ಬೆಂಗಳೂರು: ನಗರದಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾದ ಕಾರಣ ಇದೀಗ ಪಾಲಿಕೆ ಹೆಚ್ಚು ಆ್ಯಕ್ಟಿವ್ ಆಗಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಕ್ರಮ ಜರುಗಿಸುತ್ತಿದ್ದು, ಪ್ರಮುಖವಾಗಿ ಹೈ ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇತ್ತ ಅಲ್ಲಿಂದ ಬರುವವರ ಹಾಗೂ ರೋಗದ ತೀವ್ರತೆ ಹೆಚ್ಚಿದ್ದರೆ ಅಂತಹ ಜನರ ಸ್ಯಾಂಪಲ್ಸ್ ಕಲೆಕ್ಟ್ ಮಾಡಿ, ಜೀನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸಲಾಗುತ್ತಿದೆ.
ಈಗಾಗಲೇ ಒಮಿಕ್ರಾನ್ ಸೋಂಕಿತನ ಸಂಪರ್ಕದಲ್ಲಿದ್ದವರ ಜೀನೋಮ್ ಸೀಕ್ವೆನ್ಸಿಂಗ್ ರಿಪೋರ್ಟ್ ಬರಬೇಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿರುವ ಲ್ಯಾಬ್ಗಳಲ್ಲಿ ಮಾತ್ರ ಜೀನೋಮ್ ಸೀಕ್ವೆನ್ಸಿಂಗ್ ಮಾಡಲಾಗುತ್ತಿದೆ. ಯಾರು ಹೈ ರಿಸ್ಕ್ ಏರಿಯಾದಿಂದ ಬಂದಿರುತ್ತಾರೋ ಅವರು ಪಾಸಿಟಿವ್ ಆದರೆ, ಅಥವಾ ವೈರಸ್ ಲೋಡ್ ಹೆಚ್ಚಿದರೆ ಅಂತಹವರ ಸ್ಯಾಂಪಲ್ ಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಕಳಿಸುತ್ತೇವೆ.
ವರದಿ ಬರಲು ಐದರಿಂದ ಆರು ದಿನ ಬೇಕಾಗುತ್ತೆ, ಸದ್ಯ ಒಮಿಕ್ರಾನ್ ಪಾಸಿಟಿವ್ ಬಂದ ವ್ಯಕ್ತಿಯ ಸಂಪರ್ಕದಲ್ಲಿದ್ದು ಪಾಸಿಟಿವ್ ಬಂದವರೆಲ್ಲರ ಸ್ಯಾಂಪಲ್ ಗಳನ್ನು ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗಿದೆ. ಕೊರೊನಾ ರಿಪೋರ್ಟ್ ಒಂದೇ ದಿನದಲ್ಲಿ ಬರುತ್ತೆ, ಆದರೆ ಜಿನೋಮ್ ಸೀಕ್ವೆನ್ಸ್ಂಗ್ ವರದಿಗೆ ಸಮಯ ಹಿಡಿಯುತ್ತದೆ. ನಾವು ನಿತ್ಯ 15 ಕ್ಕೂ ಹೆಚ್ಚು ಸ್ಯಾಂಪಲ್ ಗಳನ್ನು ಜೀನೋಮ್ ಸೀಕ್ವೆನ್ಸಿಂಗ್ಗೆ ಕಳಿಸುತ್ತಿದ್ದೇವೆ ಎಂದು ತಿಳಿಸಿದರು.
ಲಲಿತ್ ಅಶೋಕ ಹೋಟೆಲ್‌ನಲ್ಲಿ ವೈದ್ಯರ ಸಮಾವೇಶ :
ಲಲಿತ್ ಅಶೋಕ ಹೋಟೆಲ್ ನಲ್ಲಿ ವೈದ್ಯರುಗಳ ಸಮಾವೇಶದ ವಿಚಾರ ಬಿಬಿಎಂಪಿ ಗಮನಕ್ಕೆ ಬಂದಿದೆ. ಹಾಗಾಗಿ ಅವತ್ತಿನ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ಟೆಸ್ಟ್ ಮಾಡಲಾಗಿದೆ. ಜೊತೆಗೆ ಹೋಮ್ ಐಸೋಲೇಷನ್ಗೆ ರೆಫರ್ ಮಾಡಲಾಗಿದೆ. ಯಾವುದೇ ಸಭೆ ಸಮಾರಂಭಗಳನ್ನು ಸರ್ಕಾರದ ನಿಯಮನುಸಾರ ನಡೆಸಬೇಕು. ಶಾಲೆ ಕಾಲೇಜುಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವಂತಿಲ್ಲ, ತಪ್ಪಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ₹27 ಕೋಟಿ ತೆರಿಗೆ ಕಟ್ಟದ ಪ್ರತಿಷ್ಟಿತ ಮಂತ್ರಿ ಮಾಲ್ : ಮೂರನೇ ಬಾರಿಗೆ ಬಿತ್ತು ಬೀಗ