ETV Bharat / state

ಬೆಂಗಳೂರಿನ ನಾಗರಿಕರಿಗೆ ಬಿಬಿಎಂಪಿ ಶಾಕ್... ಭೂಸಾರಿಗೆ ಸೆಸ್ ಹೆಚ್ಚುವರಿ ಹೊರೆ - ರಸ್ತೆ ತೆರಿಗೆ ಮೂಲಕ ಶೇಕಡಾ ಎರಡರಷ್ಟು ಹೆಚ್ಚುವರಿ ಸೆಸ್

ಬೆಂಗಳೂರು ನಾಗರಿಕರಿಗೆ ಬಿಬಿಎಂಪಿ ತೆರಿಗೆ ಬರೆ ಹಾಕಲು ಮುಂದಾಗಿದೆ. ಸಾರ್ವಜನಿಕರು ಭೂಸಾರಿಗೆ ಸೆಸ್​​ ಮೂಲಕ ಶೇಕಡಾ ಎರಡರಷ್ಟು ಹೆಚ್ಚುವರಿ ತೆರಿಗೆ ಕಟ್ಟುವ ಬಗ್ಗೆ ಬಿಬಿಎಂಪಿ ಇಂದಿನ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ.

ಹೆಚ್ಚುವರಿ ಹೊರೆ
ಹೆಚ್ಚುವರಿ ಹೊರೆ
author img

By

Published : Jan 28, 2020, 5:24 PM IST

ಬೆಂಗಳೂರು: ಆಸ್ತಿ ತೆರಿಗೆ ಜೊತೆಯಲ್ಲೇ, ಈಗಾಗಲೇ ಘನ ತ್ಯಾಜ್ಯ, ಭಿಕ್ಷುಕರ ಸೆಸ್, ಗ್ರಂಥಾಲಯ ಸೆಸ್​ಗಳು ಇವೆ. ಇವುಗಳ ಸಾಲಿಗೆ ಭೂ ಸಾರಿಗೆ ಸೆಸ್​​ ಅನ್ನು ಸೇರಿಸಲು ಪಾಲಿಕೆ ಇಂದಿನ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ.

ಈ ಹಿಂದೆಯೇ ಸಾಕಷ್ಟು ವಿವಾದ ಸೃಷ್ಟಿಸಿದ್ದ ಭೂ ಸಾರಿಗೆ ಸೆಸ್ ಅನ್ನು ಕಾಂಗ್ರೆಸ್ ಅವಧಿಯಲ್ಲಿ ಜಾರಿಗೆ ತರದಂತೆ ಬಿಜೆಪಿಯೇ ವಿರೋಧಿಸಿತ್ತು. ರಸ್ತೆಯಲ್ಲಿ ಓಡಾಡುವ ವಾಹನಗಳಿಂದ ರಸ್ತೆಗಳು ಬೇಗ ಹಾಳಾಗುತ್ತಿವೆ. ಹೀಗಾಗಿ ರಸ್ತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಿಬಿಎಂಪಿ ಈ ಸೆಸ್ ಅಳವಡಿಸಲು ಮುಂದಾಗಿದೆ. ಬೆಂಗಳೂರಿನ ನಾಗರಿಕರಿಂದ ವಾರ್ಷಿಕ 150 ಕೋಟಿ ರೂ. ಆದಾಯದ ನಿರೀಕ್ಷೆ ಇದೆ. ಹೆಚ್ಚುವರಿ ಕರವನ್ನು ಸರ್ಕಾರಕ್ಕೆ ಅಥವಾ ಸಾರಿಗೆ ಇಲಾಖೆಗೆ ನೀಡದೆ ಮತ್ತೆ ರಸ್ತೆ ಅಭಿವೃದ್ಧಿಗೆ ಬಳಸಲು ಬಿಬಿಎಂಪಿ ನಿರ್ಧರಿಸಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.

