ಬೆಂಗಳೂರು : ಸಿಗ್ನಲ್ ಜಂಪ್, ಸೀಟ್ ಬೆಲ್ಟ್, ಓವರ್ ಸ್ಪೀಡ್, ಹೆಲ್ಮೆಟ್ ರಹಿತ ವಾಹನ ಚಾಲನೆ ಮಾಡಿದರೆ, ಕೊರೊನಾ ಎಂದು ಪೊಲೀಸರು ವಾಹನ ತಪಾಸಣೆ ಮಾಡುತ್ತಿಲ್ಲ ಎಂದು ಇಷ್ಟು ದಿನ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದರೆ ಇದನ್ನು ಇಲ್ಲಿಗೆ ನಿಲ್ಲಿಸಿಬಿಡಿ. ಇನ್ಮುಂದೆ ರೂಲ್ಸ್ ಬ್ರೇಕ್ ಮಾಡಿದರೆ ಬರೀ ನೋಟಿಸ್ ಅಲ್ಲ, ಮನೆಯ ಬಾಗಿಲಿಗೆ ಬರ್ತಾರೆ ಟ್ರಾಫಿಕ್ ಪೊಲೀಸರು..!
ಹೌದು, ಕೊರೊನಾ ಇದೆ ಎಂದು ನಿಯಮ ಉಲ್ಲಂಘಿಸಿ ಇಷ್ಟು ದಿನಗಳ ಕಾಲ ಓಡಾಡಿದ್ದರೆ ಇವತ್ತಿಗೆ ಬ್ರೇಕ್ ಹಾಕಿ. ರೂಲ್ಸ್ ಬ್ರೇಕ್ ಮಾಡಿದರೆ ಏನಿದ್ದರೂ ನೋಟಿಸ್ ಕಳಿಸುತ್ತಾರೆ ಅಂದುಕೊಂಡರೆ ಅಲ್ಲಿಯೂ ಹುಷಾರಾಗಿರಿ. ಏಕಂದರೆ ರೂಲ್ಸ್ ಬ್ರೇಕ್ ಮಾಡಿದರೆ ಇವತ್ತಿಂದ ಪೊಲೀಸರು ನಿಮ್ಮ ಮನೆ ಬಾಗಿಲಿಗೆಯೇ ಬಂದು ಫೈನ್ ವಸೂಲಿ ಮಾಡಿಕೊಂಡು ಹೋಗುತ್ತಾರೆ. ಇಂತಹದ್ದೊಂದು ನಿಯಮವನ್ನು ಇಲಾಖೆ ಇಂದಿನಿಂದ ಪಾಲನೆ ಮಾಡಲಿದೆ.
ಪೂರ್ವ ವಿಭಾಗ ಸಂಚಾರಿ ಪೊಲೀಸರ ವ್ಯಾಪ್ತಿಯಲ್ಲಿ ಪೊಲೀಸರು ರೂಲ್ಸ್ ಬ್ರೇಕ್ ಮಾಡಿದ ಸವಾರರ ಮನೆಗೆ ಬಂದು ಫೈನ್ ಹಾಕ್ತಿದ್ದಾರೆ. ಶಿವಾಜಿನಗರ, ಭಾರತಿನಗರ, ಹಲಸೂರು, ಇಂದಿರಾನಗರ, ಹೆಣ್ಣೂರು, ಬಾಣಸವಾಡಿ, ಜೀವನ್, ಭೀಮಾನಗರ, ಕೋರಮಂಗಲ, ಬೈಯ್ಯಪ್ಪನಹಳ್ಳಿ ವ್ಯಾಪ್ತಿಯಲ್ಲಿ ಮನೆ ಬಳಿ ಬಂದು ದಂಡ ವಸೂಲಾತಿ ಮಾಡಲಾಗುತ್ತಿದೆ.
ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ಟ್ರಾಫಿಕ್ ಮ್ಯಾನೆಜ್‌ಮೆಂಟ್ ಸೆಂಟರ್ನಿಂದ ದಂಡ ಕಟ್ಟುವಂತೆ ನೋಟಿಸ್ ನೀಡಲಾಗುತ್ತಿದೆ. ನೋಟಿಸ್ ಸ್ವೀಕರಿಸಿಕೊಂಡು ದಂಡ ಕಟ್ಟದೇ ಸುಮ್ಮನಿದ್ದ ವಾಹನ ಸವಾರರಿಗೆ ಮನೆ ಬಾಗಿಲಿಗೆ ಬಂದು ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಇನ್ನು ಮುಂದೆಯಾದರೂ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೊ ಮುನ್ನ ಹುಷಾರಾಗಿರಿ. ಕಡ್ಡಾಯವಾಗಿ ರೂಲ್ಸ್ ಫಾಲೋ ಮಾಡೊದ್ರ ಮೂಲಕ ಸೇಫ್ಟೀ ಡ್ರೈವ್ ಮಾಡಿ ಎಂಬುವುದೇ ಈಟಿವಿ ಭಾರತದ ಆಶಯವಾಗಿದೆ.
ಸಂಚಾರಿ ನಿಯಮಗಳ ಉಲ್ಲಂಘನೆಯ ವಿಧಗಳು ಹಾಗೂ ದಂಡದ ಮೊತ್ತ (ರೂ.)
- ಹೈ ಬೀಮ್ ಲೈಟ್ ಬಳಸಿ ವಾಹನ ಸಂಚಾರ ಮಾಡುವುದು (500 ದಂಡ)
- ಟಿಂಟೆಂಡ್ ಗ್ಲಾಸ್ ಇರುವ ವಾಹನಗಳಲ್ಲಿ ನೈಟ್ ಡ್ರೈವ್ಗೆ ರಸ್ತೆಗೆ ಬರ್ತಿರೋದು (1 ಸಾವಿರ ದಂಡ)
- ವೀಕೆಂಡ್ಗಳಲ್ಲಿ ಸಿಗ್ನಲ್ ಜಂಪ್ ಮಾಡಿ ವಾಹನ ಸಂಚಾರ ಮಾಡ್ತಿರೋದು (1ನೇ ಸಲ ನಿಯಮ ಉಲ್ಲಂಘಿಸಿದ್ರೆ 500, 2ನೇ ಬಾರಿ 1 ಸಾವಿರ ದಂಡ)
- ಸೀಟ್ ಬೆಲ್ಟ್ ಇಲ್ಲದೇ ಕಾರು ಚಾಲನೆ (500 ದಂಡ)
- ಸಂಚಾರ ಮಾಡುವ ವೇಳೆ ಮೊಬೈಲ್ ಬಳಕೆ (1 ಸಾವಿರ ದಂಡ)
- ಸಿಸಿಟಿವಿಗಳಲ್ಲಿ ದಾಖಲಾಗೊ ರೂಲ್ಸ್ ಬ್ರೇಕ್ ಕೇಸ್ಗಳಿಗೆ TMC ಸೆಂಟರ್ನಿಂದ ನೇರವಾಗಿ ನೋಟಿಸ್ ಕಳುಹಿಸಲಾಗತ್ತೆ.
- TMC ಟ್ರಾಫಿಕ್ ಮ್ಯಾನೆಜ್‌ಮೆಂಟ್ ಸೆಂಟರ್ನಿಂದ ನೇರವಾಗಿ ಸವಾರರ ನಿವಾಸಕ್ಕೆ ದಂಡದ ಮೊತ್ತದ ನೋಟಿಸ್ ಬರುತ್ತೆ.