ETV Bharat / state

ಎಐಸಿಸಿಗೆ ಕ್ಯಾಬಿನೆಟ್ ಅಡಿಯಾಳಾಗಿಸಿ ರಾಜ್ಯದ ಜನತೆಗೆ ಅಪಮಾನ: ಸಿಎಂ ವಿರುದ್ಧ ಬೊಮ್ಮಾಯಿ ವಾಗ್ದಾಳಿ

ದೆಹಲಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್​ ಸಭೆಯಲ್ಲಿ ಕಾಂಗ್ರೆಸ್​ ನಾಯಕರು ಭಾಗಿಯಾಗಿದ್ದರು. ಹೈಕಮಾಂಡ್​ ಮುಂದೆ ತಲೆಬಾಗುವ ಮೂಲಕ ಸಿಎಂ ಸಿದ್ದರಾಮಯ್ಯ ಬಹಳ ವೀಕ್​ ಆಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

author img

By

Published : Aug 3, 2023, 5:39 PM IST

Updated : Aug 3, 2023, 5:57 PM IST

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯ ವಿರುದ್ಧ ಬಸವರಾಜ ಬೊಮ್ಮಾಯಿ ವಾಗ್ದಾಳಿ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಆಡಳಿತ ಸಂಪೂರ್ಣವಾಗಿ ದೆಹಲಿಯಿಂದ ನಡೆಯುತ್ತಿದೆ. ಇಡೀ ಸಚಿವ ಸಂಪುಟವೇ ಎಐಸಿಸಿ ಕಚೇರಿ ಸಭೆಯಲ್ಲಿ ಭಾಗಿಯಾಗಿರುವುದೇ ಇದಕ್ಕೆ ನಿದರ್ಶನ. ರಾಜ್ಯದಲ್ಲಿ ಸಚಿವ ಸಂಪುಟವೇ ಸುಪ್ರೀಂ, ಅಂತಹ ಸಂಪುಟವನ್ನೇ ಎಐಸಿಸಿ ಅಡಿಯಾಳಾಗಿಸಿ ರಾಜ್ಯದ ಜನತೆಗೆ ಸಿದ್ದರಾಮಯ್ಯ ಸರ್ಕಾರ ಅಪಮಾನ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಆಡಳಿತಾರೂಢ ಪಕ್ಷವೊಂದು ಇಡೀ ಸಚಿವ ಸಂಪುಟವನ್ನು ದೆಹಲಿಗೆ ತೆಗೆದುಕೊಂಡು ಹೋಗಿ ಈ ರೀತಿ ಹೈಕಮಾಂಡ್ ಮುಂದೆ ತಲೆಬಾಗುವ ಕೆಲಸ ಆಗಿರುವುದು ಬಹಳ ವಿರಳ. ಮೊದಲ ದಿನದಿಂದಲೂ ಹೈಕಮಾಂಡ್​ ನಿರ್ದೇಶನವನ್ನು ಪಾಲಿಸುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದರು.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗುವುದು. ಇಡೀ ಸಂಪುಟ ಎಐಸಿಸಿಗೆ ಹೋಗಿ ಸಭೆ ಮಾಡುವುದು ನೋಡಿದರೆ ಇದು ಸ್ಪಷ್ಟ ಬಹುಮತ ಕೊಟ್ಟ ರಾಜ್ಯದ ಜನತೆ ಅಪಮಾನ ಮಾಡಿದಂತಾಗಿದೆ. ಎಲ್ಲದರಲ್ಲಿಯೂ ಹೈಕಮಾಂಡ್ ಹಸ್ತಕ್ಷೇಪ ನಡೆಯುತ್ತಿದೆ. ಇಲ್ಲಿಯ ಅವ್ಯವಹಾರ ನಿಯಂತ್ರಣ ಮಾಡಲಾಗದ ಕುರಿತು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆದ ಮೇಲೆ ದಿಲ್ಲಿಯಿಂದ ಕರ್ನಾಟಕದ ಆಡಳಿತ ನಡೆಯುತ್ತಿರುವುದು ಸ್ಪಷ್ಟವಾಗಿದೆ ಎಂದು ಬೊಮ್ಮಾಯಿ ಟೀಕಿಸಿದ್ದಾರೆ.

