ETV Bharat / state

ಪರವಾನಗಿ ಪಡೆಯದ ಹಿಂದವೀ ಮೀಟ್ ಮಾರ್ಟ್‌ಗೆ ಪಾಲಿಕೆಯಿಂದ ನೋಟಿಸ್ - BBMP issued notice to Hindavi notice

ಹಲಾಲ್ ಕಟ್ ವಿರುದ್ಧ ನಡೆದಿದ್ದ ಪ್ರಚಾರದಲ್ಲಿ ಹಿಂದವೀ ಮೀಟ್ ಮಾರ್ಟ್ ಸಕ್ರಿಯವಾಗಿತ್ತು. ಆದರೆ, ವ್ಯಾಪಾರ ನಡೆಸಲು ಹಿಂದವೀ ಮೀಟ್ ಮಾರ್ಟ್ ಪಾಲಿಕೆಯಿಂದ ಲೈಸೆನ್ಸ್ ಪಡೆದಿಲ್ಲ. ಹಾಗಾಗಿ, ಹಲವು ಅಂಶಗಳನ್ನು ಉಲ್ಲೇಖಿಸಿ ಏಪ್ರಿಲ್ 12ರಂದು ಬಿಬಿಎಂಪಿ ನೋಟಿಸ್​ ನೀಡಿದೆ.

ಬಿಬಿಎಂಪಿ
ಬಿಬಿಎಂಪಿ
author img

By

Published : Apr 19, 2022, 3:13 PM IST

ಬೆಂಗಳೂರು: ಪರವಾನಗಿ ಪಡೆಯದೆ ಕಾರ್ಯ ನಿರ್ವಹಿಸುತ್ತಿದ್ದ ನಗರದ ಜಟ್ಕಾ ಕಟ್ ಹಿಂದವೀ ಮೀಟ್ ಮಾರ್ಟ್ಸ್ ಮಾಲೀಕರಿಗೆ ತಕ್ಷಣ ಪರವಾನಗಿ ಪಡೆಯುವಂತೆ ಬಿಬಿಎಂಪಿ ಸೂಚಿಸಿ ನೋಟಿಸ್ ಜಾರಿಗೊಳಿಸಿದೆ. ಪರವಾನಗಿ ಪಡೆಯಲು ಒಂದು ವಾರದ ಗಡುವು ನೀಡಲಾಗಿದ್ದು, ಈ ಅವಧಿಯಲ್ಲಿ ಲೈಸನ್ಸ್ ಪಡೆಯದಿದ್ದರೆ ಮಾರ್ಟ್ ಮುಚ್ಚಿಸಲಾಗುವುದು ಎಂದು ನಗರದ ಉಲ್ಲಾಳದ ಹಿಂದವೀ ಮಾರ್ಟ್ ಮಾಲೀಕನಿಗೆ ರಾಜರಾಜೇಶ್ವರಿ ವಲಯ ಕಚೇರಿಯಿಂದ ಜಾರಿ ಮಾಡಿರುವುದಾಗಿ ನೋಟಿಸ್​ನಲ್ಲಿ ಎಚ್ಚರಿಸಿದೆ.

ಹಿಂದವೀ ಮೀಟ್ ಮಾರ್ಟ್​ಗೆ ಬಿಬಿಎಂಪಿ ನೋಟಿಸ್​

ಹಲಾಲ್ ಕಟ್ ವಿರುದ್ಧ ನಡೆದಿದ್ದ ಪ್ರಚಾರದಲ್ಲಿ ಹಿಂದವೀ ಮೀಟ್ ಮಾರ್ಟ್ ಸಕ್ರಿಯವಾಗಿತ್ತು. ಆದರೆ, ವ್ಯಾಪಾರ ನಡೆಸಲು ಹಿಂದವೀ ಮೀಟ್ ಮಾರ್ಟ್​ಗಳು ಪಾಲಿಕೆಯಿಂದ ಲೈಸನ್ಸ್ ಪಡೆದಿಲ್ಲ. ಹಾಗಾಗಿ, ಹಲವು ಅಂಶಗಳನ್ನು ಉಲ್ಲೇಖಿಸಿ ಏಪ್ರಿಲ್ 12ರಂದು ಬಿಬಿಎಂಪಿ ನೋಟಿಸ್​ ನೀಡಿರುವುದು ಬೆಳಕಿಗೆ ಬಂದಿದೆ.

