ETV Bharat / state

ಹುತಾತ್ಮ ಯೋಧರ ಕುಟುಂಬಗಳಿಗೆ ಬಿಡಿಎದಿಂದ ನಿವೇಶನ ಹಂಚಿಕೆ.. - BDA site for the family of martyrs in Bangalore today

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಹಿಂದೆ ಇಬ್ಬರು ವೀರ ಯೋಧರ ಕುಟುಂಬಗಳಿಗೆ ಸಾಂಕೇತಿಕವಾಗಿ ನಿವೇಶನ ಹಂಚಿಕೆ ಮಾಡಿದ್ದರು..

ಯೋಧರ ಕುಟುಂಬಕ್ಕೆ ನಿವೇಶನ ಹಂಚಿಕೆ
ಯೋಧರ ಕುಟುಂಬಕ್ಕೆ ನಿವೇಶನ ಹಂಚಿಕೆ
author img

By

Published : Sep 28, 2021, 9:09 PM IST

ಬೆಂಗಳೂರು : ನಗರದ 5 ಹುತಾತ್ಮ ಯೋಧರ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲಾಯಿತು. ಇಂದು ಯೋಧರಾದ ಲಾನ್ಸ್ ನಾಯಕ್ ಕೆ.ಎಮ್ ನಾಗೇಂದ್ರಕುಮಾರ್ ಅವರ ತಾಯಿ ಸರೋಜಮ್ಮಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಆಯುಕ್ತ ರಾಜೇಶ್ ಗೌಡ ಹಾಗೂ ಕಾರ್ಯದರ್ಶಿ ಆನಂದ ಹಕ್ಕು ಪತ್ರ ವಿತರಿಸಿದರು.

ಇನ್ನುಳಿದ ಎರಡು ಕುಟುಂಬಗಳಿಗೆ ನೋಂದಾಯಿತ ಅಂಚೆಯ ಮೂಲಕ ಹಕ್ಕು ಪತ್ರಗಳನ್ನು ತಲುಪಿಸಲಾಗುವುದು ಎಂದು ಆಯುಕ್ತರು ತಿಳಿಸಿದರು. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಶಿಫಾರಿಸಿನಂತೆ ಗಡಿ ಕಾಯುವ ಯೋಧರು ವೀರಮರಣ ಹೊಂದಿದಲ್ಲಿ ಅಥವಾ ತೀವ್ರ ತರವಾಗಿ ಗಾಯಗೊಂಡ ಯೋಧರ ಕುಟುಂಬಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉಚಿತ ನಿವೇಶನ ನೀಡಲಾಗುತ್ತದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಹಿಂದೆ ಇಬ್ಬರು ವೀರ ಯೋಧರ ಕುಟುಂಬಗಳಿಗೆ ಸಾಂಕೇತಿಕವಾಗಿ ನಿವೇಶನ ಹಂಚಿಕೆ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.