ETV Bharat / state

ಬಿಬಿಎಂಪಿ ಸಿಬ್ಬಂದಿಯನ್ನು ಕಚೇರಿಯೊಳಗೆ ಕೂಡಿಹಾಕಿದ ಸ್ಥಳೀಯರು: ಕಾರಣ? - ಬಿಬಿಎಂಪಿ ಸಿಬ್ಬಂದಿ ಪ್ರತಿಭಟನೆ ನ್ಯೂಸ್​

ವಿಜಯನಗರ ವಾರ್ಡ್​ನಲ್ಲಿ ಪಾಲಿಕೆ ಕಚೇರಿಗೆ ಸ್ಥಳೀಯರು ನುಗ್ಗಿ ಸಿಬ್ಬಂದಿಯನ್ನು ಕಚೇರಿಯೊಳಗೆ ಕೂಡಿ ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

BBMP officers protest in benglore
ಪ್ರತಿಭಟನೆ ನಡೆಸಿದ ಬಿಬಿಎಂಪಿ ಸಿಬ್ಬಂದಿ
author img

By

Published : Feb 15, 2020, 7:06 PM IST

ಬೆಂಗಳೂರು: ವಿಜಯನಗರ ವಾರ್ಡ್​ನಲ್ಲಿ ಪಾಲಿಕೆ ಕಚೇರಿಗೆ ಸ್ಥಳೀಯರು ನುಗ್ಗಿ ಸಿಬ್ಬಂದಿಯನ್ನು ಕಚೇರಿಯೊಳಗೆ ಕೂಡಿ ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಪ್ರತಿಭಟನೆ ನಡೆಸಿದ ಬಿಬಿಎಂಪಿ ಸಿಬ್ಬಂದಿ

ನಿನ್ನೆ ಸಂಜೆ 5 ಗಂಟೆಯ ವೇಳೆಗೆ ವಿಜಯನಗರ ವಾರ್ಡ್​ನ ಸಹಾಯಕ ಕಂದಾಯ ಅಧಿಕಾರಿ ಉಪ ವಿಭಾಗದ ಕಚೇರಿಗೆ 30ಕ್ಕೂ ಹೆಚ್ಚು ಸ್ಥಳೀಯರು ನುಗ್ಗಿ, ಕಚೇರಿಯಲ್ಲಿದ್ದ ಸಿಬ್ಬಂದಿ ಫೋನ್ ಕಸಿದು ಕೊಂಡಿದ್ದಾರೆ. ಅಲ್ಲದೆ ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿದ್ದಾರೆ. ವಾರ್ಡ್ 124 ರ ಸ್ವತ್ತಿನ ಸಂಖ್ಯೆ 13 ಕ್ಕೆ ಸಂಬಂಧಿಸಿದ ಕಡತಕ್ಕೆ ಗಲಾಟೆ ನಡೆದಿದೆ.

ಸಂಜೆ 5 ರಿಂದ ರಾತ್ರಿ 10 ರ ವರೆಗೂ ಕಚೇರಿಯಲ್ಲಿ ಕೂಡಿ ಹಾಕಲಾಗಿದೆ. ಇದರಲ್ಲಿ ಶಿವಕುಮಾರ್, ಓಂಕಾರ್ , ಲಕ್ಷ್ಮೀನಾರಾಯಣ್, ಸಚೀವ್ ದಕ್ಷಿಣಮೂರ್ತಿ ಪ್ರಮುಖ ಸ್ಥಳೀಯರಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಬ್ಬಂದಿ ದೂರು ನೀಡಿದ್ದಾರೆ. ಅಲ್ಲದೆ ನಿನ್ನೆ ನಡೆದ ಘಟನೆ ಖಂಡಿಸಿ, ಕಚೇರಿ ಮುಂಭಾಗದಲ್ಲಿ ಇಂದು ಅಧಿಕಾರಿಗಳು ಹಾಗೂ ನೌಕರ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.