ETV Bharat / state

ಪಾಲಿಕೆಯ ಶೇ.15 ರಷ್ಟು ಆರೋಗ್ಯ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ..

author img

By

Published : Jan 27, 2022, 9:55 AM IST

ಬಿಬಿಎಂಪಿಯಲ್ಲಿ ಶೇ.15 ರಷ್ಟು ಆರೋಗ್ಯ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ಬೆಳಕಿಗೆ ಬಂದಿದೆ.

BBMP health workers, BBMP health workers tested positive for covid, Bengaluru corona report, ಬಿಬಿಎಂಪಿ ಆರೋಗ್ಯ ಸಿಬ್ಬಂದಿ, ಬಿಬಿಎಂಪಿ ಆರೋಗ್ಯ ಸಿಬ್ಬಂದಿಗೆ ಕೊರೊನಾ ದೃಢ, ಬೆಂಗಳೂರು ಕೊರೊನಾ ವರದಿ,
ಪಾಲಿಕೆಯ ಶೇ.15 ರಷ್ಟು ಅರೋಗ್ಯ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕು ನಿರ್ವಹಣೆ ಮಾಡುವ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಸೇರಿ ಶೇ.15 ರಷ್ಟು ಆರೋಗ್ಯ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢವಾಗಿದೆ. ಮೂರನೆಯ ಅಲೆಯ ಸೋಂಕು ಉತ್ತುಂಗದ ಹಂತದಲ್ಲಿದ್ದು, ನಿತ್ಯ 20 ಸಾವಿರಕ್ಕೂ ಅಧಿಕ ಕೇಸ್‌ಗಳು ವರದಿಯಾಗುತ್ತಿವೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಓದಿ: ಸೆಕ್ಸಿಯೆಸ್ಟ್ ಅಂಚೆ ಮಹಿಳೆ.. ಈಕೆಯ ಕತೆ ಎಲ್ಲರಿಗೂ ಸ್ಫೂರ್ತಿ!

ಕೋವಿಡ್ ಪರೀಕ್ಷೆ, ಸೋಂಕಿತರ ಅರೋಗ್ಯ ವಿಚಾರಣೆ, ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಪತ್ತೆ, ಕ್ವಾರಂಟೈನ್ ಮತ್ತು ಕಂಟೇನ್ಮೆಂಟ್​ ಮಾಡುವುದು, ಆರೈಕೆ ಕೇಂದ್ರದಲ್ಲಿ ಸೋಂಕಿತರ ಸೇವೆ ಹಾಗೂ ಔಷಧ ನೀಡಿಕೆಯಲ್ಲಿ ತೊಡಗಿರುವ ಅರೋಗ್ಯ ಸಿಬ್ಬಂದಿಗೆ ಸೋಂಕು ಬಾಧಿಸುತ್ತಿದೆ. 198 ವಾರ್ಡ್‌ಗಳಲ್ಲಿ 5 ಸಾವಿರಕ್ಕೂ ಅಧಿಕ ಅರೋಗ್ಯ ಸಿಬ್ಬಂದಿ ಕೋವಿಡ್ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದು, ಶೇ.15 ಸಿಬ್ಬಂದಿಗೆ (ಸುಮಾರು 700 ಮಂದಿ) ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಓದಿ: ಸತ್ಯ ನಾಡೆಲ್ಲ ವಿಶ್ವದ ನಂಬರ್​ ಒನ್​ ಸಿಇಒ.. ಟಾಟಾದ ಚಂದ್ರಶೇಖರನ್​​ಗೆ 25ನೇ ಸ್ಥಾನ.. ಮುಖೇಶ್​ ಅಂಬಾನಿ ಸ್ಥಾನ ಎಷ್ಟು ಗೊತ್ತಾ?

ಸಾಕಷ್ಟು ಸಿಬ್ಬಂದಿ ನಿಯೋಜನೆ: ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ವೇಳೆ ಸೋಂಕು ನಿಯಂತ್ರಣ ಮತ್ತು ನಿರ್ವಹಣೆ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಎದುರಾಗಿತ್ತು. ಹೀಗಾಗಿ, ವೈದ್ಯರು ಮತ್ತು ಇತರ ಸಹಾಯಕ ಸಿಬ್ಬಂದಿ ಸೇರಿ ಶೇ.10 ರಷ್ಟು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಆದ್ದರಿಂದ ಸೋಂಕು ನಿರ್ವಹಣೆ ಕಾರ್ಯದಲ್ಲಿ ಸಮಸ್ಯೆ ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.