ಚುನಾವಣೆಗೂ ಮೊದಲು ಕರ್ನಾಟಕದ ಅಸ್ಮಿತೆ ಹಾಗು ಕನ್ನಡದ ಅಸ್ಮಿತೆಯ ಬಗ್ಗೆ ಸಿದ್ದರಾಮಯ್ಯ ಬಹಳ ಮಾತನಾಡುತ್ತಿದ್ದರು. ಆದರೆ ಇಂದು ತಮ್ಮ ಇಡೀ ಸಚಿವ ಸಂಪುಟವನ್ನೇ ತೆಗೆದುಕೊಂಡು ಹೋಗಿ ದೆಹಲಿಯಲ್ಲಿ ಅಡಿಯಾಳಾಗಿ ಇಟ್ಟಿರುವುದು ಕನ್ನಡದ ಅಸ್ಮಿತೆಗೆ ಧಕ್ಕೆಯಾಗಿಲ್ಲವಾ? ಇದರಿಂದಾಗಿ ಹಲವಾರು ಹಿರಿಯ ಕಾಂಗ್ರೆಸ್ಸಿಗರೂ ತಲೆ ತಗ್ಗಿಸುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಸಿದ್ದರಾಮಯ್ಯ ಬಹಳ ವೀಕ್ ಆಗಿದ್ದಾರೆ : ಸಿದ್ದರಾಮಯ್ಯ ಒನ್, ಟು ಸರ್ಕಾರದಲ್ಲಿ ಬಹಳ ವ್ಯತ್ಯಾಸ ಇದೆ. ಮೊದಲಿದ್ದ ಸಿದ್ದರಾಮಯ್ಯ ಬೇರೆ, ಈಗಿನ ಸಿದ್ದರಾಮಯ್ಯ ಬೇರೆ. ವರಿಷ್ಠರ ಬಳಿ ಸಿದ್ದರಾಮಯ್ಯ ತಲೆ ಬಾಗಿರುವುದು ಬಹಳ ವಿರಳ. ಆದರೆ ಈಗ ಸಿಎಂ ಬಹಳ ವೀಕ್ ಆಗಿದ್ದಾರೆ. ಸಿದ್ದರಾಮಯ್ಯ ನೇಚರ್ ಬೇರೆ, ಅವರು ಮೊದಲಿನ ತರ ಸಿಡಿದೇಳುತ್ತಿಲ್ಲ. ಈಗ ವರಿಷ್ಠರ ಮಾತನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಾರೆ. ಸರ್ಕಾರದಲ್ಲಿ ಹೈಕಮಾಂಡ್ ನಿಂದಲೂ ಹಸ್ತಕ್ಷೇಪ ನಡೆಯುತ್ತಿದೆ. ಸರ್ಕಾರದ ರಿಮೋಟ್ ಕಾಂಗ್ರೆಸ್​ನ ಹೈಕಮಾಂಡ್ ಕೈಯಲ್ಲಿದೆ ಎಂದರು.

ಕಾಂಗ್ರೆಸ್​ ಸರ್ಕಾರ ಸರಿಯಲ್ಲ : ಅಧಿಕಾರಕ್ಕೆ ಬಂದ ಎರಡೇ ತಿಂಗಳಿನಲ್ಲಿ ಯಾಕೆ ಇಂತಹ ಸಭೆ ಮಾಡಬೇಕು. ಮೊದಲ ದಿನದಿಂದಲೇ ಎಲ್ಲವೂ ಸರಿಯಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಸಚಿವರು, ಶಾಸಕರ ನಡುವೆ ಹಾಗು ಸಚಿವರು, ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲ. ವರ್ಗಾವಣೆ ದಂಧೆ ಹಗಲು ದರೋಡೆ ರೀತಿ ನಡೆಯುತ್ತಿದ್ದು, ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರೇ ಈ ಬಗ್ಗೆ ದೂರು ಕೊಟ್ಟರೂ ಸಿಎಂಗೆ ಏನೂ ಮಾಡಲು ಸಾಧ್ಯವಾಗಿಲ್ಲ.

