ETV Bharat / state

ಬಿಬಿಎಂಪಿ ಚುನಾವಣೆ-2022 : ಕರಡು ಮತದಾರರ ಪಟ್ಟಿ ಪ್ರಕಟ - ಈಟಿವಿ ಭಾರತ ಕನ್ನಡ

ಬಿಬಿಎಂಪಿ ಚುನಾವಣೆ 2022 ಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಬಿಬಿಎಂಪಿ ಕರಡು ಮತದಾರರ ಪಟ್ಟಿ ಪ್ರಕಟ ಮಾಡಲಾಗಿದೆ.

ಬಿಬಿಎಂಪಿ ಚುನಾವಣೆ 2022
ಬಿಬಿಎಂಪಿ ಚುನಾವಣೆ 2022
author img

By

Published : Aug 25, 2022, 3:55 PM IST

Updated : Aug 25, 2022, 4:45 PM IST

ಬೆಂಗಳೂರು: ಬಿಬಿಎಂಪಿ ಚುನಾವಣೆ-2022 ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. 198 ವಾರ್ಡ್​ಗಳಿಂದ 243 ವಾರ್ಡ್​ಗೆ ಬಿಬಿಎಂಪಿ ವ್ಯಾಪ್ತಿ ಹೆಚ್ಚಳವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜು ಮಾಹಿತಿ ನೀಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ-2022ರ ಸಂಬಂಧ 243 ವಾರ್ಡ್​ವಾರು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸುವ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜು ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧ್ಯಕ್ಷತೆಯಲ್ಲಿ ಜಂಟಿ ಮಾಧ್ಯಮಗೋಷ್ಟಿ ನಡೆಯಿತು. ಈ ವೇಳೆ ಈ ಬಗ್ಗೆ ಮಾಹಿತಿ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 79,08,394 ಮತದಾರರು, ಅದರಲ್ಲಿ 41,09,496 ಪುರುಷರು ಹಾಗೂ 37,97,497 ಮಹಿಳೆಯರು, 1401 ತೃತೀಯ ಲಿಂಗಿಗಳು ಇದ್ದಾರೆ. ಮತದಾರರ ಕರಡು ಪ್ರತಿ ಇಂದು‌ ಸಂಜೆ www.bbmp.gov.in ನಲ್ಲಿ ಪ್ರಕಟವಾಗಲಿದೆ. ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 2ರ ವರೆಗೆ ಅವಕಾಶ ಇರಲಿದೆ. ಒಂದು ವಾರ್ಡ್‌ನಲ್ಲಿ ಕನಿಷ್ಠ 18,604 ಗರಿಷ್ಠ 51,653 ಮತದಾರರಿದ್ದಾರೆ ಎಂದು ವಿವರಿಸಿದರು.

ಕರಡು ಮತದಾರರ ಪಟ್ಟಿ ಪ್ರಕಟ

ಬೆಂಗಳೂರು ವ್ಯಾಪ್ತಿಯ ಮತದಾರರು ತಮ್ಮ ಹೆಸರು ಬಿಟ್ಟಿದ್ದರೆ ಕರಡು ಪ್ರತಿಯಲ್ಲಿ ಬದಲಾವಣೆಗಳು ಇದ್ದರೆ ಮಾಹಿತಿ ನೀಡಬೇಕು. ಬೆಂಗಳೂರಿನ ಚುನಾವಣೆಗಳಲ್ಲಿ 2010 ರಲ್ಲಿ 44% ಮತದಾನ, 2015 ರಲ್ಲಿ 49% ರಷ್ಟು ಮತದಾನ ಆಗಿತ್ತು. 2017 ರಲ್ಲಿ ಮುಂಬೈನಲ್ಲಿ 55 % ಮತದಾನ ಆಗಿತ್ತು. ಈ ಬಾರಿ ಬೆಂಗಳೂರಿನಲ್ಲಿ ಹೆಚ್ಚಿನ ಮತದಾನ ಆಗಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜು ವಿವರಿಸಿದರು.

ಎಲ್ಲ ಚುನಾವಣೆಗಳಲ್ಲೂ ಮತದಾರರು ಮುಂದೆ ಮತದಾನ ಮಾಡಬೇಕಿದೆ. ಮತದಾರರಲ್ಲಿ ನಿವೇದನೆ ಮಾಡುತ್ತೇನೆ, ಎಲ್ಲರೂ ಅತಿ ಹೆಚ್ಚು ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿದೆ. ಜನಪ್ರತಿನಿಧಿಗಳ ಆಯ್ಕೆಯಲ್ಲಿ ಅತಿ ಹೆಚ್ಚು ಗಮನವನ್ನು ಮತದಾರರು ಕೊಡಬೇಕು. ಮತದಾನ ನಡೆಯುವಾಗ ಹೆಸರು ಬಿಟ್ಟಿರುವ ಬಗ್ಗೆ ಚರ್ಚೆ ಆಗಬಾರದು. ಈಗಲೇ ನೇರವಾಗಿ ಹೆಸರು ಬಿಟ್ಟಿದ್ದನ್ನು ಗುರುತಿಸಿ ಮಾಹಿತಿ ಕೊಡಿ ಎಂದು ತಿಳಿಸಿದರು.

ಇದನ್ನೂ ಓದಿ: ಡಿಜಿಟಲ್ ಆರ್ಥಿಕತೆಗೆ ರಾಜ್ಯದಿಂದ 300 ಬಿಲಿಯನ್ ಡಾಲರ್ ಕೊಡುಗೆ ಗುರಿ: ಸಚಿವ ಅಶ್ವತ್ಥನಾರಾಯಣ

Last Updated : Aug 25, 2022, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.