ETV Bharat / state

ವಿದ್ಯುತ್ ಬಿಲ್ ಜೊತೆ ಬರಲಿದೆ ಕಸ ನಿರ್ವಹಣೆ ಶುಲ್ಕ: ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ - ಸಿಲಿಕಾನ್ ಸಿಟಿ ಜನರಿಗೆ ಬಿಬಿಎಂಪಿಯಿಂದ ಕಾದಿದೆ ಶಾಕ್

ಬಿಬಿಎಂಪಿಗೆ ಕಸ ನಿರ್ವಹಣೆ ವೆಚ್ಚ ಹೆಚ್ಚಿನ ಹೊರೆಯಾಗುತ್ತಿದ್ದು, ಇದಕ್ಕಾಗಿ ಪ್ರತೀ ಮನೆ, ವಾಣಿಜ್ಯ ಕಟ್ಟಡಗಳಿಂದ ಪ್ರತ್ಯೇಕವಾಗಿ ಪ್ರತೀ ತಿಂಗಳು ಕಸ ನಿರ್ವಹಣೆ ಶುಲ್ಕ ಸಂಗ್ರಹಣೆಗೆ ಈಗಾಗಲೇ ನಿರ್ಧರಿಸಿದೆ.

Thought for garbage management fee levy from BBMP
ವಿದ್ಯುತ್ ಬಿಲ್ ಜೊತೆ ಬರಲಿದೆ ಹೊಸ ಕಸ ನಿರ್ವಹಣೆ ಶುಲ್ಕ
author img

By

Published : Dec 1, 2020, 1:14 PM IST

ಬೆಂಗಳೂರು: ಕಸ ನಿರ್ವಹಣೆ ಶುಲ್ಕ ಹೆಸರಲ್ಲಿ ಸಿಲಿಕಾನ್ ಸಿಟಿ ಜನರ ಜೇಬಿಗೆ ಕತ್ತರಿ ಬೀಳುವ ದಿನಗಳು ಹೆಚ್ಚು ದೂರವಿಲ್ಲ. ಇನ್ಮುಂದೆ ಪ್ರತೀ ತಿಂಗಳು ನೀರಿನ ಬಿಲ್, ವಿದ್ಯುತ್ ಬಿಲ್ ರೀತಿಯೇ ಕಸ ನಿರ್ವಹಣೆ ಶುಲ್ಕವೂ ಬೆಂಗಳೂರು ನಾಗರಿಕರ ಕೈ ಸುಡಲಿದೆ.

ಬಿಬಿಎಂಪಿಗೆ ಕಸ ನಿರ್ವಹಣೆ ವೆಚ್ಚ ಹೆಚ್ಚಿನ ಹೊರೆಯಾಗುತ್ತಿದ್ದು, ಇದಕ್ಕಾಗಿ ಪ್ರತೀ ಮನೆ, ವಾಣಿಜ್ಯ ಕಟ್ಟಡಗಳಿಂದ ಪ್ರತ್ಯೇಕವಾಗಿ ಪ್ರತೀ ತಿಂಗಳು ಕಸ ನಿರ್ವಹಣೆ ಶುಲ್ಕ ಸಂಗ್ರಹಣೆಗೆ ಈಗಾಗಲೇ ನಿರ್ಧರಿಸಿದೆ. ಆದರೆ ಆಸ್ತಿ ತೆರಿಗೆ ಜೊತೆ ಸಂಗ್ರಹಿಸಲು ನಿರ್ಧರಿಸಿದ್ದ ಬಿಬಿಎಂಪಿ, ಇದೀಗ ಪ್ರತೀ ತಿಂಗಳು ವಿದ್ಯುತ್ ಬಿಲ್ ಜೊತೆಗೆ ಕಸದ ಶುಲ್ಕ ಸಂಗ್ರಹಿಸುವ ಪ್ರಸ್ತಾವನೆಯನ್ನು ಬಿಬಿಎಂಪಿ ಸರ್ಕಾರಕ್ಕೆ ಕಳಿಸಿದೆ.