ಹಲವಾರು ಇಲಾಖೆಗಳಲ್ಲಿ ವರ್ಗಾವಣೆ ಮಾಡುವುದು ತಡೆ ಹಿಡಿಯುವುದು ನಡೆಯುತ್ತಿದೆ. ಇದರಲ್ಲಿ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಬಹಳ ಸ್ಪಷ್ಟವಾಗಿ ಕಾಣುತ್ತಿದೆ. ಇದು ಆಡಳಿತದಲ್ಲಿ ದೊಡ್ಡ ಪರಿಣಾಮ ಬೀರುತ್ತಿದೆ. ರಾಜ್ಯದಲ್ಲಿ ಸದ್ಯ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ಬರ, ನೆರೆ ಎದುರಾಗಿದೆ. ಆಡಳಿತದಲ್ಲಿ ಚುರುಕುಗೊಳಿಸಿ ಕೆಲಸ ಮಾಡಬೇಕಾದ ಇಂತಹ ಸಂದರ್ಭದಲ್ಲಿ ಈ ರೀತಿ ಆಡಳಿತದ ವೈಫಲ್ಯ ನೋಡುವಂತಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬೊಮ್ಮಾಯಿ ಕಿಡಿಕಾರಿದರು. ಬಳಿಕ ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ ಅಸಮಧಾನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಸವರಾಜ್ ರಾಯರೆಡ್ಡಿ, ದೊಡ್ಡ ಮೇದಾವಿ. ಅವರ ಮಾತಿಗೆ ವಿಶ್ಲೇಷಣೆ ಬಗ್ಗೆ ಅವರೇ ಹೇಳಬೇಕು ಎಂದು ಟಾಂಗ್ ಕೊಟ್ಟರು.

ಸಾರಿಗೆ ಇಲಾಖೆಯ ಆದೇಶ : ರಾಜ್ಯದ ಜನರ ದಾರಿ ತಪ್ಪಿಸಿ ರಾಜಕಾರಣ ಮಾಡುವ ಅವಶ್ಯಕತೆ ನನಗಿಲ್ಲ. ಸಾರಿಗೆ ಇಲಾಖೆಯ ಆದೇಶ ನೋಡಿಯೇ ರಾಜ್ಯದ ಜನತೆಗೆ ಸತ್ಯ ಹೇಳುವ ಕೆಲಸ ಮಾಡಿದ್ದೇನೆ ಎಂದು ಟ್ವೀಟ್​ ಮಾಡುವ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಮಾಜಿ ಸಿಎಂ ತಿರುಗೇಟು ಕೊಟ್ಟಿದ್ದಾರೆ. ಶಕ್ತಿ ಯೋಜನೆ ಅಡಿ ರಾಜ್ಯದಲ್ಲಿ ಮಹಿಳೆಯರು ಸಾರಿಗೆ ನಿಗಮದ ಬಸ್​ಗಳಲ್ಲಿ ಜೂನ್ ತಿಂಗಳಲ್ಲಿ 20 ದಿನ ಉಚಿತ ಪ್ರಯಾಣ ಮಾಡಿರುವುದರಿಂದ ನಾಲ್ಕು ಸಾರಿಗೆ ನಿಗಮಗಳಿಗೆ 250 ಕೋಟಿ ರೂ. ವೆಚ್ಚವಾಗಿದ್ದು, ಪ್ರಯಾಣ ವೆಚ್ಚದ ಮರು ಪಾವತಿ ಮಾಡಲು ನಾಲ್ಕೂ ನಿಗಮಗಳಿಗೆ ಆಗಸ್ಟ್ 1 ರಂದು 125 ಕೋಟಿ ಬಿಡುಗಡೆ ಮಾಡಿ ನಿಮ್ಮದೇ ಇಲಾಖೆ ಆದೇಶ ಮಾಡಿದೆ.

ಸಾರಿಗೆ ನಿಗಮಗಳ ಬೇಡಿಕೆಗೂ ಸರ್ಕಾರ ಬಿಡುಗಡೆ ಮಾಡಿರುವ ಅನುದಾನಕ್ಕೂ ಅರ್ಧದಷ್ಟು ಕಡಿಮೆ ಇದ್ದು, ಹೀಗಿರುವಾಗ ಮೊದಲೇ ನಷ್ಟದಲ್ಲಿ ನಡೆಯುತ್ತಿರುವ ಸಾರಿಗೆ ನಿಗಮಗಳಿಗೆ ಸಿಬ್ಬಂದಿ ಸಂಬಳ, ಬಸ್​ಗಳ ನಿರ್ವಹಣೆ, ಡೀಸೆಲ್​ಗೆ ಹಣದ ಕೊರತೆಯಾಗುವುದು ವಾಸ್ತವಿಕ ಸತ್ಯ. ಆ ಸತ್ಯವನ್ನೇ ನಾನು ರಾಜ್ಯದ ಜನತೆಗೆ ತಿಳಿಸಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಖರ್ಗೆ, ಖಂಡ್ರೆ ಕುರಿತು ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆಗೆ ಆಪ್​ನಿಂದಲೂ ಖಂಡನೆ: ಕೈ ನಾಯಕರ ಕ್ಷಮೆಯಾಚಿಸಿದ ಬಿಜೆಪಿ

Last Updated : Aug 3, 2023, 5:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.