ETV Bharat / state

ಮಾ. 20ಕ್ಕೆ ಬಿಬಿಎಂಪಿ ಪೌರಕಾರ್ಮಿಕರಿಂದ ಪ್ರತಿಭಟನೆ: ಹೋರಾಟ ಬೆಂಬಲಿಸಲು ಅಪ್ಪಣ್ಣ ಕರೆ - ಇಎಸ್ ಐ ಸೌಲಭ್ಯ

ಬಿಬಿಎಂಪಿ ಪೌರಕಾರ್ಮಿಕರು ಪ್ರತಿಭಟನೆಗೆ ಸಜ್ಜು - ಮಾ. 20ಕ್ಕೆ ಪ್ರೊಟೆಸ್ಟ್​ - ಸರ್ಕಾರಕ್ಕೆ ಮತ್ತೊಂದು ಇಕ್ಕಟ್ಟು

ಪೌರಕಾರ್ಮಿಕರು
ಪೌರಕಾರ್ಮಿಕರು
author img

By

Published : Mar 15, 2023, 6:01 PM IST

ಮಾರ್ಚ್ 20ಕ್ಕೆ ಬಿಬಿಎಂಪಿ ಪೌರಕಾರ್ಮಿಕರು ಪ್ರತಿಭಟನೆಗೆ ಸಜ್ಜು

ಬೆಂಗಳೂರು: ಕೇವಲ ರಸ್ತೆ ಗುಡಿಸುವ ಪೌರಕಾರ್ಮಿಕರನ್ನು ಅಷ್ಟೇ ಅಲ್ಲದೆ, ಮನೆಗಳಿಂದ ಸಂಗ್ರಹಿಸುವ, ಸಾಗಿಸುವ ಆಟೋ ಚಾಲಕರು, ನಿರ್ವಾಹಕರನ್ನು ಕಾಯಂ ಮಾಡಬೇಕೆಂದು ಒತ್ತಾಯಿಸಿ ಪೌರಕಾರ್ಮಿಕರು ಮಾರ್ಚ್ 20 ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಬಿಬಿಎಂಪಿ ಕಸ ಸಾಗಣೆ ಕಾರ್ಮಿಕರು ಈಗಾಗಲೇ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಕೆಲವು ವರ್ಷಗಳಿಂದ ನೇರ ನೇಮಕಾತಿಗೆ, ಗುತ್ತಿಗೆದಾರರ ಕಪಿಮುಷ್ಠಿಯಿಂದ ಬಿಡಿಸಬೇಕೆಂದು ಬೇಡಿಕೆ ಇಟ್ಟಿದ್ದರು. ಕೇವಲ ರಸ್ತೆ ಗುಡಿಸುವವರನ್ನು ಪ್ರತ್ಯೇಕ ಮಾಡಿ, ಉಳಿದಂತೆ ಕಾಂಪ್ಯಾಕ್ಟರ್ ಚಾಲಕರು, ಆಟೋ ಟಿಪ್ಪರ್ ಚಾಲಕರು ಹಾಗೂ ಮನೆಯಿಂದ ಕಸ ಸಂಗ್ರಹಿಸುವ ಸಹಾಯಕರು ಲೋಡರ್ ಗಳನ್ನು ಮಾತ್ರ ಪ್ರತ್ಯೇಕಿಸಲಾಗಿತ್ತು.

ಬಿಬಿಎಂಪಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ: ಇತರ ಪೌರಕಾರ್ಮಿಕರಂತೆ ನೇರ ನೇಮಕಾತಿಗೆ ಒಳಪಡಿಸಬೇಕು. ಕೆಲಸ ಕಾಯಂಗೊಳಿಸಬೇಕೆಂಬುದು ಇವರ ಬಹು ವರ್ಷಗಳ ಬೇಡಿಕೆಯಾಗಿದೆ. ಈಗಾಗಲೇ ಮಾರ್ಚ್ 11 ರಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿಯೂ ಪ್ರತಿಭಟನೆ ನಡೆಸಿದ್ದರು. ಆದರೆ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆ ಮತ್ತೆ ಮಾರ್ಚ್ 20 ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಹೀಗಾಗಿ ಮನೆಗಳಿಂದ ಸಂಗ್ರಹಿಸುವ ಕಸವನ್ನು ಮಾರ್ಚ್ 20 ರಂದು ಹಾಗೇ ಉಳಿಯಲಿವೆ. ಪ್ರತಿನಿತ್ಯ ಬೆಳಗ್ಗೆ ಸ್ವಚ್ಛಗೊಳಿಸುವ ಬ್ಲಾಕ್ ಸ್ಪಾಟ್​ಗಳು ಕೂಡ ಹಾಗೆ ಇರಲಿವೆ. ನಗರಕ್ಕೆ ಮತ್ತೆ ಕಸದ ಸಮಸ್ಯೆ ಉಂಟಾಗಲಿದೆ ಎಂದು ಅಂದಾಜು ವ್ಯಕ್ತಪಡಿಸಲಾಗಿದೆ.