ಭಾರೀ ಪ್ರಮಾಣದ ಕಸ ಉತ್ಪಾದಕರನ್ನು ಹೊರತುಪಡಿಸಿ ಉಳಿದವರ ಕಸ ನಿರ್ವಹಣೆ ಪಾಲಿಕೆ ಮಾಡುತ್ತಿದೆ. ಇದರಲ್ಲಿ ಶೇ.5 ರಿಂದ 6 ರಷ್ಟು ಮಾತ್ರ ಕಸದ ಉಪಕರದ ಮೂಲಕ ಈವರೆಗೆ ಸಂಗ್ರಹಿಸಲಾಗುತ್ತಿತ್ತು. ಆದರೆ 2016ರ ಕಸ ನಿರ್ವಹಣೆ ನಿಯಮ ಹೇಳುವ ಪ್ರಕಾರವೂ ಕಸ ಉತ್ಪಾದಿಸುವವರೇ ಅದರ ವೆಚ್ಚ ಭರಿಸಬೇಕೆಂಬುದು ನಿಯಮದಲ್ಲಿದೆ. ಬೀದಿ ಗುಡಿಸುವ ಕಾರ್ಯಕ್ಕೆ ವಾರ್ಷಿಕವಾಗಿ 380 ಕೋಟಿ ರೂ ವೆಚ್ಚವಾಗ್ತಿದೆ. ಉಪಕರದ ಮೂಲಕ ಸಂಗ್ರಹವಾಗುವ 43 ಕೋಟಿ ರೂ. ಅನ್ನು ಈ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ.

ಇದೀಗ 2020 ಜೂನ್ 4 ರಂದು ಬಿಬಿಎಂಪಿಯ ಪೌರ ಕಸ ನಿರ್ವಹಣೆ ಉಪನಿಯಮಗಳ ಕುರಿತು ರಾಜ್ಯ ಪತ್ರದಲ್ಲಿ ಅಧಿಸೂಚನೆ ಪ್ರಕಟವಾಗಿದೆ.

ಶುಲ್ಕ ಯಾರಿಗೆ ಎಷ್ಟು ಶುಲ್ಕ?

ಪ್ರತೀ ಮನೆಗೆ- 200 ರೂ

ವಸತಿ‌ ಕಟ್ಟಡಗಳಿಗೆ (ವಿಸ್ತೀರ್ಣ- ಚ.ಅಡಿ ಶುಲ್ಕ)

1000 ದವರೆಗೆ 10 ರೂ

1001-3000. 30 ರೂ

3000 ಮೇಲ್ಪಟ್ಟು 50 ರೂ

ವಾಣಿಜ್ಯ ಕಟ್ಟಡಗಳಿಗೆ (ವಿಸ್ತೀರ್ಣ -ಚ.ಅಡಿ ಶುಲ್ಕ)

1000. 50 ರೂ

1001-3000. 100 ರೂ

5000 ಮೇಲ್ಪಟ್ಟ ಕಟ್ಟಡಗಳಿಗೆ 200 ರೂ

ಕೈಗಾರಿಕಾ ಕಟ್ಟಡ (ವಿಸ್ತೀರ್ಣ -ಚ.ಅಡಿ ಶುಲ್ಕ)

1000. 50 ರೂ

1001-5000. 200

5000 ಮೇಲ್ಪಟ್ಟ ಕಟ್ಟಡಗಳಿಗೆ 300 ರೂ

ಹೋಟೆಲ್, ಕಲ್ಯಾಣ ಮಂಟಪ, ಆರೋಗ್ಯ ಸೇವಾ ಸಂಸ್ಥೆ ಕಟ್ಟಡಗಳಿಂದ (ವಿಸ್ತೀರ್ಣ -ಚ.ಅಡಿ ಶುಲ್ಕ)

