ಆನೇಕಲ್ (ಬೆಂಗಳೂರು): ಚಿರತೆ ಹಾವಳಿಯಿಂದ ಭಯದಲ್ಲಿದ್ದ ಜನರಿಗೆ ಇದೀಗ ಕರಡಿ ಭಯ ಶುರುವಾಗಿದೆ. ಆನೇಕಲ್ನ ಬನ್ನೇರುಘಟ್ಟ ಸಮೀಪದ ಜಿಗಣಿ, ಕಲ್ಲುಬಾಳು ಗ್ರಾಮದಲ್ಲಿ ಕರಡಿ ಪ್ರತ್ಯಕ್ಷವಾಗಿದೆ.
ಜಿಗಣಿಯ ನಂದನವನ ಲೇಔಟ್ನಲ್ಲಿ ಇದೇ ತಿಂಗಳು 12ರಂದು ಕರಡಿ ಪ್ರತ್ಯಕ್ಷವಾಗಿತ್ತು. ಇದೀಗ ಕಲ್ಲುಬಾಳು ಗ್ರಾಮದ ದೇವಾಲಯದ ಬಳಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಕರಡಿ ಓಡಾಡಿದೆ. ಈ ಗ್ರಾಮಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕರಡಿ ಕಾಣಿಸಿಕೊಳ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಇನ್ನು, ಕರಡಿ ಓಡಾಟದ ದೃಶ್ಯವನ್ನು ಸಿಸಿಟಿವಿ ಹಾಗೂ ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಭೂತಾನಹಳ್ಳಿಯಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಇದೀಗ ಕರಡಿ ಪ್ರತ್ಯಕ್ಷವಾಗಿರುವುದರಿಂದ ಜನ ಭಯಭೀತರಾಗಿದ್ದಾರೆ. ಕರಡಿಯನ್ನು ಸೆರೆ ಹಿಡಿಯಲು ಸ್ಥಳದಲ್ಲಿ ಅರಣ್ಯ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.
ಇದನ್ನೂ ಓದಿ: ರಾತ್ರಿ ಗ್ರಾಮಕ್ಕೆ ನುಗ್ಗಿದ ಜಾಂಬವ.. ಕರಡಿ ಕಂಡು ಬೆಚ್ಚಿಬಿದ್ದ ಜನ