ಎಷ್ಟು ಪೌರಕಾರ್ಮಿಕರು: ಗುತ್ತಿಗೆ ಆಧಾರದಲ್ಲಿ ಈಗ 593 ಕಾಂಪ್ಯಾಕ್ಟರ್ ವಾಹನ ಚಾಲಕರು ಇದ್ದಾರೆ. 9,300 ಆಟೋ ಟಿಪ್ಪರ್ ಚಾಲಕರು, ಸಹಾಯಕರಿದ್ದಾರೆ. 1800 ಲೋಡರ್ ಗಳೂ ಇದ್ದು, ಇಷ್ಟು ಜನರನ್ನೂ ಕಾಯಂಗೊಳಿಸಬೇಕು ಎಂದು ಅಖಿಲ ಭಾರತ ಕೇಂದ್ರೀಯ ಕಾರ್ಮಿಕ ಸಂಘಗಳ ಒಕ್ಕೂಟ ಆಗ್ರಹಿಸಿದೆ. ಕಾಯಂ ಕೆಲಸ, ಪಿಎಫ್ ಸೌಲಭ್ಯ, ಇಎಸ್ ಐ ಸೌಲಭ್ಯವನ್ನು ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿದ್ದಾರೆ.

ತ್ಯಾಜ್ಯ ನಿರ್ವಹಣೆ ಬಿಬಿಎಂಪಿಗೆ ಪ್ರಮಾಣಪತ್ರ ಕೇಳಿದ ಹೈಕೋರ್ಟ್​ : ನಗರದಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಕ್ರಮಗಳು ಹಾಗೂ ನ್ಯಾಯಾಲಯ ಕಾಲ-ಕಾಲಕ್ಕೆ ನೀಡಿರುವ ಆದೇಶಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಮುಂದಿನ ಎರಡು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಪಿಸಿಬಿ) ಸೂಚನೆ ನೀಡಿದೆ.

ನಗರದಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 2022ರಲ್ಲಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ವಿಚಾರಣೆ ನಡೆಸಿದ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ಅಲ್ಲದೇ ನ್ಯಾಯಾಲಯದ ಈ ಹಿಂದಿನ ಆದೇಶದಂತೆ ನಗರದಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕಾಲ-ಕಾಲಕ್ಕೆ ಕೋರ್ಟ್ ನೀಡಿರುವ ಆದೇಶಗಳನ್ನು ಪಾಲಿಸಿರುವ ಹಾಗೂ ಇನ್ನೂ ಪಾಲಿಸಬೇಕಾದ ಆದೇಶಗಳು ಮುಂದೆ ಅನುಸರಿಸಬಹುದಾದ ಮಾರ್ಗಗಳ ಬಗ್ಗೆ ಸಲಹೆ ಪಟ್ಟಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಲಾಗಿತ್ತು. ಜತೆಗೆ ಯಾರೆಲ್ಲ ಇನ್ನೂ ಸಲ್ಲಿಸಿಲ್ಲ. ಅವರೂ ಸಹ ಎರಡು ವಾರಗಳಲ್ಲಿ ಪಟ್ಟಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿತು.

ಇದನ್ನೂಓದಿ:ಕರ್ನಾಟಕ ತಿಗಳ ಅಭಿವೃದ್ಧಿ ನಿಗಮ ರಚಿಸಿ ಸರ್ಕಾರದ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.