ETV Bharat / state

ಕೊರೊನಾ ಸೋಂಕಿತ ಮಕ್ಕಳಲ್ಲಿ ಗಂಭೀರತೆ ಕಂಡುಬಂದಿಲ್ಲ: ಪಾಲಿಕೆ ಮಕ್ಕಳ ತಜ್ಞರ ಸಮಿತಿ - ಕೊರೊನಾ 3ನೇ ಅಲೆ

ಸೋಂಕಿತ ಮಕ್ಕಳಲ್ಲಿ ಯಾವುದೇ ಗಂಭೀರತೆ ಕಂಡುಬಂದಿಲ್ಲ, ಕೊರೊನಾ ಸೋಂಕು ಪತ್ತೆಯಾದ ಬಹುತೇಕ ಮಕ್ಕಳಲ್ಲಿ ಸೌಮ್ಯ ರೋಗಲಕ್ಷಣಗಳು ಕಂಡುಬಂದಿದ್ದು, ತಮ್ಮಷ್ಟಕ್ಕೆ ತಾವೇ ಚೇತರಿಸಿಕೊಳ್ಳುತ್ತಾರೆಂದು ಬಿಬಿಎಂಪಿ ಮಕ್ಕಳ ತಜ್ಞರ ಸಮಿತಿ ವರದಿ ನೀಡಿದೆ.

bbmp child technical committee report about corona effect in children
ಕೊರೊನಾ ಸೋಂಕು
author img

By

Published : Aug 14, 2021, 10:22 PM IST

ಬೆಂಗಳೂರು: ನಗರದಲ್ಲಿ ಬೇರೆ ಬೇರೆ ವಯೋಮಾನದ ಕೊರೊನಾ ಸೋಂಕಿತರಿಗೆ ಹೋಲಿಸಿದರೆ, ಸೋಂಕಿತ ಮಕ್ಕಳಲ್ಲಿ ಗಂಭೀರತೆ ಕಂಡುಬಂದಿಲ್ಲವೆಂದು ಬಿಬಿಎಂಪಿ ಮಕ್ಕಳ ತಜ್ಞರ ಸಮಿತಿ ತಿಳಿಸಿದೆ.

ನಗರದಲ್ಲಿ ಕಳೆದ ನಾಲ್ಕು ತಿಂಗಳಿಂದ ದೃಢವಾದ ಕೊರೊನಾ ಸೋಂಕು ಪ್ರಕರಣಗಳ ಪೈಕಿ 0-18 ವರ್ಷದೊಳಗಿನವರ ಸೋಂಕು ಪಾಸಿಟಿವಿಟಿ ದರ ಶೇ.11 ಇದೆ. ಹೀಗಾಗಿ, ಪೋಷಕರು ಯಾವುದೇ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಸಮಿತಿ ಸಲಹೆ ನೀಡಿದೆ.

ಕಳೆದ 10 ದಿನಗಳಲ್ಲಿ ಪತ್ತೆಯಾದ ಕೊರೊನಾ ಸೋಂಕಿತರಲ್ಲಿ ಐದು ಮಕ್ಕಳು ಸರ್ಕಾರಿ ಮತ್ತು 24 ಮಕ್ಕಳು ಖಾಸಗಿ ಕೋಟಾದಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟು ಸೋಂಕು ಪ್ರಕರಣದ ಶೇ.5.7 ಮಕ್ಕಳು ಮಾತ್ರ ಆಸ್ಪತ್ರೆಗೆ ದಾಖಲಾತಿಯಾಗಿದ್ದು, ಬೇರೆ ವಯೋಮಾನದ ಸೋಂಕಿತರಿಗೆ ಹೋಲಿಸಿದರೆ ಇದು ಕಡಿಮೆ ಇದೆ ಎಂದು ಹೇಳಿದೆ.

ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚಳವಾಗಿದ್ದರೂ, ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ನಗರದಲ್ಲಿ ಕಳೆದ 20 ದಿನಗಳಲ್ಲಿ ನಿತ್ಯ ಸರಾಸರಿ 388(350-400) ಸೋಂಕು ಪತ್ತೆಯಾಗುತ್ತಿದೆ. 0-12 ವಯಸ್ಸಿನ ಮಕ್ಕಳಿಗೆ ಜೂನ್‌ನಲ್ಲಿ 2,643, ಜುಲೈನಲ್ಲಿ 778 ಮತ್ತು ಆ.13ರ ಅಂತ್ಯಕ್ಕೆ 309 ಸೋಂಕು ಕಂಡುಬಂದಿದೆ. ಇದಕ್ಕೆ ಹೋಲಿಕೆ ಮಾಡಿದಲ್ಲಿ ಮಕ್ಕಳ ಸೋಂಕು ಪ್ರಮಾಣ ಇಳಿಕೆಯಾಗಿದೆ.

ಆಗಸ್ಟ್ ತಿಂಗಳಲ್ಲಿ 0-18 ವರ್ಷದ 511 ಮಕ್ಕಳಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ. 11.5ರಷ್ಟಿದೆ. ಏಪ್ರಿಲ್‌ನಿಂದ ಜೂನ್‌ವರೆಗೆ 14 ಮಕ್ಕಳು ಸಾವನ್ನಪ್ಪಿದ್ದು, ಜುಲೈ ಮತ್ತು ಆಗಸ್ಟ್​ನಲ್ಲಿ ಯಾರೂ ಮೃತರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಶೀಘ್ರ 30 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ:

ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್​ ಪ್ರಕಟಿಸಿದ ಜಾಗತಿಕ ದತ್ತಾಂಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಶೇ. 14.3 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ ಕೇವಲ ಶೇ.1.9 ಮಕ್ಕಳು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಬೆಂಗಳೂರಲ್ಲಿ ಜಾಗತಿಕ ದತ್ತಾಂಶಕ್ಕಿಂತಲೂ ಕಡಿಮೆ ಸೋಂಕು ವರದಿಯಾಗುತ್ತಿದೆ. ಸೋಂಕಿತ ಮಕ್ಕಳ ಆರೈಕೆಗೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಸೇರಿದಂತೆ 7 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಜತೆಗೆ, ಬಿಬಿಎಂಪಿ ವತಿಯಿಂದ ಮಕ್ಕಳ ಆರೈಕೆಗೆ ಶೀಘ್ರ 30 ಹಾಸಿಗೆಗಳ ಸಾಮರ್ಥ್ಯವಿರುವ ಆಸ್ಪತ್ರೆ ವ್ಯವಸ್ಥೆ ಮಾಡಲಿದೆ ಎಂದು ತಿಳಿಸಿದೆ.

ಭಯಪಡುವ ಅಗತ್ಯವಿಲ್ಲ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.