ಬೆಂಗಳೂರು: ಕೊರೊನಾ ವೈರಸ್ ಹರಡದಂತೆ ಸಾರ್ವಜನಿಕರು ಈಗಾಗಲೇ ನಾನಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಮುಖವಾಗಿ ಸ್ಯಾನಿಟೈಸರ್ ಬಳಕೆಯ ಸಾಧಕ ಬಾಧಕಗಳನ್ನು ಅರಿಯಬೇಕು ಎಂದು ವೈದ್ಯರು ಈಗಾಗಲೇ ಸೂಚನೆ ನೀಡಿದ್ದಾರೆ.
ಕೈಗಳಿಗೆ ಸ್ಯಾನಿಟೈಸರ್ ಹಚ್ಚಿ ಅಡುಗೆ ಮಾಡಬೇಡಿ: ಪೊಲೀಸ್ ಇನ್ಸ್‌ಸ್ಪೆಕ್ಟರ್ ಶಶಿಧರ್ ಸೂಚನೆ - ಕೋರಮಂಗಲ ಪೊಲೀಸ್ ಇನ್ ಸ್ಪೆಕ್ಟರ್ ಶಶಿಧರ್ ಲೆಟೆಸ್ಟ್ ನ್ಯೂಸ್
ಕೊರೊನಾ ಆತಂಕದಿಂದ ಸ್ಯಾನಿಟೈಸರ್ ಬಳಕೆ ಮಾಡುವಾಗ ಜಾಗರೂಕರಾಗಿರಿ ಎಂದು ಕೋರಮಂಗಲ ಪೊಲೀಸ್ ಇನ್ಸ್‌ಸ್ಪೆಕ್ಟರ್ ಶಶಿಧರ್ ಸೂಚನೆ ನೀಡಿದ್ದಾರೆ.
![ಕೈಗಳಿಗೆ ಸ್ಯಾನಿಟೈಸರ್ ಹಚ್ಚಿ ಅಡುಗೆ ಮಾಡಬೇಡಿ: ಪೊಲೀಸ್ ಇನ್ಸ್‌ಸ್ಪೆಕ್ಟರ್ ಶಶಿಧರ್ ಸೂಚನೆ InSpecter Shashidhar notice](https://etvbharatimages.akamaized.net/etvbharat/prod-images/768-512-6671801-221-6671801-1586085923216.jpg?imwidth=3840)
ಸ್ಯಾನಿಟೈಸರ್ ಉಪಯೋಗಿಸುವಾಗ ಎಚ್ಚರವಿರಲಿ: ಇನ್ ಸ್ಪೆಕ್ಟರ್ ಶಶಿಧರ್ ಸೂಚನೆ
ಬೆಂಗಳೂರು: ಕೊರೊನಾ ವೈರಸ್ ಹರಡದಂತೆ ಸಾರ್ವಜನಿಕರು ಈಗಾಗಲೇ ನಾನಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಮುಖವಾಗಿ ಸ್ಯಾನಿಟೈಸರ್ ಬಳಕೆಯ ಸಾಧಕ ಬಾಧಕಗಳನ್ನು ಅರಿಯಬೇಕು ಎಂದು ವೈದ್ಯರು ಈಗಾಗಲೇ ಸೂಚನೆ ನೀಡಿದ್ದಾರೆ.
ಸ್ಯಾನಿಟೈಸರ್ ಉಪಯೋಗಿಸುವಾಗ ಎಚ್ಚರವಿರಲಿ: ಇನ್ ಸ್ಪೆಕ್ಟರ್ ಶಶಿಧರ್ ಸೂಚನೆ
'ಕೈಗಳಿಗೆ ಸ್ಯಾನಿಟೈಸರ್ ಹಾಕಿ ಅಡುಗೆ ಮಾಡಬೇಡಿ'
ದಿನೇ ದಿನೇ ಸ್ಯಾನಿಟೈಸರ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸ್ಯಾನಿಟೈಸರ್ಗೂ ಬೇಡಿಕೆ ಬಂದಿದೆ. ಕೈಗಳಿಗೆ ಸ್ಯಾನಿಟೈಸರ್ ಹಚ್ಚಿಕೊಂಡು ಅಡುಗೆ ಮನೆ ಅಥವಾ ಒಲೆ ಮುಂದೆ ಇರುವವವರು ಕೊಂಚ ಎಚ್ಚರದಿಂದ ಇರಬೇಕಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಸ್ಯಾನಿಟೈಸರ್ನಲ್ಲಿ ರಾಸಾಯನಿಕ ಅಂಶ ಹೆಚ್ಚಾಗಿರುತ್ತದೆ. ಕೈಗಳಿಗೆ ಸ್ಯಾನಿಟೈಸರ್ ಹಚ್ಚಿಕೊಂಡು ಅಡುಗೆ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಕಿಡಿ ತಾಕಿದರೆ ಕೈಗಳು ಸುಡುವ ಸಾಧ್ಯತೆಯಿದೆ.
ಹಾಗಾಗಿ, ಮಾರುಕಟ್ಟೆಯಲ್ಲಿ ನಾನಾ ತರಹದ ಸ್ಯಾನಿಟೈಸರ್ ಸಿಗಲಿದ್ದು, ಗುಣಮಟ್ಟದ ಹಾಗೂ ಹೆಚ್ಚು ಕೆಮಿಕಲ್ ಇರುವ ಸ್ಯಾನಿಟೈಸರ್ ಹಚ್ಚಿದ ನಂತರ ಯಾವುದೇ ಕಾರಣಕ್ಕೂ ಬೆಂಕಿ ಇರುವ ಪ್ರದೇಶದಿಂದ ದೂರವಿದ್ದು ಜಾಗ್ರತೆವಹಿಸಬೇಕು. ಸ್ವಲ್ಪ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ ಎಂದು ವಿಡಿಯೋ ಮಾಡಿ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಿದ್ದಾರೆ.