ಬೆಂಗಳೂರು: ಎರಡನೇ ಅಲೆಯ ತೀವ್ರತೆ ಎಷ್ಟರ ಮಟ್ಟಿಗೆ ನಗರದ ಜನತೆಯನ್ನ ಸಂಕಷ್ಟಕ್ಕೆ ಸಿಲುಕಿಸಿದೆ ಎನ್ನುವುದು ಗೊತ್ತೇ ಇದೆ. ಜೊತೆಗೆ 2ನೇ ಅಲೆಯಲ್ಲಿ ತೀವ್ರವಾಗಿದ್ದ ಸೋಂಕಿತರ ಸಂಖ್ಯೆಯನ್ನ ನಿಯಂತ್ರಿಸಲು ಪಾಲಿಕೆ ಸಾಕಷ್ಟು ಕ್ರಮಗಳನ್ನ ತೆಗೆದುಕೊಂಡಿತ್ತು. ಹೀಗಾಗಿ ಮೂರನೇ ಅಲೆ ತಡೆಯಲು ಬಿಬಿಎಂಪಿ ಹಲವಾರು ಬಿಗಿ ಕ್ರಮಕೈಗೊಂಡಿದೆ.
ಕೊರೊನಾ 3ನೇ ಅಲೆಯನ್ನು ಆರಂಭದಿಂದಲೇ ತಡೆಯಲು ಮೈಕ್ರೋ ಕಂಟೈನ್ಮೆಟ್ ಝೋನ್ ಜೊತೆಗೆ ಪಾಲಿಕೆಯಿಂದ ರೆಡ್ ಟೇಪ್ ಅಳವಡಿಕೆ ಕೂಡ ಮಾಡಲಾಗುತ್ತಿದೆ. ಸೋಂಕು ಕಾಣಿಸಿಕೊಳ್ಳುತ್ತಿರುವ ಮನೆಗಳಿಗೆ ರೆಡ್ ಟೇಪ್ ಅಂಟಿಸಿ ಪಾಲಿಕೆ ಎಚ್ಚರಿಕೆ ಕೊಡುತ್ತಿದೆ. ಜೊತೆಗೆ ಸೋಂಕು ಕಾಣಿಸಿಕೊಳ್ಳುತ್ತಿರುವ ಮನೆಯ 100 ಮೀಟರ್ ಸುತ್ತಳತೆಯಲ್ಲಿರುವ ಜನರಿಗೆ ಕೋವಿಡ್ ಪರೀಕ್ಷೆ ಕೂಡ ನಡೆಸಲಾಗುತ್ತಿದೆ. ಇನ್ನು ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅತಿ ಹೆಚ್ಚಾಗಿ ಕಂಡು ಬಂದ ಪ್ರದೇಶಗಳ ಕಡೆ ಹೆಚ್ಚಿನ ಗಮನ ಹರಿಸುತ್ತಿದೆ.
- ಸೋಂಕಿತರ ಕೈಗೆ ಸ್ಟ್ಯಾಂಪ್ ಹಾಕಲಾಗುತ್ತದೆ
- ಪ್ರಾಥಮಿಕ ಸಂಪರ್ಕಿತರಿಗೆ ತಪ್ಪದೇ ಕೈ ಮೇಲೆ ಸ್ಟ್ಯಾಂಪ್ ಹಾಕಿಸಿಕೊಳ್ಳಬೇಕು
- ಮನೆ ಮುಂದೆ ಕೊರೋನಾ ಪಾಸಿಟಿವ್ ಎಂದು ಸ್ಟಿಕರ್ ಹಾಕಲಾಗುತ್ತದೆ
- ಮನೆಗೆ ಅಡ್ಡವಾಗಿ ರೆಡ್ ಟೇಪ್ ಅಳವಡಿಕೆ ಮಾಡಿ ಕಂಟೈನ್ ಮೆಂಟ್ ಜಾರಿಗೊಳಿಸಲಾಗುತ್ತದೆ
- ಅಗತ್ಯ ವಸ್ತು ಖರೀದಿಗೂ ಹೊರಗೆ ಹೋಗುವಂತಿಲ್ಲ
- ಅಗತ್ಯವಾದದ್ದನ್ನ ಬಿಬಿಎಂಪಿ , ಸ್ಥಳೀಯರು ಸಹ ಸಹಾಯ ಮಾಡುತ್ತಾರೆ
- ಮನೆಯಿಂದ ಸೋಂಕಿತರು ಹೊರಗೆ ಹೋಗುವುದು ಅಸಾಧ್ಯ
ವಲಯ - ಪ್ರಕರಣಗಳ ಸಂಖ್ಯೆ - ಕಂಟೈನ್ಮೆಟ್ ಪ್ರದೇಶಗಳು
ಮಹಾದೇವಪುರ - 700 - 34
ಬೊಮ್ಮನಹಳ್ಳಿ - 682 - 28
ಪೂರ್ವ ವಲಯ - 533 - 19
ಆರ್ ಆರ್ ನಗರ - 430 - 8
ಯಲಹಂಕ - 309 - 6
ದಕ್ಷಿಣ ವಲಯ - 377 - 5
ಪಶ್ಚಿಮ ವಲಯ - 366 - 4
ದಾಸರಹಳ್ಳಿ - 106 - 4