹಣ ಪಡೆಯುವ ಮಧ್ಯವರ್ತಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳ ಮೂಲಕ ಬೆಡ್ ಗಿಟ್ಟಿಸಿಕೊಂಡು ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ.‌

ಸ್ಥಳೀಯ ಶಾಸಕರು, ಸಂಸದರಿಗೆ, ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಬಡ ಸೋಂಕಿತರಿಗೆ ಬೆಡ್ ಸಿಗುತ್ತಿಲ್ಲ, ಉಸಿರಾಟದ ತೊಂದರೆ ಇದೆ, ಸಹಾಯ ಮಾಡಿ ಎಂದು ಕಾಡಿಬೇಡಿ ಐಸಿಯು ಬೆಡ್ ಪಡೆದುಕೊಳ್ಳುತ್ತಾರೆ.

ಉಚಿತವಾಗಿ ಸಿಕ್ಕುವ ಬೆಡ್​ನ್ನು 30-50 ಸಾವಿರ ರೂ.ಗಳಿಗೆ ಮಾರಾಟ ಮಾಡಿಕೊಂಡಿರುತ್ತಾರೆ. ಇತ್ತೀಚೆಗೆ ಇದು ಕೂಡ ಬಯಲಾಗಿದ್ದು, ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಈಗ ಎಚ್ಚೆತ್ತುಕೊಂಡಿದ್ದಾರೆ.

ಬೆಡ್ ದರದ ಮಾಹಿತಿ:

ಸರ್ಕಾರದಿಂದ ಶಿಫಾರಸ್ಸು ಮಾಡಿದ ಖಾಸಗಿ ಆಸ್ಪತ್ರೆ ದರ

ಜನರಲ್ ವಾರ್ಡ್5200₹
ಹೆಚ್ ಡಿಯು7000₹
ಐಸೋಲೇಷನ್8500₹
ಐಸೋಲೇಷನ್ ವಿತ್ ವೆಂಟಿಲೇಟರ್10,000₹

ನೇರ ಖಾಸಗಿ ಆಸ್ಪತ್ರೆಗೆ ದಾಖಲಾದವರ ಚಿಕಿತ್ಸೆ ದರ

ಜನರಲ್ ವಾರ್ಡ್10,000₹
ಹೆಚ್ ಡಿಯು12,000₹
ಐಸೋಲೇಷನ್15,000₹
ಐಸೋಲೇಷನ್ ವಿತ್ ವೆಂಟಿಲೇಟರ್25,000₹

ಸರ್ಕಾರಿ ಆ್ಯಂಬುಲೆನ್ಸ್ ಉಚಿತವಿರಲಿದ್ದು, ಆಯಾ ಖಾಸಗಿ ಆಸ್ಪತ್ರೆಯಲ್ಲಿ ನಿಗಧಿತ ದರ ಇರಲಿದೆ.‌(ದರ ನಿಗದಿ ಮಾಡಿಲ್ಲ)

ಖಾಸಗಿ ಆಸ್ಪತ್ರೆಗಳಲ್ಲಿ ದಿನವೊಂದಕ್ಕೆ 15-25 ಸಾವಿರ ಖರ್ಚು ಬರುವ ಕಾರಣಕ್ಕೆ ಬಡ ಹಾಗೂ ಮಧ್ಯಮವರ್ಗದ ಸೋಂಕಿತರ ಕುಟುಂಬದವರು ಮಧ್ಯವರ್ತಿಗಳಿಗೆ ಹಣ ನೀಡಿ ಸರ್ಕಾರಿ ಕೋಟಾದಡಿ ಯಾವುದಾದರೂ ಆಸ್ಪತ್ರೆಯಲ್ಲಿ ಬೆಡ್ ಪಡೆದು ಚಿಕಿತ್ಸೆ ಕೊಡಿಸಲು ಮುಂದಾಗುತ್ತಿದ್ದರು.

ಇದು ಬೆಡ್ ಬ್ಲಾಕಿಂಗ್ ದಂಧೆ ಕೋರರು ಮತ್ತು ಮಧ್ಯವರ್ತಿಗಳ ಪಾಲಿಗೆ ಗೋಲ್ಡನ್ ಆಪರ್ಚುನಿಟಿಯಂತಾಗಿತ್ತು. ಆದರೆ ಇದೀಗ ಈ ದಂಧೆ ಬಯಲಾಗಿದ್ದು, 10 ಮಂದಿ ದಂಧೆಕೋರರನ್ನು ಬಂಧಿಸಲಾಗಿದೆ.

