ಬೆಂಗಳೂರು: ಜಮೀನು ಕಳೆದುಕೊಂಡ ರೈತರು, ಬಿಡಿಎ ಸೈಟ್ ಮಾಹಿತಿಗಾಗಿ ಓಡಾಡುತ್ತಿರುವ ಸಾರ್ವಜನಿಕರನ್ನು ಒಳಗೆ ಬಿಡದೆ ಪ್ರತಿನಿತ್ಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಈ ಬಗ್ಗೆ ಬುಧವಾರವೂ ಕೂಡ ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಬಿಡಿಎ ಸಾರ್ವಜನಿಕ ಸಂಪರ್ಕಾಧಿಕಾರಿ, ಬಿಡಿಎ ಪ್ರಾಧಿಕಾರದ ಸಿಬ್ಬಂದಿಗೆ ಬುಧವಾರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಫಲಿತಾಂಶ ಇನ್ನೂ ಬಂದಿಲ್ಲ. ಅಭಿಯಂತರ ವಿಭಾಗದ ಓರ್ವ ಅಧಿಕಾರಿಗೆ ಪಾಸಿಟಿವ್ ಬಂದಿದೆ ಎಂದರು.
ಈ ಹಿನ್ನೆಲೆ ಸಾರ್ವಜನಿಕರನ್ನು ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಕಚೇರಿಯೊಳಗೆ ಹಂತಹಂತವಾಗಿ ಬಿಡಲಾಗುವುದು. ಒಂದು ಬಾರಿಗೆ ಹತ್ತು ಜನರನ್ನು ಬಿಟ್ಟು, ಕೆಲಸ ಮುಗಿಸಿ ಹೊರಬಂದ ಮೇಲೆ ಉಳಿದ ಹತ್ತು ಜನರಿಗೆ ಬಿಡಲಾಗುವುದು. ಇಂದು ಒಂದೇ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಗೊಂದಲ ಉಂಟಾಯಿತು ಎಂದು ತಿಳಿಸಿದ್ದಾರೆ.
ನಾಲ್ಕು ದಿನ ಸೀಲ್ ಡೌನ್ ಆಗಿದ್ದ ಬಿಡಿಎ, 24 ರಿಂದ ಕಾರ್ಯಾರಂಭಗೊಳಿಸಿದೆ.