ಬೆಂಗಳೂರು: ಕೊರೊನಾ ಭೀತಿಯ ನಡುವೆ ಆರೋಗ್ಯ ತಪಾಸಣೆಗೆ ಹೊರಗಡೆ ಹೋಗಲು ಸಾಧ್ಯವಾಗದವರಿಗೆ ಮನೆಯಿಂದಲೇ ಆರೋಗ್ಯ ಪರೀಕ್ಷಿಸಿಕೊಳ್ಳಲು ಪಾಲಿಕೆ ಉಚಿತ ಟೆಲಿ ಹೆಲ್ತ್ ಲೈನ್ (07447118949) ಆರಂಭಿಸಿದೆ.
![BBMP has start telehealth line for public](https://etvbharatimages.akamaized.net/etvbharat/prod-images/kn-bng-04-bbmp-telehealth-line-7202707_23042020153417_2304f_1587636257_404.jpg)
ಬೆಳಗ್ಗೆ ಎಂಟು ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೆ ಟೆಲಿ ಹೆಲ್ತ್ ಲೈನ್ಗೆ ಕರೆ ಮಾಡಿ ಆರೋಗ್ಯದ ಬಗ್ಗೆ ವಿಡಿಯೋ ಕಾಲ್ ಅಥವಾ ಕರೆ ಮೂಲಕ ಔಷಧದ ಬಗ್ಗೆ ತಿಳಿದುಕೊಳ್ಳಬಹುದು. ಜ್ವರ, ಕೆಮ್ಮು, ನೆಗಡಿ, ಉಸಿರಾಟದ ಸಮಸ್ಯೆ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳಿಗೆ ಸಂಪರ್ಕಿಸಬಹುದು. ವೈದ್ಯರು ಹೆಚ್ಚಿನ ಪರೀಕ್ಷೆಗೆ ಫೀವರ್ ಕ್ಲಿನಿಕ್ ಮೂಲಕ ಮುಂದಿನ ಚಿಕಿತ್ಸೆಗೆ ಸೂಚಿಸಲಿದ್ದಾರೆ.
![BBMP has start telehealth line for public](https://etvbharatimages.akamaized.net/etvbharat/prod-images/kn-bng-04-bbmp-telehealth-line-7202707_23042020153417_2304f_1587636257_679.jpg)
ಈ ಬಗ್ಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಆರೋಗ್ಯಾಧಿಕಾರಿಗಳ ಯೋಚನೆಯಂತೆ ಟೆಲಿ ಹೆಲ್ತ್ ಲೈನ್ ಆರಂಭಿಸಲಾಗಿದೆ. ಬ್ಲೂಂ ಬರ್ಗ್ ಫಿಲಾಂಥ್ರಪಿಸ್ ಕಂಪನಿಯ ಸಹಯೋದೊಂದಿಗೆ ಈ ಟೆಲಿ ಹೆಲ್ತ್ ಲೈನ್ ಆರಂಭಿಸಲಾಗಿದೆ. ಸಿಂಗಲ್ ಡಿಜಿಟ್ ಫೋನ್ ಮಾಡಿದ ಸಂದರ್ಭದಲ್ಲಿ ಪಾಲಿಕೆ ವತಿಯಿಂದ 42 ವೈದ್ಯರು ಆನ್ಲೈನ್ನಲ್ಲಿ ಸಿಗುತ್ತಾರೆ. ಇಂದಿನಿಂದಲೇ ಈ ಸೇವೆ ಆರಂಭವಾಗಲಿದೆ.
![BBMP has start telehealth line for public](https://etvbharatimages.akamaized.net/etvbharat/prod-images/kn-bng-04-bbmp-telehealth-line-7202707_23042020153417_2304f_1587636257_773.jpg)
ನಾಲ್ಕು ಶಿಫ್ಟ್ನಲ್ಲಿ ವೈದ್ಯರು ಸಿಗುತ್ತಾರೆ. ಬೆಳಗ್ಗೆ 8ರಿಂದ ಸಂಜೆ 8 ಗಂಟೆಯವರೆಗೆ ಈ ಸೇವೆ ಲಭ್ಯ ಇರುತ್ತದೆ. ಕಾಲ್ ಸೆಂಟರ್ಗೆ ಬೇಕಾದ ಅನುಕೂಲತೆಯನ್ನು ಬ್ಲೂಂ ಬರ್ಗ್ ಮಾಡಲಿದೆ. ಉಳಿದಂತೆ ಸಂಪರ್ಕಿಸಿದ ವ್ಯಕ್ತಿಗೆ ಬೇಕಾದ ಆರೋಗ್ಯದ ಸಲಹೆ, ಸೂಚನೆ, ಹತ್ತಿರದ ಆಸ್ಪತ್ರೆ ಬಗ್ಗೆ ವೈದ್ಯರು ಹೆಲ್ತ್ ಲೈನ್ ಮೂಲಕ ಮಾಹಿತಿ ನೀಡಲಿದ್ದಾರೆ.
