ಬೆಂಗಳೂರು: ಕನ್ನಡಪರ ಒಕ್ಕೂಟಗಳು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮರಾಠ ನಿಗಮ ರಚನೆಯ ವಿರುದ್ಧ ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ಜನಜೀವನ, ವಾಹನ ಸಂಚಾರ ಸ್ವಲ್ಪ ಮಟ್ಟಿಗೆ ಅಸ್ತವ್ಯಸ್ತಗೊಳ್ಳುವ ಸಂಭವವಿದೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಈ ಬಗ್ಗೆ ಮಾತನಾಡಿದ್ದು, ಎಂದಿನಂತೆ ಪಾಲಿಕೆಯ ಎಲ್ಲಾ ಕಚೇರಿಗಳು ತೆರೆದಿರುತ್ತವೆ. ಎಲ್ಲಾ ಸಿಬ್ಬಂದಿ ಹಾಜರಿರಬೇಕು. ಯಾವುದೇ ರೀತಿಯ ವಿನಾಯಿತಿ ಸಿಬ್ಬಂದಿಗೆ ಇರುವುದಿಲ್ಲ ಎಂದು ಹೇಳಿದ್ದಾರೆ.
ಬಿಬಿಎಂಪಿಯ ಮಾರುಕಟ್ಟೆಗಳು ಎಂದಿನಂತೆ ತೆರೆದಿರುತ್ತವೆ. ಯಾರಾದರೂ ಬಲವಂತವಾಗಿ ಮುಚ್ಚಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಸ್ವಂತ ವಾಹನ ವ್ಯವಸ್ಥೆ ಮಾಡಿಕೊಂಡು ಸಿಬ್ಬಂದಿ ಬರಬೇಕು. ಅಧಿಕಾರಿಗಳು, ಸಿಬ್ಬಂದಿ ಸಾರಿಗೆ ವ್ಯವಸ್ಥೆ ಇದ್ದರೆ ಅದನ್ನು ಬಳಸಿಕೊಂಡು ಬರಬೇಕೆಂದು ಹೇಳಿದ್ದಾರೆ.