ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿನ ಅನಧಿಕೃತ ಟಿವಿ, ಒಎಫ್ಸಿ ಕೇಬಲ್‌ಗಳನ್ನು ಒಂದು ತಿಂಗಳೊಳಗೆ ತೆರವು ಮಾಡದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಎಚ್ಚರಿಕೆ ನೀಡಿದ್ದಾರೆ.
ಟಿವಿ ಕೇಬಲ್ ಆಪರೇಟರ್‌ಗಳು, ಒಎಫ್ಸಿ ಕೇಬಲ್ ಸೇವಾ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಸಂಸ್ಥೆಗಳು ಪಾಲಿಕೆ ವ್ಯಾಪ್ತಿಯ ಪಾದಚಾರಿ ಮಾರ್ಗ, ರಸ್ತೆ ಬದಿ ಮರಗಳು, ವಿದ್ಯುತ್ ಕಂಬಗಳ ಮೇಲೆ ಹಾಗೂ ಇತರೆಡೆ ಅನಧಿಕೃತವಾಗಿ ನೇತುಹಾಕಿರುವ ಕೇಬಲ್‌ಗಳನ್ನು ತೆರವುಗೊಳಿಸುವಂತೆ ಘನ ಉಚ್ಛ ನ್ಯಾಯಾಲಯವು ಆದೇಶದಲ್ಲಿ ನಿರ್ದೇಶನ ನೀಡಿದೆ ಎಂದಿದ್ದಾರೆ.
ಒಂದು ತಿಂಗಳ ಅವಧಿಯೊಳಗೆ ಎಲ್ಲಾ ಅನಧಿಕೃತ ಟಿವಿ ಕೇಬಲ್, ಒಎಫ್ಸಿ ಕೇಬಲ್ ಹಾಗೂ ಇತರೆ ಕೇಬಲ್‌ಗಳನ್ನು ತೆರವುಗೊಳಿಸಬೇಕೆಂದು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ. ವಿಫಲವಾದಲ್ಲಿ ಅನಧಿಕೃತ ಕೇಬಲ್‌ಗಳನ್ನು ಯಾವುದೇ ಮುನ್ಸೂಚನೆ ನೀಡದೆ ತೆರವುಗೊಳಿಸಲು ಕ್ರಮವಹಿಸಲಾಗುವುದು. ಅಂತಹ ಅನಧಿಕೃತ ಮಾಲೀಕರು ಅಥವಾ ಸಂಘ ಸಂಸ್ಥೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ಎಚ್ಚರಿಕೆ ನೀಡಿದ್ದಾರೆ.