ETV Bharat / state

ಕೇರಳದಿಂದ ಬರುವ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಇವೆಲ್ಲ ಕಡ್ಡಾಯ: ಬಿಬಿಎಂಪಿ ಆದೇಶ - BBMP rules Kerala students

ಕರ್ನಾಟಕದಲ್ಲಿ ನರ್ಸಿಂಗ್, ವೈದ್ಯಕೀಯ, ಇಂಜಿನಿಯರಿಂಗ್, ಅರೆ ವೈದ್ಯಕೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಕೇರಳದಿಂದ ಬರುವ 72 ಗಂಟೆಗಳ ಒಳಗಿನ ಅವಧಿಯ ಆರ್‌ಟಿಪಿಸಿಆರ್ ಟೆಸ್ಟ್ ನೆಗೆಟಿವ್ ವರದಿ ತಂದಿರಬೇಕು.

bbmp-new-rules-for-students-who-came-from-kerala
ಕೇರಳದಿಂದ ಬರುವ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಇವೆಲ್ಲ ಕಡ್ಡಾಯ: ಬಿಬಿಎಂಪಿ ಆದೇಶ
author img

By

Published : Sep 1, 2021, 6:46 AM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇರಳ ರಾಜ್ಯದಿಂದ ಬರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳ ಟೆಸ್ಟಿಂಗ್ ಮತ್ತು ಕ್ವಾರಂಟೈನ್ ಬಗ್ಗೆ ಮುಖ್ಯ ಆಯುಕ್ತರು ಕಚೇರಿ ಆದೇಶ ಹೊರಡಿಸಿದ್ದು, ತಕ್ಷಣವೇ ನಗರದಲ್ಲಿ ಜಾರಿಯಾಗಲಿದೆ.

ಆದೇಶದಲ್ಲಿನ ಪ್ರಮುಖ ಅಂಶಗಳು ಹೀಗಿವೆ:

1. ಮದುವೆ/ಕೌಟುಂಬಿಕ ಕಾರ್ಯಕ್ರಮಗಳಿಗೆ ಒಳಾಂಗಣದ ಶೇ. 50ರಷ್ಟು ಸಾಮರ್ಥ್ಯದಿಂದ ಗರಿಷ್ಠ 400 ಅತಿಥಿಗಳ ಸಂಖ್ಯೆಗೆ ಮಿತಿಗೊಳಿಸಿ, ಕೋವಿಡ್ ಸಮುಚ್ಚಿತ ವರ್ತನೆಗಳನ್ನು ಅನುಸರಿಸುವ ಷರತ್ತಿಗೊಳಪಟ್ಟು ಅನುಮತಿ.

2. ಕರ್ನಾಟಕದಲ್ಲಿ ನರ್ಸಿಂಗ್, ವೈದ್ಯಕೀಯ, ಇಂಜಿನಿಯರಿಂಗ್, ಅರೆ ವೈದ್ಯಕೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಕೇರಳದಿಂದ ಬರುವ 72 ಗಂಟೆಗಳ ಒಳಗಿನ ಅವಧಿಯ ಆರ್‌ಟಿಪಿಸಿಆರ್ ಟೆಸ್ಟ್ ನೆಗೆಟಿವ್ ವರದಿ ತಂದಿರಬೇಕು. ಮುಂದುವರಿದು, ವಿದ್ಯಾರ್ಥಿಗಳನ್ನು ಆಯಾ ವಿದ್ಯಾ ಸಂಸ್ಥೆಯವರು 7 ದಿನಗಳ ಕಡ್ಡಾಯ ಸಾಂಸ್ಥಿಕ ದಿಗ್ಟಂಧನ (Institutional Quarantine) ಒಳಪಡಿಸಿ, 7ನೇ ದಿನದಂದು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು.

