ETV Bharat / state

ಬಿಬಿಎಂಪಿ ವ್ಯಾಪ್ತಿಯಲ್ಲಿನ ವಾಣಿಜ್ಯ ಪರವಾನಗಿ ಆನ್‌ಲೈನ್‌ ವ್ಯವಸ್ಥೆ ಇನ್ನಷ್ಟು ಸರಳೀಕರಣ - ಆನ್‌ಲೈನ್‌ ವ್ಯವಸ್ಥೆ

ವಾಣಿಜ್ಯ ಪರವಾನಗಿ ವಿತರಣೆ ಹಾಗೂ ನವೀಕರಣ ಪ್ರಗತಿಯ ಕುರಿತು ಬಿಬಿಎಂಪಿ ಅಧಿಕಾರಿಗಳು ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಈಗಿರುವ ವ್ಯವಸ್ಥೆಯನ್ನು ಇನ್ನೂ ಸರಳೀಕರಿಸುವ ಬಗ್ಗೆ ಚರ್ಚೆ ನಡೆಸಲಾಯಿತು.

BBMP officials held meeting with health department officials
ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಿಬಿಎಂಪಿ ಅಧಿಕಾರಿಗಳು
author img

By

Published : Nov 17, 2020, 9:05 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 198 ವಾರ್ಡ್​ಗಳಲ್ಲಿನ ವಾಣಿಜ್ಯ ಪರವಾನಗಿ ವಿತರಣೆ ಹಾಗೂ ನವೀಕರಣ ಪ್ರಗತಿಯ ಕುರಿತು ಬಿಬಿಎಂಪಿ ಆಡಳಿತ ವರ್ಗ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿತು.

BBMP officials held meeting with health department officials
ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಿಬಿಎಂಪಿ ಅಧಿಕಾರಿಗಳು

ನಗರದಲ್ಲಿ ಉದ್ದಿಮೆ ಪರವಾನಗಿ ವಿತರಣೆಯನ್ನು ಆನ್‌ಲೈನ್ ವ್ಯವಸ್ಥೆಯಲ್ಲಿ ಅಳವಡಿಸಿದ್ದರೂ ಸಹ ನವೀಕರಣ ಅರ್ಜಿಗಳು ಬೇಗ ವಿತರಣೆಯಾಗುತ್ತಿದ್ದು, ಹೊಸದಾಗಿ ಟ್ರೇಡ್ ಲೈಸನ್ಸ್ ವಿತರಣೆ ಮಾಡುವ ಪ್ರಕರಣಗಳಲ್ಲಿ ವಿಳಂಬವಾಗುತ್ತಿದೆ. ಹಾಗಾಗಿ ಈಗಿರುವ ವ್ಯವಸ್ಥೆಯನ್ನು ಇನ್ನೂ ಸರಳೀಕರಿಸುವ ಬಗ್ಗೆ ಚರ್ಚೆ ಇಂದು ನಡೆಸಲಾಯಿತು.

ಕೆಲವೊಂದು ಉದ್ದಿಮೆಗಳಿಗೆ ಸ್ಥಳ ಪರಿಶೀಲನೆ ಅಗತ್ಯವಿರುವುದಿಲ್ಲ. ಹಾಗಾಗಿ ಅಂತಹ ಪರವಾನಗಿ ಸ್ಥಳ ಪರಿಶೀಲಿನೆಯ ಹಂತವನ್ನು ಕಡಿತಗೊಳಿಸಿ ಶೀಘ್ರವಾಗಿ ಪರವಾನಗಿ ವಿತರಣೆ ಮಾಡಲು ಕ್ರಮ ವಹಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಟ್ರೇಡ್ ಲೈಸನ್ಸ್ ಪಡೆಯಲು ಉದ್ದಿಮೆದಾರರು ಕಚೇರಿಗೆ ಭೇಟಿ ನೀಡುವುದನ್ನು ತಪ್ಪಿಸುವ ಸಲುವಾಗಿ ಆನ್‌ಲೈನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೆ ಉದ್ದಿಮೆದಾರರು ಸುಲಭ ಮತ್ತು ಸರಳ ವಿಧಾನದಲ್ಲಿ ಲೈಸನ್ಸ್ ಪಡೆಯುವಂತೆ ಅನುಕೂಲ ಮಾಡಿಕೊಡಲು ತಯಾರಿ ನಡೆದಿದೆ.

ವಲಯವಾರು ಎಷ್ಟು ಅರ್ಜಿಗಳು ಸ್ವೀಕೃತಗೊಂಡಿವೆ, ಎಷ್ಟು ಪರವಾನಗಿ ನೀಡಲಾಗಿದೆ, ಬಾಕಿ ಇರುವ ಅರ್ಜಿಗಳ ವಿವರಗಳನ್ನು ಒಳಗೊಂಡಂತೆ ಡ್ಯಾಶ್‌ಬೋರ್ಡ್ ಸಿದ್ಧಪಡಿಸಲು ಮತ್ತು ಇದರಿಂದ ಬಾಕಿ ಇರುವ ಅರ್ಜಿಗಳ ಮೇಲೆ ಮೇಲಾಧಿಕಾರಿಗಳು ನಿಗಾ ವಹಿಸುವ ಜೊತೆಗೆ ಉದ್ದಿಮೆ ಪರವಾನಗಿಯನ್ನು ಡಿಜಿ ಲಾಕರ್​ನೊಂದಿಗೆ ಸಮೀಕರಿಸುವ ಬಗ್ಗೆಯೂ ಕ್ರಮ ವಹಿಸಲು ಬಿಬಿಎಂಪಿ ಅಧಿಕಾರಿಗಳು ಸೂಚಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.