ಬೆಂಗಳೂರು: ಚಾಮರಾಜಪೇಟೆ ಮೈದಾನದ ಕಿಚ್ಚು ಆರುವ ಮುನ್ನವೇ ಮತ್ತೊಂದು ವಿಚಾರ ಮುನ್ನಲೆಗೆ ಬಂದಿದೆ. ಒತ್ತುವರಿ ಆರೋಪದ ಹಿನ್ನೆಲೆ ವಿಜಯ ನಗರದ ಮಸೀದಿಯೊಂದನ್ನು ತೆರವುಗೊಳಿಸಲು ಬಿಬಿಎಂಪಿ ಮುಂದಾಗಿದೆ.
![ಪಾಲಿಕೆ ನೋಟಿಸ್](https://etvbharatimages.akamaized.net/etvbharat/prod-images/kn-bng-04-mosque-demolition-notice-to-vijayanagara-mosque-7210969_18072022183059_1807f_1658149259_290.jpg)
ಮಸ್ಜಿದ್ ಎ ಅಲ್ ಖುಬ ಎಂಬ ಮಸೀದಿಯನ್ನು ತೆರವುಗೊಳಿಸಲು ಬಿಬಿಎಂಪಿಯಿಂದ ನೋಟಿಸ್ ನೀಡಲಾಗಿದೆ. ಸಾರ್ವಜನಿಕರಿಗೆ ಮೀಸಲಿಟ್ಟ ಐದು ಅಡಿ ಪ್ಯಾಸೇಜ್ ಒತ್ತುವರಿ ಮಾಡಿಕೊಂಡ ಮಸೀದಿ ಕಟ್ಟಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.
![ಬಿಬಿಎಂಪಿಯಿಂದ ನೋಟಿಸ್ ನೀಡಿರುವುದು](https://etvbharatimages.akamaized.net/etvbharat/prod-images/kn-bng-04-mosque-demolition-notice-to-vijayanagara-mosque-7210969_18072022183059_1807f_1658149259_408.jpg)
ಈಗ ಒತ್ತುವರಿ ಮಾಡಿ ನಿರ್ಮಿಸಿರುವ ಭಾಗವನ್ನು ತೆರವು ಮಾಡಿ ಬಿಬಿಎಂಪಿ ವಶಕ್ಕೆ ಪಡೆಯಲು ಪ್ರಾದೇಶಿಕ ಆಯುಕ್ತರು ಆದೇಶ ಮಾಡಿದ್ದರು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
![ಪಾಲಿಕೆಯಿಂದ ಮಸೀದಿ ಡೆಮಾಲೆಷನ್ ಮಾಡಲು ನೋಟಿಸ್](https://etvbharatimages.akamaized.net/etvbharat/prod-images/kn-bng-04-mosque-demolition-notice-to-vijayanagara-mosque-7210969_18072022183059_1807f_1658149259_667.jpg)
ನಿವೇಶನ ಸಂಖ್ಯೆ 13 ಹಾಗೂ 15 ರಲ್ಲಿ ಮಸೀದಿ ನಿರ್ಮಾಣವಾಗಿದೆ. ನಿವೇಶನ ಸಂಖ್ಯೆ 14, 5.5 ಅಡಿ ಅಗಲ, 45 ಅಡಿ ಉದ್ದವಿತ್ತು. ಅದನ್ನು ಸಾರ್ವಜನಿಕರ ಓಡಾಟಕ್ಕೆ ಪ್ಯಾಸೇಜ್ ಗೆ ಬಳಸಬೇಕಿದ್ದು, ದುರ್ಬಳಕೆ ಆರೋಪ ಕೇಳಿ ಬಂದಿತ್ತು ಎಂದು ಮಾಹಿತಿ ನೀಡಿದ್ದಾರೆ.
![ಪಾಲಿಕೆಯಿಂದ ಮಸೀದಿ ಡೆಮಾಲೆಷನ್ ಮಾಡಲು ನೋಟಿಸ್](https://etvbharatimages.akamaized.net/etvbharat/prod-images/kn-bng-04-mosque-demolition-notice-to-vijayanagara-mosque-7210969_18072022183059_1807f_1658149259_955.jpg)
ಓದಿ: ಜಿಎಸ್ಟಿ ಏರಿಕೆ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ : ಹೆಚ್ಡಿಕೆ ವಾಗ್ದಾಳಿ