3. ಕೇರಳದಿಂದ ಬರುವ ವಿದ್ಯಾರ್ಥಿಗಳನ್ನು ಆಯಾ ವಿದ್ಯಾ ಸಂಸ್ಥೆಯವರೇ ಕಡ್ಡಾಯವಾಗಿ 7 ದಿನಗಳ ಕಾಲ ಸಾಂಸ್ಥಿಕ ದಿಗ್ಬಂಧನ (Institutional Quarantine) ದಲ್ಲಿರಿಸಲು ವಸತಿ ನಿಲಯಗಳಲ್ಲಿ ಪ್ರತ್ಯೇಕ ಪ್ರದೇಶ (Block) ವನ್ನು ಸಾಂಸ್ಥಿಕ ದಿಗ್ಬಂಧನಕ್ಕಾಗಿ ಮೀಸಲಿಟ್ಟು, ಸಾಂಸ್ಥಿಕ ದಿಗ್ಬಂಧನ (Institutional Quarantine) ಕಾಲದಲ್ಲಿ ಕ್ವಾರಂಟೈನ್​ನಲ್ಲಿರುವ ವಿದ್ಯಾರ್ಥಿಗಳ ದೈನಂದಿನ ಅವಶ್ಯಕತೆಗಳನ್ನು (ಕೋವಿಡ್ ಸಮುಚ್ಛಿತ ವರ್ತನೆಗಳ ಅನುಸರಣೆಯೊಂದಿಗೆ) ಪೂರೈಸಬೇಕು.

bbmp-new-rules-for-students-who-came-from-kerala
ಬಿಬಿಎಂಪಿ ಆದೇಶ

4. ಬೆಂಗಳೂರಿನಲ್ಲಿ (ಪಾಲಿಕೆ ವ್ಯಾಪ್ತಿ) ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳು, ಕೇರಳದಿಂದ ಆಗಮಿಸಿದ್ದಲ್ಲಿ ಅಥವಾ ಕಳೆದ 7 ದಿನಗಳಲ್ಲಿ ಕೇರಳಕ್ಕೆ ಭೇಟಿ ನೀಡಿದ್ದಲ್ಲಿ ಅಂತಹ ಉದ್ಯೋಗಿಗಳನ್ನು ಆಯಾ ಸಂಸ್ಥೆಯ ಆಡಳಿತ ಮಂಡಳಿಯವರು ಅಂಶ 3ರಲ್ಲಿರುವಂತೆ 7 ದಿನಗಳ ಕ್ವಾರಂಟೈನ್ ವ್ಯವಸ್ಥೆ ಕಡ್ಡಾಯವಾಗಿ ಮಾಡುವುದು ಮತ್ತು ಮಾಹಿತಿಯನ್ನು ಪಾಲಿಕೆಯ ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ ನೀಡುವುದು ಕಡ್ಡಾಯ.

5. ವಿದ್ಯಾರ್ಥಿಗಳು/ಉದ್ಯೋಗಿಗಳ 7 ದಿನಗಳ ಕಡ್ಡಾಯ ಸಾಂಸ್ಥಿಕ ದಿಗ್ಬಂಧನ (ಕ್ವಾರಂಟೈನ್) ಅನ್ನು ಆರೋಗ್ಯ ವೈದ್ಯಾಧಿಕಾರಿಗಳು ಕೋವಿಡ್ ಮಾರ್ಗಸೂಚಿಗಳ ಕಡ್ಡಾಯ ಅನುಸರಣೆಗಾಗಿ ಮೇಲ್ವಿಚಾರಣೆ ಮತ್ತು ನಿಗದಿತ ಸಮಯಕ್ಕೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.

ಇದನ್ನೂ ಓದಿ: ಜಗತ್ತಿನ ಭೂಪಟದಲ್ಲಿ ದೇಶವೊಂದು ಅಸ್ತಿತ್ವದಲ್ಲಿ ಇರುವುದಿಲ್ಲವೆಂದು ಮೊದಲೇ ಭವಿಷ್ಯ ನುಡಿದಿದ್ದೆ: ಕೋಡಿಮಠ ಶ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.