ಬೆಂಗಳೂರು : ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ #couplechallenge ಎಂದು ಟ್ರೆಂಡಿಂಗ್ನಲ್ಲಿದೆ. ಆದರೆ, ಈ ಚ್ಯಾಲೆಂಜ್ನಲ್ಲಿ ಜೋಡಿಗಳ ಫೋಟೋ ಹಾಕಿ ಸೈಬರ್ ಖದೀಮರ ಕಣ್ಣಿಗೆ ಬೀಳಬೇಡಿ ಎಂದು ವಿಧಿವಿಜ್ಞಾನ ತಜ್ಞ ಫನೀಂದ್ರ ಎಚ್ಚರಿಕೆ ನೀಡಿದ್ದಾರೆ.
ಲಕ್ಷಾಂತರ ಜನ ಈ ಚ್ಯಾಲೆಂಜ್ ಸ್ವೀಕರಿಸಿ ಗಂಡ-ಹೆಂಡತಿ ಅಥವಾ ಜೋಡಿಗಳ ಫೋಟೋ, ವಿಡಿಯೋಗಳನ್ನ ಫೇಸ್ಬುಕ್ ಸೇರಿ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುವುದು ಕಂಡು ಬಂದಿದೆ. ಇಂದು 11 ಲಕ್ಷಕ್ಕೂ ಹೆಚ್ಚಿನ ಫೋಟೋ/ವಿಡಿಯೋಗಳು ಈ ಚಾಲೆಂಜ್ ಹೆಸರಿನಲ್ಲಿ ಅಪ್ಲೋಡ್ ಆಗಿವೆ ಎಂದು ತಿಳಿದು ಬಂದಿದೆ.
ವಿಧಿವಿಜ್ಞಾನ ತಜ್ಞ ಫನೀಂದ್ರ ಅವರು ಹೇಳುವಂತೆ, #couplechallenge ಬಿಟ್ಟು ಮಕ್ಕಳೊಂದಿಗೆ ಫೋಟೋ, ಕುಂಟುಂಬ ಸದಸ್ಯರ ಜೊತೆ ಫೋಟೋ ಅಪ್ಲೋಡ್ ಹಾಕಿರುವುದರಿಂದ, ಸೈಬರ್ ಕ್ರಿಮಿನಲ್ಸ್ ನಿಮ್ಮನ್ನ ಹಾಗೂ ನಿಮ್ಮವರ ಬಗ್ಗೆ ತಿಳಿಯಲು ನೀವೇ ಮಾಡಿಕೊಟ್ಟ ಸುಲಭ ದಾರಿಯಾಗಿದೆ ಈ ಚ್ಯಾಲೆಂಜ್. ಈ ರೀತಿ ಫೋಟೋ ಹಾಕುವುದರಿಂದ ನಿಮ್ಮ ಬಗ್ಗೆ ಹಾಗೂ ನಿಮ್ಮವರ ಬಗ್ಗೆ ಮಾಹಿತಿ ಪಡೆದು ಮೋಸ ಮಾಡುವ ತಂತ್ರಗಳನ್ನ ಈ ಆಧುನಿಕ ಖದೀಮರು ರೂಪಿಸುತ್ತಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಉದಾಹರಣೆ ಜೊತೆಗೆ ವಿವರಿಸುವ ಅವರು, ಪ್ರವಾಸಕ್ಕೆ ಹೋದಾಗ ಫೋಟೋ ಹಾಕಿದ ಸಂದರ್ಭದಲ್ಲಿ ವ್ಯಕ್ತಿಗಳನ್ನ ಟ್ಯಾಗ್ ಮಾಡದಿದ್ದರೂ ಇಡೀ ಕುಟುಂಬ ಪ್ರವಾಸದಲ್ಲಿದೆ ಎಂದು ತಿಳಿಯುತ್ತದೆ. ಮನೆ ಕಳ್ಳತನ ಮಾಡುವುದಕ್ಕೆ ಇದು ಸೂಕ್ತ ಸಮಯ ಎಂದು ಕಳ್ಳರಿಗೆ ಗೊತ್ತಾಗುತ್ತದೆ. ಇಂಥ ಚ್ಯಾಲೆಂಜ್ ಹೆಸರಿನಲ್ಲಿ ಫೋಟೋ ಅಥವಾ ವಿಡಿಯೋ ಹಾಕುವ ಮುನ್ನ ಎಚ್ಚರವಾಗಿರಿ. ನೀವು ನಿಮ್ಮ ಡೇಟಾ ಹಾಗೂ ಮಾಹಿತಿಗಳನ್ನ ಸೈಬರ್ ಖದೀಮರಿಗೆ ಬಿಟ್ಟು ಕೊಡುತ್ತಿದ್ದೀರಿ ಎಂಬ ಭಯ ನಿಮ್ಮಲ್ಲಿರಲಿ ಎಂದು ಎಚ್ಚರಿಸಿದರು.
ವಿಶ್ವದಲ್ಲೇ ಪ್ರಾರಂಭವಾಗಿರುವ ಇಂಥ ಚ್ಯಾಲೆಂಜ್ಗಳಿಂದ ಸಾಕಷ್ಟು ಜನರ ಸಾಂಸಾರಿಕ ಜೀವನದಲ್ಲಿ ಹಾನಿ ಉಂಟು ಮಾಡುವ ಜೊತೆಗೆ, ಹಣ ಕಳೆದುಕೊಂಡಿರುವ ಉದಾಹರಣೆಯೂ ಸಹ ಇದೆ. ಸಾಮಾಜಿಕ ಜಾಲತಾಣಗಳು ಮನುಷ್ಯನಿಗೆ ಸಕಾರಾತ್ಮಕ ಸಹಾಯ ಉಂಟುಮಾಡಬೇಕೇ ಹೊರತು ಹಾನಿ ಉಂಟು ಮಾಡಬಾರದು ಎನ್ನುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕುವವರಿಗೆ ಉತ್ತಮ ಸಂದೇಶವೊಂದನ್ನ ಫನೀಂದ್ರ ಅವರು ನೀಡಿದ್ದಾರೆ.