10000 ದವರೆಗೆ 300

10000-50000. 500

50000 ಮೇಲ್ಪಟ್ಟ ಕಟ್ಟಡಗಳಿಗೆ 600

ವಾಣಿಜ್ಯ ಮತ್ತು ಸಾಂಸ್ಥಿಕ ಉತ್ಪಾದಕರು ಕಸದ ತೂಕ(ಕೆ.ಜಿ). ಶುಲ್ಕ

5 ಕ್ಕಿಂತ ಕಡಿಮೆ 50

5-10 1400

10-25. 3500

25-50. 7000

50-100. 14000

ಖಾಲಿ‌ ನಿವೇಶನಕ್ಕೆ ಪ್ರತಿ.ಚ.ಅಡಿಗೆ 0.20

ಬೆಸ್ಕಾಂಗೆ ಹೊಣೆ..?

ಬಿಬಿಎಂಪಿಯಲ್ಲಿ ಶುಲ್ಕ ಸಂಗ್ರಹಿಸಲು ಸಿಬ್ಬಂದಿ ಕೊರತೆ ಎದುರಾಗಲಿದೆ. ಅಲ್ಲದೆ ಸಾರ್ವಜನಿಕರು ಶುಲ್ಕ ಪಾವತಿಸದೇ ಇದ್ದರೆ, ದಂಡ ವಿಧಿಸುವ, ವಸೂಲು ಮಾಡುವ ವ್ಯವಸ್ಥೆಯೂ ಪಾಲಿಕೆಯಲ್ಲಿಲ್ಲ. ಬೆಸ್ಕಾಂ ಈಗಾಗಲೇ ಪ್ರತೀ ತಿಂಗಳು ವಿದ್ಯುತ್ ಬಳಕೆದಾರರಿಂದ ಶುಲ್ಕ ಸಂಗ್ರಹಿಸುತ್ತಿದೆ. ಇದರ ಜೊತೆಗೇ ಕಸದ ಶುಲ್ಕವನ್ನೂ ಸಂಗ್ರಹಿಸುವಂತೆ ಪತ್ರ ಬರೆದಿದ್ದಾರೆ.

ಪಾಲಿಕೆಯೇ ಕಸ ಉತ್ಪಾದಕರನ್ನು ಗುರುತಿಸಲಿದೆ. ವಿದ್ಯುತ್ ಮೀಟರ್​ನ ಆರ್ ಆರ್ ಸಂಖ್ಯೆಯನ್ನು ಸಂಗ್ರಹಿಸಿ, ಪಾಲಿಕೆಯ ಮ್ಯಾಪಿಂಗ್ ಕೂಡಾ ಇದರ ಜೊತೆಗೆ ತಂತ್ರಾಂಶದಲ್ಲಿ ಸೇರಿಸಿ ಕಸದ ಶುಲ್ಕ ಸಂಗ್ರಹಿಸಬಹುದು. ಬೆಸ್ಕಾಂಗೆ ಸೇವಾ ಶುಲ್ಕ ಪಾವತಿಸಲಾಗ್ತದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಅದಲ್ಲದೆ ಪ್ರತೀ ವರ್ಷ ಶೇ.5 ರಷ್ಟು ಕಸ ನಿರ್ವಹಣೆ ಶುಲ್ಕ ಏರಿಕೆ ಆಗಲಿದೆ. ಏಪ್ರಿಲ್ 1 ರಿಂದ ಏರಿಕೆ ಆಗಲಿದೆ. ಶುಲ್ಕ ಪಾವತಿಸದೇ ಇದ್ದರೆ ಮಾಸಿಕ ಶೇ. ಎರಡಷ್ಟು ಬಡ್ಡಿ ಸೇರಿಸಲಾಗ್ತದೆ. ಆದರೆ ಮನೆಯಲ್ಲೇ ಕಾಂಪೋಸ್ಟ್ ತಯಾರಿಸುವ ಕಸ ಉತ್ಪಾದಕರಿಗೆ, ಬಯೋಮೀಥನೈಸೇಷನ್ ಮಾಡುವವರಿಗೆ ಶೇ.50 ರಷ್ಟು ರಿಯಾಯಿತಿ ಸಿಗಲಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.