ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೀವ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಆ್ಯಂಬುಲೆನ್ಸ್ ಚಾಲಕರು ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯಲು ನೀರಿನ ವ್ಯವಸ್ಥೆ ಮಾಡಿ ಎಂದಿದ್ದಕ್ಕೆ, ಬಿಬಿಎಂಪಿ ಅಧಿಕಾರಿಗಳು ಚಾಲಕನಿಗೆ ಆವಾಜ್ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೆರವಾಗಲು ಇತ್ತೀಚೆಗೆ ಟೆಂಪೋ ಟ್ರಾವೆಲರ್ (ಟಿಟಿ) ವಾಹನವನ್ನು ಬಿಬಿಎಂಪಿಯೊಂದಿಗೆ ಅಟ್ಯಾಚ್ ಮಾಡಿಕೊಂಡಿದ್ದರು. ತುರ್ತು ಸೇವೆ ಬಳಿಕ ಆಸ್ಪತ್ರೆ ಬಳಿ ಆ್ಯಂಬುಲೆನ್ಸ್ ನಿಲ್ಲಿಸಿದ್ದ ಚಾಲಕನೊಬ್ಬ ಕುಡಿಯಲು ನೀರಿನ ವ್ಯವಸ್ಥೆ ಮಾಡಿ ಎಂದು ಕೇಳಿದ್ದಾರೆ.
ಇವರ ಮನವಿಗೆ ಕಿವಿಗೊಡದ ಬಿಬಿಎಂಪಿ ಅಧಿಕಾರಿ ಆ್ಯಂಬುಲೆನ್ಸ್ ಚಾಲಕನಿಗೆ, ಏನೂ ಕೊಡುವುದಕ್ಕೆ ಆಗಲ್ಲ. ನಿನ್ನ ಗಾಡಿ ತೆಗೆದುಕೊಂಡು ಹೋಗು ಅಂತ ಆವಾಜ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಗಲಾಟೆಯ ದೃಶ್ಯ ಮೊಬೈಲ್ ಸೆರೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.