ETV Bharat / state

ಸೋಮಣ್ಣ, ಅಶೋಕ್ ನಡುವೆ ಸೀನಿಯಾರಿಟಿ ಕಾಂಪ್ಲೆಕ್ಸ್: ಚುನಾವಣೆ ಸಿದ್ದತಾ ಸಭೆಯಲ್ಲಿ ಹಿರಿಯರ ಜಟಾಪಟಿ

author img

By

Published : Aug 24, 2022, 7:30 AM IST

ಬಿಬಿಎಂಪಿ‌ ಚುನಾವಣೆ ಸಿದ್ಧತೆ ಕುರಿತು ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಹಾನಗರದ ಸಚಿವರು, ಶಾಸಕರು, ಪ್ರಮುಖ ಮುಖಂಡರ ಜೊತೆ ಸಭೆ ನಡೆಸಲಾಯಿತು.

BBMP election preparation meeting
ಬಿಬಿಎಂಪಿ ಚುನಾವಣಾ ಸಿದ್ದತಾ ಸಭೆ

ಬೆಂಗಳೂರು: ಬಿಬಿಎಂಪಿ ಚುನಾವಣಾ ಸಿದ್ದತಾ ಸಭೆಯಲ್ಲಿ ಬೆಂಗಳೂರು ಸಚಿವರಲ್ಲಿ ನಾನು ಹಿರಿಯ ನಾನು ಹಿರಿಯ ಎನ್ನುವ ಜಟಾಪಟಿ ನಡೆದಿದೆ. ಸಚಿವ ಸೋಮಣ್ಣ ಮತ್ತು ಅಶೋಕ್ ನಡುವೆ ಸೀನಿಯಾರಿಟಿ ಕಾಂಪ್ಲೆಕ್ಸ್ ತಿಕ್ಕಾಟ ಪಕ್ಷದ ಮುಖಂಡರ ಮುಂದೆಯೇ ಅನಾವರಣಗೊಂಡಿದೆ.

ಬಿಬಿಎಂಪಿ‌ ಚುನಾವಣೆ ಸಿದ್ಧತೆ ಕುರಿತು ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಹಾನಗರದ ಸಚಿವರು, ಶಾಸಕರು, ಪ್ರಮುಖ ಮುಖಂಡರ ಜೊತೆ ಸಭೆ ನಡೆಸಲಾಯಿತು. ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಸದರಾದ ಡಿ.ವಿ ಸದಾನಂದಗೌಡ, ತೇಜಸ್ವಿ ಸೂರ್ಯ, ಸಚಿವರಾದ ಆರ್. ಅಶೋಕ್, ಬೈರತಿ ಬಸವರಾಜ್​​, ಗೋಪಾಲಯ್ಯ, ವಿ.ಸೋಮಣ್ಣ, ಶಾಸಕರಾದ ಸತೀಶ್ ರೆಡ್ಡಿ, ಉದಯ್ ಗರುಡಾಚಾರ್ ಮತ್ತು ಎಂ.ಕೃಷ್ಣಪ್ಪ ಭಾಗಿಯಾಗಿದ್ದರು.

ಈ ವೇಳೆ, ಬೆಂಗಳೂರು ಉಸ್ತುವಾರಿ ವಿಷಯದ ಕುರಿತು ಪ್ರಸ್ತಾಪವಾಯಿತು. ಬಿಬಿಎಂಪಿ ಚುನಾವಣೆ ಸಮಯದಲ್ಲಿ ಉಸ್ತುವಾರಿ ಸಚಿವರು ತಿಂಗಳುಗಟ್ಟಲೆ ನಗರದಲ್ಲೇ ಇದ್ದು ಪ್ರಚಾರ ಕಾರ್ಯ ನೋಡಿಕೊಳ್ಳಬೇಕು. ಸದ್ಯ ಮುಖ್ಯಮಂತ್ರಿಗಳು ಬೆಂಗಳೂರು ನಗರದ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ರಾಜ್ಯ ಪ್ರವಾಸ ಮಾಡಬೇಕಾಗಲಿದೆ. ಹಾಗಾಗಿ ಚುನಾವಣೆವರೆಗಾದರೂ ಪೂರ್ಣ ಪ್ರಮಾಣದ ಸಮಯ ನೀಡುವ ಉಸ್ತುವಾರಿ ಸಚಿವರ ನೇಮಕ ಮಾಡುವಂತೆ ಬೆಂಗಳೂರು ಶಾಸಕರು ಸಭೆಯಲ್ಲಿ ಪ್ರಸ್ತಾಪ ಮಾಡಿದರು.

ಸಿಎಂ ಬದಲು ಬೇರೊಬ್ಬರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಬೇಕು ಎನ್ನುವ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಹಿರಿತನದ ಆಧಾರದ ವಿಷಯ ಚರ್ಚೆಗೆ ಬಂದಿತು. ವಸತಿ ಸಚಿವ ವಿ.ಸೋಮಣ್ಣ ಇದು ನನ್ನ ಕಡೆಯ ಚುನಾವಣೆ ಎನ್ನುವ ಉಲ್ಲೇಖದೊಂದಿಗೆ ತಮ್ಮ ಹಿರಿತನ ವ್ಯಕ್ತಪಡಿಸಿದರು. ಸಚಿವನಾಗಿ ನಾನು ಹಿರಿಯನಿದ್ದೇನೆ. ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿಯೂ ಗೆಲ್ಲಬಲ್ಲೆ ಎಂದು ಕಂದಾಯ ಸಚಿವ ಅಶೋಕ್​​ಗೆ ಟಾಂಗ್ ನೀಡಿದರು ಎನ್ನಲಾಗಿದೆ.

ಇದಕ್ಕೆ ತೀಕ್ಷ್ಣವಾಗಿ ಸಭೆಯಲ್ಲೇ ಪ್ರತಿಕ್ರಿಯೆ ನೀಡಿದ ಅಶೋಕ್, ಬಿಜೆಪಿಯಲ್ಲಿ ನಾನು ನಿಮಗಿಂತ ಸೀನಿಯರ್ ಎನ್ನುವ ಪ್ರಸ್ತಾಪದೊಂದಿಗೆ ಬೆಂಗಳೂರು ಉಸ್ತುವಾರಿಯ ಅಪೇಕ್ಷೆ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ. ಉಭಯ ನಾಯಕರ ನಡುವೆ ಮಾತಿನ ಜಟಾಪಟಿ ನಡೆಯುತ್ತಿದ್ದಂತೆ ಹಿರಿಯ ನಾಯಕರು ವಿಷಯವನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡೋಣ. ಅವರ ಬಳಿ ಈ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ತಿಳಿಸೋಣ ಎನ್ನುವ ನಿರ್ಧಾರ ಪ್ರಕಟಿಸುವ ಮೂಲಕ ಸೀನಿಯಾರಿಟಿ ಕಾಂಪ್ಲೆಕ್ಸ್ ವಿಷಯಕ್ಕೆ ತೆರೆ ಎಳೆಯಲಾಯಿತು.

ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ವಿಚಾರಣೆ ಆಗಸ್ಟ್ 29ಕ್ಕೆ ಮುಂದೂಡಿದ ಹೈಕೋರ್ಟ್.. ಕಾಂಗ್ರೆಸ್ ನಾಯಕ ನಾಗರಾಜು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.