ETV Bharat / state

ಆಘಾತಕಾರಿ ಸಂಗತಿ: ಕೊರೊನಾ ಸೋಂಕು ಇದ್ರೂ 28 ದಿನದ ಬಳಿಕ ರೋಗಿ ಆಸ್ಪತ್ರೆಯಲ್ಲಿ ಇರುವಂತಿಲ್ಲ..? - ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು

ಇಪ್ಪತ್ತೆಂಟು ದಿನಗಳ ಬಳಿಕವೂ ಕೋವಿಡ್ ನೆಗೆಟಿವ್ ಬಾರದಿದ್ದರೂ ಅಥವಾ ಬಂದರೂ ರೋಗಿಗಳನ್ನು ಮನೆಗೆ ಕಳಿಸಲಾಗ್ತಿದೆ. ಆರಂಭದಲ್ಲಿ ಸಂಪೂರ್ಣವಾಗಿ ರೋಗಿ ಗುಣಮುಖವಾಗಿ ರಿಪೋರ್ಟ್ ನೆಗೆಟಿವ್ ಬಂದರಷ್ಟೇ ಮನೆಗೆ ಕಳಿಸಲಾಗ್ತಿತ್ತು.

BBMP Commissioner B.H. Anil Kumar
ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್
author img

By

Published : Jun 18, 2020, 8:15 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದ್ದು, ಗುಣಮುಖರಾಗುತ್ತಿರುವವರ ಪ್ರಮಾಣ ಕುಸಿಯುತ್ತಿದೆ. ಎಷ್ಟೇ ಬಾರಿ ಟೆಸ್ಟ್ ಮಾಡಿದರೂ ಕೆಲವು ರೋಗಿಗಳಿಗೆ ಪಾಸಿಟಿವ್ ಬರುತ್ತಿದೆ. ಆದರೆ ಆಘಾತಕಾರಿ ವಿಚಾರ ಅಂದ್ರೆ ಯಾವುದೇ ಸೋಂಕಿನ ಲಕ್ಷಣ ಇಲ್ಲದಿದ್ರೆ (ಅಸಿಮ್ಟಮ್ಯಾಟಿಕ್) ಆ ರೋಗಿಯನ್ನು 28 ದಿನದ ಬಳಿಕ ಡಿಸ್ಚಾರ್ಜ್​ ಮಾಡಲು ಆಸ್ಪತ್ರೆಗಳು ಮುಂದಾಗಿವೆ ಎಂದು ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.

ರೋಗಿಗಳ ಸಂಖ್ಯೆ ಹೆಚ್ಚಾದ್ರೆ , ಅಸಿಮ್ಟಮ್ಯಾಟಿಕ್ ಕೋವಿಡ್ ಆಗಿದ್ದರೆ, ಮನೆಯಲ್ಲಿ ಚಿಕಿತ್ಸೆ ನೀಡುವ ಕುರಿತು ಆರೋಗ್ಯ ಇಲಾಖೆ ಚಿಂತನೆ ನಡೆಸಿತ್ತು. ಇದೀಗ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕೆಲವು ರೋಗಿಗಳಿಗೆ ಪದೇ ಪದೆ ಟೆಸ್ಟ್ ಮಾಡಿದ್ರೂ ಕೋವಿಡ್ ರಿಸಲ್ಟ್ ಪಾಸಿಟಿವ್ ಬರುತ್ತಿದ್ದ ಕಾರಣ, ಕ್ವಾರಂಟೈನ್​​​​ನಲ್ಲೇ ಇಡಲಾಗಿತ್ತು. ಈ ಬಗ್ಗೆ ಚರ್ಚೆ ನಡೆದು ಕ್ವಾರಂಟೈನ್​​​ನಲ್ಲೇ ಇಡಬೇಕಾ ಅಥವಾ ಬಿಡುಗಡೆ ಮಾಡಬೇಕಾ ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.

ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್

ಕೆಲವೊಂದು ರೋಗಿಗಳನ್ನು 28 ದಿನಗಳಾದರೂ ಡಿಸ್ಚಾರ್ಜ್​ ಮಾಡಿಲ್ಲ. ಹಾಗಾಗಿ ಗುಣಮುಖರಾದವರ ಪ್ರಮಾಣ ಕಡಿಮೆ ತೋರಿಸುತ್ತಿತ್ತು. ಹೀಗಾಗಿ ವರದಿಯಲ್ಲೂ ಸಕ್ರಿಯ ಪ್ರಕರಣ ಎಂದು ತೋರಿಸುತ್ತಿದೆ. ಇಪ್ಪತ್ತೆಂಟು ದಿನದ ಬಳಿಕ ಯಾವುದೇ ಸೋಂಕಿನ ಲಕ್ಷಣ ಇಲ್ಲದಿದ್ರೆ, ಮನೆಗೆ ಕಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಇನ್ಮುಂದೆ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಡಿಸ್ಚಾರ್ಜ್​ ಆಗುವ ಸಾಧ್ಯತೆ ಇದೆ ಎಂದರು.

ಒಟ್ಟಿನಲ್ಲಿ ಕೊರೊನಾ ಸೋಂಕನ್ನು ಸಂಪೂರ್ಣವಾಗಿ ಗುಣಪಡಿಸುವ, ಚೇತರಿಕೆ ಮಾಡಿಕೊಳ್ಳುವ ಜವಾಬ್ದಾರಿ ಈಗ ಆಯಾ ವ್ಯಕ್ತಿಗೆ ಬಿಡಲಾಗಿದೆ. ಇಪ್ಪತ್ತೆಂಟು ದಿನಗಳ ಬಳಿಕವೂ ಕೋವಿಡ್ ನೆಗೆಟಿವ್ ಬಾರದಿದ್ದರೂ ಅಥವಾ ಬಂದರೂ ರೋಗಿಗಳನ್ನು ಮನೆಗೆ ಕಳಿಸಲಾಗ್ತಿದೆ. ಆರಂಭದಲ್ಲಿ ಸಂಪೂರ್ಣವಾಗಿ ರೋಗಿ ಗುಣಮುಖವಾಗಿ ರಿಪೋರ್ಟ್ ನೆಗೆಟಿವ್ ಬಂದರಷ್ಟೇ ಮನೆಗೆ ಕಳಿಸಲಾಗ್ತಿತ್ತು. ಮೂರು ಬಾರಿ ಟೆಸ್ಟ್ ಮಾಡಿ, ನೆಗೆಟಿವ್ ಬಂದ ಬಳಿಕ ಹದಿನಾಲ್ಕು ದಿನಕ್ಕೆ ಡಿಸ್ಚಾರ್ಜ್​ ಮಾಡಲಾಗುತ್ತಿತ್ತು.

ಆದ್ರೆ ರೋಗಿಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗ್ತಿರುವ ಕಾರಣ ಆರೋಗ್ಯ ಇಲಾಖೆ ಈ ನಿರ್ಲಕ್ಷ್ಯ ಧೋರಣೆಗೆ ಮುಂದಾಗಿದೆಯಾ ಎಂಬ ಪ್ರಶ್ನೆ ಹೊರ ಬಿದ್ದಿದೆ. ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ, ದೇಶದಲ್ಲಿ ಶೇ. 52.80 ಇದ್ದರೆ ಬೆಂಗಳೂರು ಹಿಂದಕ್ಕೆ ಉಳಿದಿದ್ದು, ಶೇ. 42 ರಷ್ಟು ಜನ ಮಾತ್ರ ಗುಣಮುಖರಾಗುತ್ತಿದ್ದಾರೆ.

ಮರಣ ಪ್ರಮಾಣವೂ ಏರಿಕೆಯಾಗಿದ್ದು, ಜೂನ್ ತಿಂಗಳಲ್ಲಿ ನಗರದ ಉತ್ತಮ ಸಾಧನೆ ಕಳಪೆಯಾಗಿದೆ. 834 ಸೋಂಕಿನ ಪ್ರಕರಣಗಳಿದ್ದು, ಗುಣಮುಖರಾಗಿದ್ದು, ಕೇವಲ 369 ಮಂದಿ. ಆದ್ರೆ ಇಷ್ಟೆಲ್ಲ ಸೌಲಭ್ಯಗಳಿರುವ ಬೆಂಗಳೂರಲ್ಲೇ ರೋಗಿಗಳನ್ನು ಇಪ್ಪತ್ತೆಂಟು ದಿನದ ಬಳಿಕ ಉಳಿಸಿಕೊಳ್ಳದಿರಲು ತೀರ್ಮಾನಿಸಿರುವುದು ಮಾತ್ರ ಆಘಾತಕಾರಿ ವಿಚಾರ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.