![BBMP has start telehealth line for public](https://etvbharatimages.akamaized.net/etvbharat/prod-images/kn-bng-04-bbmp-telehealth-line-7202707_23042020153417_2304f_1587636257_801.jpg)
ಕೊರೊನಾ ವೈರಸ್ ಸಂಕಷ್ಟದ ಸಮಯದಲ್ಲಿ ಜನರು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಿದ್ದಾರೆ. ಇದರ ಪ್ರಯೋಗವನ್ನೂ ಈಗಾಗಲೇ ಮಾಡಲಾಗಿದೆ. ಮೊದಲು ರಿಜಿಸ್ಟರ್ ಮಾಡಲಾಗುತ್ತದೆ. ಬಳಿಕ ವೈದ್ಯರ ಸೂಚನೆಯಂತೆ ಫೋನ್ ಕಾಲ್ ಅಥವಾ ವಿಡಿಯೋ ಕಾಲ್ ಮೂಲಕವೂ ರೋಗಿಯ ಜೊತೆ ಮಾತನಾಡಬಹುದು. ಸಾರ್ವಜನಿಕರು ಈ ಹೆಲ್ತ್ ಲೈನ್ ಬಳಸಿಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಖಾಸಗಿ ವೈದ್ಯರು ಕೂಡಾ ಇದರ ಜೊತೆ ಕೈಜೋಡಿಸಬಹುದು. ಮುಂಬರುವ ದಿನಗಳಲ್ಲಿ ಇದನ್ನು ಅಭಿವೃದ್ಧಿಪಡಿಸುತ್ತಾ ಹೋಗಲಾಗುವುದು ಎಂದರು.
![BBMP has start telehealth line for public](https://etvbharatimages.akamaized.net/etvbharat/prod-images/kn-bng-04-bbmp-telehealth-line-7202707_23042020153417_2304f_1587636257_449.jpg)
ಆಯುಕ್ತರಾದ ಬಿ.ಹೆಚ್.ಅನಿಲ್ ಕುಮಾರ್, ಕೊರೊನಾ ಸೋಂಕು ಆರಂಭವಾದ ಬಳಿಕ ಸಾಕಷ್ಟು ಖಾಸಗಿ ಕ್ಲಿನಿಕ್ಗಳು ಸೇವೆ ನೀಡುವುದನ್ನು ನಿಲ್ಲಿಸಿಬಿಟ್ಟಿವೆ. ಎಲ್ಲಾ ಖಾಸಗಿ ಆಸ್ಪತ್ರೆಗಳು ಓಪನ್ ಇಟ್ಟು ಕೊರೊನಾ ಹೊರತುಪಡಿಸಿ ಡಯಾಬಿಟಿಸ್, ಹೃದಯ, ಕಿಡ್ನಿ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿತ್ತು. ಆದ್ರೆ ಅನೇಕ ಕಡೆ ಸಾರ್ವಜನಿಕರು ಫೀವರ್ ಕ್ಲಿನಿಕ್ಗೆ ಹೋಗಲು ಹಿಂಜರಿಯುತ್ತಿದ್ದಾರೆ.
ವೈದ್ಯರೂ ನೇರವಾಗಿ ರೋಗಿಗಳನ್ನು ನೋಡಲು ಭಯ ಪಡುತ್ತಿದ್ದಾರೆ. ಈ ಹಿನ್ನೆಲೆ ಯಾರೂ ಯಾರನ್ನೂ ಸಂಪರ್ಕಿಸದೇ ಕೇವಲ ಫೋನ್ ಮೂಲಕ ಮಾತಾಡಿ, ರೋಗದ ಲಕ್ಷಣಗಳನ್ನು ತಿಳಿಸಿ ಅದಕ್ಕೆ ಸೂಕ್ತ ಔಷಧ ಪಡೆಯಬಹುದು. ಹೋಂ ಡೆಲಿವರಿಯಲ್ಲಿ ಔಷಧ ಹೇಗೆ ನೀಡಲಾಗುತ್ತದೆಯೋ ಅದೇ ರೀತಿ ಟೆಲಿ ಹೆಲ್ತ್ ಲೈನ್ ಸೇವೆಯನ್ನು ಮನೆಯಲ್ಲೇ ಕುಳಿತು ಎಲ್ಲರೂ ಪಡೆಯಬಹುದು ಎಂದರು. ಅಲ್ಲದೆ ವಾಟ್ಸ್ಆ್ಯಪ್ ಮೂಲಕ ವೈದ್ಯರಿಂದ ಔಷಧದ ವಿವರ ಪಡೆಯಬಹುದಾಗಿದೆ ಎಂದರು.