ಕಾಳಸಂತೆಯಲ್ಲಿ ಔಷಧ ಮಾರಾಟ : ಕೊರೊನಾ ಸೋಂಕು ತೀವ್ರವಾಗಿ ಉಲ್ಬಣಗೊಂಡಾಗ ರೆಮ್ಡಿಸಿವಿರ್​ ಚುಚ್ಚುಮದ್ದು ನೀಡಲಾಗುತ್ತದೆ. ಪ್ರತಿ ರೋಗಿಗೆ ಅವರ ಆರೋಗ್ಯದ ಸ್ಥಿತಿಯ ಆಧಾರದಲ್ಲಿ ಡೋಸೇಜ್ ಗಳನ್ನು ನೀಡಲಾಗುತ್ತದೆ. ಆದರೆ ಈ ಚುಚ್ಚುಮದ್ದನ್ನು ಕೂಡ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಸರ್ಕಾರವೇ ನೇರವಾಗಿ ರೆಮ್ಡಿಸಿವಿರ್​ ಖರೀದಿ ಮಾಡಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡುತ್ತದೆ. ರಾಜ್ಯಾವಾರು ಪಡೆಯುವ ಕೋಟಾದಡಿ ಔಷಧ ಸರಬರಾಜು ನೋಡಿ ಹಂಚಿಕೆ ಮಾಡಲಾಗುತ್ತಿದೆ. ಆದರೂ ಈ ಔಷಧ ಆಸ್ಪತ್ರೆಗಳಲ್ಲಿ ಲಭ್ಯವಾಗದೆ ಕಾಳಸಂತೆಯಲ್ಲಿ ಬಿಕರಿಯಾಗುತ್ತಿದೆ.

3490 ರೂಗಳ ರೆಮ್ಡಿಸಿವಿರ್​ ವಯಲ್ 10-15 ಸಾವಿರ ರೂ.ಗಳಿಗೆ ಮಾರಾಟವಾಗುತ್ತಿದೆ. ಆಸ್ಪತ್ರೆಗಳ ಕೆಲ ಸಿಬ್ಬಂದಿ ಇದರಲ್ಲಿ ಶಾಮೀಲಾಗಿದ್ದಾರೆ. ಹಾಗಾಗಿಯೇ ಆಸ್ಪತ್ರೆಗೆ ಹಂಚಿಕೆಯಾದ ಔಷಧ ತಪ್ಪು ಮಾಹಿತಿಯನ್ನು ಸರ್ಕಾರಕ್ಕೆ ನೀಡಿ ಕಾಳಸಂತೆಯಲ್ಲಿ ಮಾರಾಟವಾಗುವಂತೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ದಂಧೆಯೂ ಬೆಳಕಿಗೆ ಬಂದಿದ್ದು, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ 20 ಕ್ಕೂ ಹೆಚ್ಚಿನ ಆರೋಪಿಗಳನ್ನು ಬಂಧಿಸಿ‌ ವಿಚಾರಣೆ ನಡೆಸಲಾಗುತ್ತಿದೆ.

ಖಾಸಗಿ ಆಸ್ಪತ್ರೆಗಳಿಂದ ಸುಲಿಗೆ : ಕೋವಿಡ್‌ ಚಿಕಿತ್ಸೆಗೆ ಸರ್ಕಾರವೇ ದರ ನಿಗದಿ ಮಾಡಿದ್ದರೂ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಬಿಲ್ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಸಾಮಾನ್ಯ ಹಾಸಿಗೆ, ಐಸಿಯು, ವೆಂಟಿಲೇಟರ್ ಗೆ ಹೆಚ್ಚು ಶುಲ್ಕ ಪಡೆಯುತ್ತಿದ್ದು, ಔಷಧಕ್ಕೂ ಹೆಚ್ಚುದರ ಪಡೆಯಲಾಗುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿವೆ.

ಆದರೆ, ಈ ಬಗ್ಗೆ ಸರ್ಕಾರ ದಿವ್ಯ ಮೌನ ಮುಂದುವರೆಸಿದೆ. ಕೇವಲ ಎಚ್ಚರಿಕೆ ನೀಡುವ ಅಸ್ತ್ರ ಪ್ರಯೋಗಿಸುತ್ತಿರುವ ಆರೋಗ್ಯ ಸಚಿವ ಡಾ.ಸುಧಾಕರ್ ಖಾಸಗಿ ಆಸ್ಪತ್ರೆಗಳ ದುಬಾರಿ ಬಿಲ್​ಗೆ ಲಗಾಮು ಹಾಕುವ ಗೋಜಿಗೆ ಹೋಗುತ್ತಿಲ್ಲ.

ಓದಿ: ಕೋವಿಡ್ ವಿಚಾರದಲ್ಲಿ ಸಿದ್ಧರಾಮಯ್ಯ, ಡಿಕೆಶಿ ರಾಜಕಾರಣ ಬಿಡಬೇಕು: ಜಗದೀಶ್ ಶೆಟ್ಟರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.