ಭೂಸಾರಿಗೆ ಹೆಚ್ಚುವರಿ ಸೆಸ್ ಕುರಿತು ಸ್ಪಷ್ಟನೆ ನೀಡಿದ ಮೇಯರ್​​

ವಿರೋಧ ಪಕ್ಷದ ಖಂಡನೆ:

ಅಂದು ಈ ನಿರ್ಣಯವನ್ನು ವಿರೋಧಿಸಿದ್ದ ಪದ್ಮಾನಾಭ ರೆಡ್ಡಿಯವರೇ ಈಗ ಅನುಮೋದನೆ ನೀಡಿದ್ದಾರೆ. 2013-14 ರಲ್ಲಿ ಅವರದ್ದೇ ಸರ್ಕಾರ ಇದ್ದಾಗ, ಬಿಜೆಪಿಯವರು ಬೇಡ ಅಂದಿದ್ರು. ಕಾಂಗ್ರೆಸ್ ಅವಧಿಯಲ್ಲೂ ನಿರ್ಣಯ ತೆಗೆದುಕೊಂಡಿರಲಿಲ್ಲ. ಜನರಿಗೆ ಹೊರೆ ಆಗೋದು ಖಚಿತ. ಜನರಿಗೆ ಟೋಪಿ ಹಾಕಿ ದರ್ಬಾರ್ ಮಾಡಲು ಬಿಬಿಎಂಪಿ ಆಡಳಿತ ಮುಂದಾಗಿದೆ. ಜನರಿಗೆ ಹೊರೆ ಹಾಕಲು ಕಾಂಗ್ರೆಸ್ ಬಿಡುವುದಿಲ್ಲ. ಭೂಸಾರಿಗೆ ಸೆಸ್ ವಿರೋಧಿಸಿ ಕಾಂಗ್ರೆಸ್ ನಾಳೆ ಪ್ರತಿಭಟನೆ ನಡೆಸಲಿದೆ. ಕೌನ್ಸಿಲ್ ಸಭೆ ಆರಂಭಕ್ಕೂ ಮೊದಲೇ ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ವಿಪಕ್ಷ ನಾಯಕ ವಾಜಿದ್ ತಿಳಿಸಿದರು.