ಮಟನ್ ಸ್ಟಾಲ್ ಪರವಾನಗಿ ಶುಲ್ಕ ಎಷ್ಟು?: ಕೇವಲ ಕೋಳಿ ಅಂಗಡಿಯಾದರೆ ಪರವಾನಗಿ ಶುಲ್ಕ 2,500 ಇರುತ್ತದೆ. ಕೋಳಿಯ ಜೊತೆಗೆ ಮಟನ್ ಮತ್ತು ಫಿಶ್ ಮಳಿಗೆ ನಡೆಸುವುದಿದ್ದರೆ 10,500 ಶುಲ್ಕ ಪಾವತಿಸಬೇಕು. ಪ್ರತಿವರ್ಷ ಶುಲ್ಕ ಪಾವತಿಸಬೇಕು. ಮೊದಲ ಬಾರಿಗೆ ಪರವಾನಿಗೆ ಪಡೆಯಲು ಇದೇ ಶುಲ್ಕ ಅನ್ವಯವಾಗುತ್ತದೆ ಎಂದು ಪಾಲಿಕೆ ಹೇಳಿದೆ.

ಹಿಂದವೀ ಮೀಟ್ ಮಾರ್ಟ್​ಗೆ ಬಿಬಿಎಂಪಿ ನೋಟಿಸ್​

ಇತ್ತೀಚೆಗೆ ತಲೆಎತ್ತಿರುವ ಜಟ್ಕಾ ಕಟ್‌ ಮಾಂಸದ ಅಂಗಡಿಗಳು ಪಾಲಿಕೆ ನೀಡುವ ಪರವಾನಗಿ ಪಡೆದುಕೊಂಡಿಲ್ಲ. ಮಾಂಸ ಮಾರಾಟ ಮಾಡುವ ಮಳಿಗೆಯಲ್ಲಿಯೇ ಅನಧಿಕೃತ ಪ್ರಾಣಿ ವಧೆ, ಮಾಂಸದ ಮಳಿಗೆಯಲ್ಲಿ ಗ್ಲಾಸ್ ಅಳವಡಿಸದೇ ಇರುವುದು, ಇನ್​ಸೆಕ್ಟ್ ಟ್ರ್ಯಾಪ್ ಅಳವಡಿಸಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಸಿಬ್ಬಂದಿಯ ವಾರ್ಷಿಕ ಆರೋಗ್ಯ ತಪಾಸಣೆಯ ಪತ್ರ ಒದಗಿಸಿಲ್ಲ. ಮಾಂಸ ಕತ್ತರಿಸುವ ಉಪಕರಣಗಳನ್ನು ಸಮರ್ಪಕ ರೀತಿಯಲ್ಲಿ ಶುದ್ಧಗೊಳಿಸುತ್ತಿಲ್ಲ. ಮಾಂಸ, ಕೋಳಿ ಮಾರಾಟ ಮಳಿಗೆಯಲ್ಲಿ ಗಾಳಿ, ಬೆಳಕು, ಶುದ್ಧ ನೀರಿನ ವ್ಯವಸ್ಥೆ ಇಲ್ಲ. ಮಾಂಸದ ಅಂಗಡಿಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ವ್ಯವಸ್ಥಿತವಾಗಿ ವಿಲೇವಾರಿ ಮಾಡುತ್ತಿಲ್ಲ ಎನ್ನುವ ದೂರುಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿಂದವೀ ಮೀಟ್ ಮಾರ್ಟ್ ಮಾಲೀಕ ಮುನೇಗೌಡ, 'ಮಹಾನಗರ ಪಾಲಿಕೆ ವ್ಯಾಪ್ತಿಯ ಉಲ್ಲಾಳ, ಜ್ಞಾನ ಭಾರತಿ, ಕಮ್ಮನಹಳ್ಳಿ, ಇಂದಿರಾನಗರ, ಹೊರಮಾವು, ನಾಗವಾರ, ಬನ್ನೇರುಘಟ್ಟ, ನೆಲಗದರನಹಳ್ಳಿಯಲ್ಲಿ ಹಿಂದವೀ ಮೀಟ್ ಮಾರ್ಟ್​ಗಳು ಕಾರ್ಯನಿರ್ವಹಿಸುತ್ತಿವೆ. ಬಿಬಿಎಂಪಿ ನಿಯಮಗಳಿಗೆ ಅನುಗುಣವಾಗಿ ನಾವು ಲೈಸನ್ಸ್ ಪಡೆದುಕೊಳ್ಳುತ್ತೇವೆ. ಎಲ್ಲ ನಿಯಮಗಳನ್ನೂ ಪಾಲಿಸುತ್ತೇವೆ' ಎಂದು ಹೇಳಿದರು.

ಇದನ್ನೂ ಓದಿ: ಸಂತೋಷ್​​ ಪಾಟೀಲ್​​ ಆತ್ಮಹತ್ಯೆ ಕೇಸ್​: ಗ್ರಾಮದಲ್ಲಿ ಆಗಿರುವ 108 ಕಾಮಗಾರಿಗಳ ಪರಿಶೀಲನೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.