ಬೆಂಗಳೂರು : ಲಾಕ್ಡೌನ್ ಸ್ಥಿತಿಗತಿಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆದಿರುವ ವಲಯವಾರು ಉಸ್ತುವಾರಿಗಳ ಸಭೆಗೆ ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರೇ ಗೈರು ಹಾಜರಾಗಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ನಡೆಸುತ್ತಿರುವ ಸಭೆಗೆ ಕೇಂದ್ರ ಸಚಿವರು, ಉಸ್ತುವಾರಿ ಸಚಿವರು, ಸಂಸದರು ಆಗಮಿಸಿದ್ದರೂ, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹಾಗೂ ಆಯುಕ್ತ ಅನಿಲ್ ಕುಮಾರ್ ಗೈರಾಗಿದ್ದಾರೆ. ಸಿಎಂ ಸಭೆಗೆ ಹಾಜರಾಗುವ ಬದಲು ಬಿಬಿಎಂಪಿಯಲ್ಲಿ ನಡೆದ ಆ್ಯಂಟಿಜೆನ್ ಟೆಸ್ಟ್ಗೆ ಚಾಲನೆ ನೀಡಿ ಲಾಕ್ಡೌನ್ ವಿಸ್ತರಣೆ ಮಾಡಬೇಕು ಎನ್ನುವ ಹೇಳಿಕೆ ನೀಡಿದ್ದಾರೆ.
ಸಭೆಯಲ್ಲಿ ಸಿಎಂ ಮುಂದೆ ಅಭಿಪ್ರಾಯ ವ್ಯಕ್ತಪಡಿಸುವ ಎಲ್ಲ ಅವಕಾಶ ಇದ್ದರೂ ಗೈರು ಹಾಜರಾಗಿ, ಹೊರಗಡೆ ಲಾಕ್ಡೌನ್ ವಿಸ್ತರಣೆ ಮಾಡಬೇಕು ಎನ್ನುವ ಹೇಳಿಕೆ ನೀಡಿರುವುದು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.