Intro:ಬೆಂಗಳೂರಿನ ನಾಗರೀಕರಿಗೆ ಬಿಬಿಎಂಪಿ ಶಾಕ್- ಭೂಸಾರಿಗೆ ಸೆಸ್ ಹೆಚ್ಚುವರಿ ಹೊರೆ

ಬೆಂಗಳೂರು: ಬೆಂಗಳೂರು ನಾಗರಿಕರಿಗೆ ಬಿಬಿಎಂಪಿ ತೆರಿಗೆ ಮೇಲೆ ಮತ್ತೆ ತೆರಿಗೆ ಬರೆ ಹಾಕಿದೆ. ಸಾರ್ವಜನಿಕರ ಜೇಬಿಗೆ ಪಾಲಿಕೆ ಕತ್ತರಿ ಹಾಕಿದ್ದು, ಶೇಕಡಾ ಎರಡರಷ್ಟು ಹೆಚ್ಚುವರಿ ಸೆಸ್ ಕಟ್ಟುವ ಬಗ್ಗೆ ಬಿಬಿಎಂಪಿ ಇಂದಿನ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ.
ಆಸ್ತಿ ತೆರಿಗೆ ಜೊತೆಯಲ್ಲೇ, ಈಗಾಗಲೇ ಘನತ್ಯಾಜ್ಯ, ಬಿಕ್ಷುಕರ ಸೆಸ್, ಗ್ರಂಥಾಲಯ ಸೆಸ್ ಗಳು ಇವೆ. ಇವುಗಳ ಸಾಲಿಗೆ ಭೂಸಾರಿಗೆ ಸೆಸ್ ಸೇರ್ಪಡೆಯಾಗಿದೆ.
ಈ ಹಿಂದೆಯೇ ಸಾಕಷ್ಟು ವಿವಾದ ಸೃಷ್ಟಿಸಿದ್ದ, ಭೂಸಾರಿಗೆ ಸೆಸ್ ಕಾಂಗ್ರೆಸ್ ಅವಧಿಯಲ್ಲಿ ಜಾರಿಗೆ ತರದಂತೆ ಬಿಜೆಪಿಯೇ ವಿರೋಧಿಸಿತ್ತು.
ರಸ್ತೆಯಲ್ಲಿ ಓಡಾಡುವ ವಾಹನಗಳಿಂದ ರಸ್ತೆಗಳು ಬೇಗ ಹಾಳಾಗುತ್ತಿವೆ. ಹೀಗಾಗಿ ರಸ್ತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಿಬಿಎಂಪಿ ಈ ಸೆಸ್ ಅಳವಡಿಸಲು ಮುಂದಾಗಿದೆ.
ಬೆಂಗಳೂರಿನ ನಾಗರಿಕರಿಂದ ವಾರ್ಷಿಕ 150 ಕೋಟಿ ಹೆಚ್ಚಿನ ಆದಾಯದ ನಿರೀಕ್ಷೆ ಇದೆ. ಹೆಚ್ಚುವರಿ ಭೂಸಾರಿಗೆ ಕರವನ್ನು ಸರ್ಕಾರಕ್ಕೆ ಅಥವಾ ಸಾರಿಗೆ ಇಲಾಖೆಗೆ ನೀಡದೆ ಅದೇ ಹಣವನ್ನು ಮತ್ತೆ ರಸ್ತೆ ಅಭಿವೃದ್ಧಿಗೆ ಬಿಬಿಎಂಪಿಯೇ ಬಳಸಲು ನಿರ್ಧಾರಿಸಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.
ಇನ್ನೊಂದೆಡೆ ಭೂಸಾರಿಗೆ ಸೆಸ್ ಅನ್ನು ವಿಪಕ್ಷ ತೀವ್ರವಾಗಿ ಖಂಡಿಸಿದೆ. ಪದ್ಮಾನಾಭ ರೆಡ್ಡಿ ವಿರೋಧಿಸಿದ್ದವರೇ ಈಗ ಅನುಮೋದನೆ ನೀಡಿದ್ದಾರೆ. 2013-14 ರಲ್ಲಿ ಅವರದ್ದೇ ಸರ್ಕಾರ ಇದ್ದಾಗ, ಬಿಜೆಪಿಯವರು ಬೇಡ ಅಂದಿದ್ರು..
ಕಾಂಗ್ರೆಸ್ ಅವಧಿಯಲ್ಲೂ ನಿರ್ಣಯ ಮಾಡಿಲ್ಲ. ಜನರಿಗೆ ಹೊರೆ ಆಗೋದು ಖಂಡಿತ. ಜನರಿಗೆ ಟೋಪಿ ಹಾಕಿ ದರ್ಬಾರ್ ಮಾಡಲು ಬಿಬಿಎಂಪಿ ಆಡಳಿತ ಮುಂದಾಗಿದೆ. ಜನರಿಗೆ ಹೊರೆಹಾಕಲು ಕಾಂಗ್ರೆಸ್ ಬಿಡುವುದಿಲ್ಲ. ಭೂಸಾರಿಗೆ ಸೆಸ್ ವಿರೋಧಿಸಿ ಕಾಂಗ್ರೆಸ್ ನಾಳೆ ಪ್ರತಿಭಟಮೆ ನಡೆಸಲಿದೆ. ಕೌನ್ಸಿಲ್ ಸಭೆ ಆರಂಭಕ್ಕೂ ಮೊದಲೇ ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ವಿಪಕ್ಷ ನಾಯಕ ವಾಜಿದ್ ತಿಳಿಸಿದರು.

ಸೌಮ್ಯಶ್ರೀ
Kn_bng_01_bbmp_cess_7202707

Body:
.Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.